ಅನೂಪ್‌ ಭಂಡಾರಿ ನಿರ್ದೇಶನದಲ್ಲಿ ಸುದೀಪ್‌ ನಟಿಸಿರುವ ‘ವಿಕ್ರಾಂತ್‌ ರೋಣ’ 3D ಚಿತ್ರವನ್ನು ಉತ್ತರ ಭಾರತದಲ್ಲಿ ನಟ ಸಲ್ಮಾನ್‌ ಖಾನ್‌ರ SKF ಪ್ರಸ್ತುತಪಡಿಸಲಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ 28ರಂದು ಸಿನಿಮಾ ಬಿಡುಗಡೆಯಾಗಲಿದೆ.

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಟೀಸರ್ ಗಮನ ಸೆಳೆದಿದ್ದು, ಜುಲೈ 28 ರಂದು ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರವನ್ನು ಈಗ ಉತ್ತರ ಭಾರತದಲ್ಲಿ ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆ SKF ಪ್ರಸ್ತುತಪಡಿಸುತ್ತಿದೆ. ಅನೂಪ್‌ ಭಂಡಾರಿ ನಿರ್ದೇಶನದ 3D ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಅರೇಬಿಕ್, ಜರ್ಮನ್, ರಷ್ಯನ್, ಮ್ಯಾಂಡರಿನ್, ಇಂಗ್ಲಿಷ್‌ನಲ್ಲೂ ಡಬ್‌ ಮಾಡಿ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ. ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಪ್ರಮುಖ ಪಾತ್ರಗಳಲ್ಲಿದ್ದರೆ, ಬಾಲಿವುಡ್‌ ನಟಿ ಜಾಕ್ವಲಿನ್‌ ಫರ್ನಾಂಡಿಸ್‌ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಚಿತ್ರವನ್ನು ZEE ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿದ್ದು, ಜಾಕ್ ಮಂಜುನಾಥ್ ಮತ್ತು ಅಲಂಕಾರ್ ಪಾಂಡಿಯನ್ ಸಿನಿಮಾ ನಿರ್ಮಿಸಿದ್ದಾರೆ.

Previous articleಕೃತಕ ಗರ್ಭಧಾರಣೆ ಆಲೋಚನೆ‌ ಮಾಡುವ ಮೊದಲು ನೋಡಲೇಬೇಕಾದ ಡಾಕ್ಯುಮೆಂಟರಿ ‘ಅವರ್ ಫಾದರ್’
Next articleಫ್ಯಾಟ್‌ ಸರ್ಜರಿ; ಕನ್ನಡ ಕಿರುತೆರೆ, ಸಿನಿಮಾ ನಟಿ ಚೇತನಾ ರಾಜ್‌ ಸಾವು

LEAVE A REPLY

Connect with

Please enter your comment!
Please enter your name here