ಶಂಕರ್‌ ನಿರ್ದೇಶನದಲ್ಲಿ ರಾಮ್‌ ಚರಣ್‌ ನಟಿಸಿರುವ ‘ಗೇಮ್‌ ಚೇಂಜರ್‌’ ತೆಲುಗು ಸಿನಿಮಾದ ‘ಜರಗಂಡಿ’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಥಮನ್‌ ಸಂಗೀತ ಸಂಯೋಜನೆಯ ಹಾಡಿಗೆ ದಲೇರ್‌ ಮೆಹಂದಿ ಮತ್ತು ಸುನಿಧಿ ಚೌವ್ಹಾಣ್‌ ದನಿಯಾಗಿದ್ದಾರೆ. ಪ್ರಭುದೇವ ನೃತ್ಯ ಸಂಯೋಜನೆಗೆ ರಾಮ್‌ ಚರಣ್‌ ಮತ್ತು ಕಿಯಾರಾ ಅಡ್ವಾಣಿ ಹೆಜ್ಜೆ ಹಾಕಿದ್ದಾರೆ.

ರಾಮ್‌ ಚರಣ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಗೇಮ್‌ ಚೇಂಜರ್‌’ ತೆಲುಗು ಚಿತ್ರದಿಂದ ‘ಜರಗಂಡಿ’ ಲಿರಿಕಲ್‌ ಹಾಡು ಬಿಡುಗಡೆಯಾಗಿದೆ. ರಾಮ್‌ ಚರಣ್‌ ಹುಟ್ಟುಹಬ್ಬದ ಅಂಗವಾಗಿ ಈ ಗೀತೆಯನ್ನು ಬಿಡುಗಡೆ ಮಾಡಲಾಗಿದ್ದು, ಥಮನ್‌ ಎಸ್‌ ಸಂಗೀತ ಸಂಯೋಜಿಸಿದ್ದಾರೆ. ದಲೇರ್ ಮೆಹಂದಿ ಮತ್ತು ಸುನಿಧಿ ಚೌವ್ಹಾಣ್‌ ಹಾಡಿರುವ ಗೀತೆಗೆ ರಾಮ್‌ ಚರಣ್‌ ಮತ್ತು ಕಿಯಾರಾ ಅಡ್ವಾಣಿ ಹೆಜ್ಜೆ ಹಾಕಿದ್ದಾರೆ. ಪ್ರಭುದೇವ ನೃತ್ಯ ನಿರ್ದೇಶನ ಮಾಡಿರುವ ಈ ಹಾಡು ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ತೆಲುಗು ಆವೃತ್ತಿಗೆ ಸುನಿಧಿ ಚೌಹಾಣ್ ಧ್ವನಿ ನೀಡಿದ್ದರೆ, ತಮಿಳಿಗೆ ಪೂಜಾ ವೆಂಕಟ್ ಧ್ವನಿ ನೀಡಿದ್ದಾರೆ. ಈ ಚಿತ್ರದಲ್ಲಿ ಅಂಜಲಿ, ಸಮುದ್ರಕನಿ, ಎಸ್ ಜೆ ಸೂರ್ಯ, ಶ್ರೀಕಾಂತ್ ಮತ್ತು ಸುನೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಶಂಕರ್‌ ನಿರ್ದೇಶನದ ಈ ಚಿತ್ರಕ್ಕೆ ಕಾರ್ತಿಕ್ ಸುಬ್ಬರಾಜ್ ಅವರ ಕತೆ, ಎಸ್ ಯು ವೆಂಕಟೇಶನ್, ಫರ್ಹಾದ್ ಸಾಮ್ಜಿ ಮತ್ತು ವಿವೇಕ್ ಚಿತ್ರಕಥೆ ರಚಿಸಿದ್ದಾರೆ. ಎಸ್ ತಿರುನಾವುಕ್ಕರಸು ಅವರ ಛಾಯಾಗ್ರಹಣ ಮತ್ತು ಶಮೀರ್ ಮೊಹಮ್ಮದ್ ಸಂಕಲನ ನಿರ್ವಹಿಸುತ್ತಿದ್ದಾರೆ, ರಾಜು ಮತ್ತು ಶಿರೀಶ್ ಚಿತ್ರವನ್ನು ನಿರ್ಮಿಸಿದ್ದಾರೆ. ಡಿಸೆಂಬರ್ 25, 2024ರ ಕ್ರಿಸ್‌ಮಸ್‌ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

LEAVE A REPLY

Connect with

Please enter your comment!
Please enter your name here