ರೋಹಿತ್‌ ಶೆಟ್ಟಿ ನಿರ್ದೇಶನದ ‘ಸಿಂಗಂ ಎಗೇನ್‌’ ಹಿಂದಿ ಸಿನಿಮಾದಲ್ಲಿನ ದೀಪಿಕಾ ಪಡುಕೋಣೆ ಪಾತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಅಜಯ್‌ ದೇವಗನ್‌ ಹೀರೋ ಆಗಿ ನಟಿಸುತ್ತಿರುವ ಈ ಆಕ್ಷನ್‌ – ಥ್ರಿಲ್ಲರ್‌ ಚಿತ್ರದ ವಿಶೇಷ ಪಾತ್ರಗಳಲ್ಲಿ ರಣವೀರ್‌ ಸಿಂಗ್‌ ಮತ್ತು ಅಕ್ಷಯ್‌ ಕುಮಾರ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಅಜಯ್ ದೇವಗನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಹಿಂದಿ ಚಿತ್ರ ‘ಸಿಂಗಂ ಎಗೇನ್‌’ ತಂಡದಿಂದ ದೀಪಿಕಾ ಪಡುಕೋಣೆ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ‘ಶಕ್ತಿ ಶೆಟ್ಟಿ’ ಎಂಬ ಪಾತ್ರದ ಮೂಲಕ ದೀಪಿಕಾ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ರೋಹಿತ್‌ ಶೆಟ್ಟಿ ಅವರು ದೀಪಿಕಾರ ಫಸ್ಟ್‌ಲುಕ್‌ ಪೋಸ್ಟರ್‌ ಹಂಚಿಕೊಂಡು, ‘ಹೆಣ್ಣು ಸೀತೆ ಮತ್ತು ದುರ್ಗೆಯ ರೂಪ. ನಮ್ಮ ಪೊಲೀಸ್ ಜಗತ್ತಿನ ಅತ್ಯಂತ ಕ್ರೂರ ಅಧಿಕಾರಿಯನ್ನು ನೀವೀಗ ಭೇಟಿ ಮಾಡಬಹುದು. ಹೆಸರು ‘ಶಕ್ತಿ ಶೆಟ್ಟಿ’. ನನ್ನ ಲೇಡಿ ಸಿಂಗಂ, ದೀಪಿಕಾ ಪಡುಕೋಣೆ’ ಎಂದು ಕ್ಯಾಪ್ಶನ್‌ ನೀಡಿದ್ದಾರೆ. Reliance Entertainment ದೀಪಿಕಾ ಪೋಸ್ಟರ್‌ ಹಂಚಿಕೊಂಡು ‘ಲೇಡಿ ಸಿಂಗಂ ದೀಪಿಕಾ ಪಡುಕೋಣೆ ಅವರಿಗೆ ಸ್ವಾಗತ’ ಎಂದು ಕ್ಯಾಪ್ಶನ್‌ ಬರೆದಿದೆ. ‘ಸಿಂಗಂ’ ಚಿತ್ರದ ಸೀಕ್ವೆಲ್‌ ಆದ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ‘ಬಾಜಿರಾವ್ ಸಿಂಗಂ’ ಪಾತ್ರದಲ್ಲಿ ಅಜಯ್ ದೇವಗನ್‌ ಕಾಣಿಸಿಕೊಳ್ಳಲಿದ್ದಾರೆ. ಕರೀನಾ‌ ಕಪೂರ್ ಸಿಂಗಂ ಪತ್ನಿಯಾಗಿ ನಟಿಸಿದ್ದು, ರಣವೀರ್ ಸಿಂಗ್ ಮತ್ತು ಅಕ್ಷಯ್ ಕುಮಾರ್ ಸಹ ವಿಶೇಷ ಪಾತ್ರಗಳಲ್ಲಿ ಇರಲಿದ್ದಾರೆ.

LEAVE A REPLY

Connect with

Please enter your comment!
Please enter your name here