ಫ್ಯಾಟ್‌ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರು ತುಂಬಿಕೊಂಡು ಕನ್ನಡ ಕಿರುತೆರೆ ಹಾಗೂ ಸಿನಿಮಾ ನಟಿ ಚೇತನಾ ರಾಜ್‌ ಇಂದು ನಿಧನರಾಗಿದ್ದಾರೆ. ‘ಗೀತಾ’, ‘ದೊರೆಸಾನಿ’, ‘ಒಲವಿನ ನಿಲ್ದಾಣ’ ಧಾರಾವಾಹಿಗಳ ಮೂಲಕ ಅವರು ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು.

ಆಘಾತಕಾರಿ ಘಟನೆ ಎನ್ನುವ ಹಾಗೆ ಫ್ಯಾಟ್‌ ಸರ್ಜರಿ ಸಂದರ್ಭದಲ್ಲಿ ಕನ್ನಡ ಕಿರುತೆರೆ ಮತ್ತು ಸಿನಿಮಾ ನಟಿ ಚೇತನಾ ರಾಜ್‌ (21 ವರ್ಷ) ನಿಧನರಾಗಿದ್ದಾರೆ. ಸೊಂಟದ ಕೊಬ್ಬು ಕರಗಿಸುವ ಸರ್ಜರಿಗೆಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ದಾಖಲಾಗಿದ್ದರು. ಈ ವಿಷಯವನ್ನು ಅವರು ಪೋಷಕರಿಗೆ ತಿಳಿಸಿರಲಿಲ್ಲ ಎನ್ನಲಾಗಿದೆ. ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರು ತುಂಬಿಕೊಂಡಿದ್ದರಿಂದ ಈ ದುರಂತ ಸಂಭವಿಸಿದೆ ಎನ್ನುವ ಮಾಹಿತಿ ಇದೆ.

ಬೆಂಗಳೂರು ಅಬ್ಬಿಗೆರೆಯವರಾದ ಚೇತನಾ ‘ಗೀತಾ’, ‘ದೊರೆಸಾನಿ’, ‘ಒಲವಿನ ನಿಲ್ದಾಣ’ ಧಾರಾವಾಹಿಗಳ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ‘ಹವಯಾಮಿ’ ಚಿತ್ರದೊಂದಿಗೆ ಬೆಳ್ಳಿತೆರೆಯಲ್ಲೂ ಅವರ ಅಭಿಯಾನ ಆರಂಭವಾಗಿತ್ತು. ಪೋಷಕರ ಅನುಮತಿ ಪಡೆಯದೆ ಚೇತನಾ ಫ್ಯಾಟ್‌ ಸರ್ಜರಿಗೆ ನಿರ್ಧರಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಆಕೆಯ ತಂದೆ ವೈದ್ಯರ ನಿರ್ಲಕ್ಷ್ಯದಿಂದ ಹೀಗಾಗಿದೆ ಎಂದು ಆರೋಪಿಸಿ ಆಸ್ಪತ್ರೆ ಸಿಬ್ಬಂದಿ ಮೇಲೆ ಕಾನೂನು ಕ್ರಮ ಜರುಗಿಸಲು ಸಿದ್ಧತೆ ನಡೆಸಿದ್ದಾರೆ.

Previous articleಕಿಚ್ಚ ಸುದೀಪ್‌ ‘ವಿಕ್ರಾಂತ್‌ ರೋಣ’ಗೆ ಸಲ್ಮಾನ್‌ ಸಾಥ್‌; SKF ಪ್ರಸ್ತುತಿ
Next articleನೊಂದ ಹೆಣ್ಣಿನ ಕಥೆ ‘ಸಾರಾ ವಜ್ರ’; ಪ್ರಮುಖ ಪಾತ್ರದಲ್ಲಿ ಅನು ಪ್ರಭಾಕರ್‌

LEAVE A REPLY

Connect with

Please enter your comment!
Please enter your name here