‘ಸಿಂಗಂ ಎಗೇನ್‌’ ಹಿಂದಿ ಸಿನಿಮಾದಲ್ಲಿನ ರಣವೀರ್‌ ಸಿಂಗ್‌ ಅವರ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ರಣವೀರ್‌ ‘ಸಿಂಬಾ’ ಪಾತ್ರದೊಂದಿಗೆ ಮತ್ತೆ ಆಕ್ಷನ್‌ಗೆ ಮರಳುತ್ತಿದ್ದಾರೆ. ರೋಹಿತ್‌ ಶೆಟ್ಟಿ ನಿರ್ದೇಶನದ ಈ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ದೀಪಿಕಾ ಪಡುಕೋಣೆ, ಅಜಯ್‌ ದೇವಗನ್‌, ಅಕ್ಷತ್‌ ಕುಮಾರ್‌, ಟೈಗರ್‌ ಶ್ರಾಫ್‌, ಕರೀನಾ ಕಪೂರ್‌ ನಟಿಸುತ್ತಿದ್ದಾರೆ.

ರೋಹಿತ್‌ ಶೆಟ್ಟಿ ನಿರ್ದೇಶನದ ‘ಸಿಂಗಂ ಎಗೇನ್‌’ ಹಿಂದಿ ಚಿತ್ರದಲ್ಲಿನ ರಣವೀರ್‌ ಸಿಂಗ್‌ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಅಜಯ್‌ ದೇವಗನ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ‘ಸಿಂಗಂ’ ಚಿತ್ರದ ಸೀಕ್ವೆಲ್‌ ಇದು. ಚಿತ್ರನಿರ್ಮಾಪಕರು ರಣವೀರ್ ಸಿಂಗ್ ಫಸ್ಟ್‌ಲುಕ್‌ ಬಿಡುಗಡೆ ಮಾಡಿದ್ದು, ರಣವೀರ್‌ ಅವರ ‘ಸಂಗ್ರಾಮ್ ಸಿಂಬಾ ಭಲೇರಾವ್’ ಪಾತ್ರದೊಂದಿಗೆ ಪರಿಚಯಿಸಿದೆ. ಅಂದರೆ ‘ಸಿಂಬಾ’ ಪಾತ್ರವನ್ನು ಪುನರಾವರ್ತಿಸುತ್ತಿದೆ. ಇತ್ತೀಚೆಗಷ್ಟೇ ಚಿತ್ರತಂಡ ದೀಪಿಕಾ ಪಡುಕೋಣೆ ಅವರನ್ನು ‘ಶಕ್ತಿ ಶೆಟ್ಟಿ’ ಪಾತ್ರದೊಂದಿಗೆ ಲೇಡಿ ಸಿಂಗಂ ಆಗಿ ಪರಿಚಯಿಸಿತ್ತು.

‘ಸಿಂಗಂ ಎಗೇನ್’ ಚಿತ್ರವು ಅಜಯ್ ದೇವಗನ್ ಅವರ ‌’ಸಿಂಗಂ’ ಸಿನಿಮಾದ ಸೀಕ್ವೆಲ್‌ ಆಗಿದೆ. ಇದು 2011ರ ‘ಸಿಂಗಂ’ ಚಿತ್ರದೊಂದಿಗೆ ಪ್ರಾರಂಭವಾಯಿತು. ನಂತರ ‘ಸಿಂಗಮ್ ರಿಟರ್ನ್ಸ್’ ಎರಡನೇ ಭಾಗವಾಗಿದ್ದು, ರಣವೀರ್ ಸಿಂಗ್ ಅವರ ‘ಸಿಂಬಾ’ (2018) ಮತ್ತು ಅಕ್ಷಯ್ ಕುಮಾರ್ ನಟಿಸಿದ ‘ಸೂರ್ಯವಂಶಿ’ (2021) ಜೊತೆಗೆ ಎರಡು ಚಲನಚಿತ್ರಗಳು ರೋಹಿತ್‌ ಶೆಟ್ಟಿ ಅವರ ಪೊಲೀಸ್‌ ಕಥೆಯಾಧಾರಿತ ಸಿನಿಮಾಗಳಾಗಿವೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಅಜಯ್‌ ದೇವಗನ್‌, ಅಕ್ಷಯ್‌ ಕುಮಾರ್‌ ಟೈಗರ್ ಶ್ರಾಫ್ ಮತ್ತು ಕರೀನಾ ಕಪೂರ್ ಖಾನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ರೋಹಿತ್ ಶೆಟ್ಟಿ ‘ಇಂಡಿಯನ್ ಪೋಲೀಸ್ ಫೋರ್ಸ್’ ಎಂಬ Prime Video ಸರಣಿಯನ್ನು ರಚಿಸುತ್ತಿದ್ದು, ಸಿದ್ಧಾರ್ಥ್ ಮಲ್ಹೋತ್ರಾ ನಾಯಕನಾಗಿ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here