ಬೋಯಪಾಟಿ ಶ್ರೀನು ನಿರ್ದೇಶನದ ‘ಸ್ಕಂದ’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ರಾಮ್‌ ಪೋತಿನೇನಿ ಮತ್ತು ಶ್ರೀಲೀಲಾ ನಟನೆಯ ಸಿನಿಮಾ ಸೆಪ್ಟೆಂಬರ್‌ 15ರಂದು ತೆರೆಕಾಣಲಿದೆ.

ರಾಮ್‌ ಪೋತಿನೇನಿ ಮತ್ತು ಶ್ರೀಲೀಲಾ ಅಭಿನಯದ ‘ಸ್ಕಂದ’ ತೆಲುಗು ಆಕ್ಷನ್‌ – ಥ್ರಿಲ್ಲರ್‌ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಬೋಯಪಾಟಿ ಶ್ರೀನು ನಿರ್ದೇಶನದ ಚಿತ್ರಕ್ಕೆ ತಮನ್‌ ಎಸ್‌ ಸಂಗೀತ ಸಂಯೋಜಿಸಿದ್ದಾರೆ. ಟ್ರೈಲರ್‌ನಲ್ಲಿ ರಾಮ್‌ ಪೋತಿನೇನಿ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಲೀಲಾ ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಲವ್‌, ಸೆಂಟಿಮೆಂಟ್‌, ಆಕ್ಷನ್‌, ರೊಮ್ಯಾನ್ಸ್‌ ಎಲ್ಲಾ ಪ್ಯಾಕೇಜ್‌ ಇರುವ ಸೂಚನೆ ನೀಡುತ್ತದೆ ಟ್ರೈಲರ್‌. ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ನಂದಮೂರಿ ಬಾಲಕೃಷ್ಣ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಟ್ರೇಲರ್‌ ಬಿಡುಗಡೆ ಮಾಡಿದ್ದಾರೆ.

ZEE Studious ತನ್ನ ಅಧಿಕೃತ ಖಾತೆಯಲ್ಲಿ ಟ್ರೇಲರ್ ಕುರಿತು ಮಾಹಿತಿ ಹಂಚಿಕೊಂಡಿದ್ದು, ಚಿತ್ರದ ಟ್ರೈಲರ್ ತಮಿಳು, ಹಿಂದಿ, ಕನ್ನಡ, ಮಲಯಾಳಂ ಭಾಷೆಗಳಲ್ಲಿ‌ ಲಭ್ಯವಿದೆ. ಚಿತ್ರದಲ್ಲಿ ರಾಮ್‌ ಪೋತಿನೇನಿ ತೆಲಂಗಾಣದ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡತಿ ಶ್ರೀಲೀಲಾ ನಾಯಕಿ. ಸಾಯಿ ಮಂಜ್ರೇಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು Srinivasaa Silver Screen ಬ್ಯಾನರ್‌ ಅಡಿ ಶ್ರೀನಿವಾಸ ಚಿತ್ತೂರಿ ನಿರ್ಮಿಸಿದ್ದಾರೆ. ಮೂಲ ತೆಲುಗು ಸೇರಿದಂತೆ ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸೆಪ್ಟೆಂಬರ್ 15ರಂದು ಸಿನಿಮಾ ತೆರೆಕಾಣಲಿದೆ.

Previous articleಆಯಿರತೊನ್ನ್ ನುಣಗಳ್ | ಸುಳ್ಳುಗಳ ಸುರುಳಿ ಬಿಚ್ಚಿ ಸತ್ಯಶೋಧನೆ
Next articleಸಿಂಗಾಪುರ ಕನ್ನಡ ಸಂಘ ಸದಸ್ಯರ ‘ವಿರಾಟಪುರ ವಿರಾಗಿ’ ಸಂವಾದ

LEAVE A REPLY

Connect with

Please enter your comment!
Please enter your name here