ದಿನಕಳೆದಂತೆ ಬಿಗ್‌ಬಾಸ್ ರಿಯಾಲಿಟಿ ಶೋ ರಂಗೇರುತ್ತಿದೆ. ದಿನಕಳೆದಂತೆ ಸ್ಪರ್ಧಿಗಳ ನಿಜ ವ್ಯಕ್ತಿತ್ವ, ವರ್ತನೆಗಳು ಹೊರಬೀಳುತ್ತಿವೆ. ಸ್ಪರ್ಧಿಗಳಲ್ಲೊಬ್ಬರಾದ ನಟ ಸ್ನೇಹಿತ್ ಅವರು ನಮ್ರತಾ, ಇಶಾನಿ ಅವರೊಂದಿಗಿನ ಮಾತುಕತೆಯ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದಾರೆ. ಈ ಭಾವುಕ ಗಳಿಗೆ JioCinemaದ ‘Live Shorts’ನಲ್ಲಿ ದಾಖಲಾಗಿದೆ.
Bigg Boss ಮನೆ ಭಿನ್ನ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ. ದಿನಕಳೆದಂತೆ ಸ್ಪರ್ಧಿಗಳ ನಿಜವಾದ ವ್ಯಕ್ತಿತ್ವ, ವರ್ತನೆಗಳು ಹೊರಬೀಳುತ್ತಿವೆ. ಸ್ಪರ್ಧಿಗಳು ತಮ್ಮ ಬದುಕಿನ ಹಿಂದಿನ ದಿನಗಳನ್ನು, ಸಿಹಿ-ಕಹಿ ನೆನಪುಗಳನ್ನೂ ಹಂಚಿಕೊಂಡು ಹಗುರಾಗುತ್ತಿದ್ದಾರೆ. ಕಿರುತೆರೆ ಮತ್ತು ರಂಗಭೂಮಿ ನಟ ಸ್ನೇಹಿತ್ ಬಿಗ್‌ಬಾಸ್ ಮನೆಯಲ್ಲಿ ಮನಸೊಳಗಿನ ನೋವನ್ನು ಹೊರಹಾಕಿ ಕಣ್ಣೀರಾಗಿದ್ದಾರೆ. ತಮ್ಮ ಆಪ್ತ ಸ್ನೇಹಿತನನ್ನು ನೆನಪಿಸಿಕೊಂಡು ಅವರು ಕಣ್ಣೀರಾಗಿದ್ದಾರೆ. ಈ ಭಾವುಕ ಗಳಿಗೆ JioCinemaದ ‘Live Shorts’ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಸ್ನೇಹಿತ್, ನಮ್ರತಾ ಮತ್ತು ಇಶಾನಿ ನಡುವಿನ ಮಾತುಕತೆ ಫಿಟ್‌ನೆಸ್ ಸುತ್ತಲೇ ಸುತ್ತುತ್ತಿತ್ತು. ವರ್ಕ್‌ಔಟ್ ಮಾಡುವಾಗ ಸ್ನೇಹಿತ್ ಅವರ ಕಣ್ಣುಗಳಲ್ಲಿ ಅಗ್ರೆಶನ್ ತುಂಬಿಕೊಳ್ಳುತ್ತದಂತೆ. ಬಿಗ್‌ಬಾಸ್ ಮನೆಯೊಳಗಿನ ಟಾಸ್ಕ್‌ಗಳನ್ನು ಮಾಡುವಾಗಲೂ ಅವರಲ್ಲಿ ಅದೇ ರೀತಿ ಅಗ್ರೆಶನ್ ತುಂಬಿಕೊಳ್ಳುತ್ತದಂತೆ. ಅವರ ನಡುವೆ ನಡೆದ ಮಾತುಕತೆ ಹೀಗಿತ್ತು..
https://jiocinema.onelink.me/fRhd/j5lfsb66
ಸ್ನೇಹಿತ್ : ನಾನು ನಾರ್ಮಲ್ ಆಗಿ ವರ್ಕೌಟ್ ಮಾಡಲ್ಲ. ನಾನು ವರ್ಕೌಟ್ ಮಾಡುವಾಗ ನೋಡಿ, ನನ್ನ ಕಣ್ಣಲ್ಲಿ ಒಂದು ಅಗ್ರೆಶನ್ ಇರುತ್ತದೆ. Even, ನಾನು Physical task ಯಾವುದಾದರೂ ಮಾಡುವಾಗ ನೋಡಿದರೂ ನನ್ನ ಕಣ್ಣಲ್ಲಿ ಅಗ್ರೆಶನ್ ಇರುತ್ತದೆ.
ನಮ್ರತಾ : ಡ್ರೋನ್ ಪ್ರತಾಪ್ ಥರ…
ಸ್ನೇಹಿತ್ : ಅಲ್ಲ ಅಲ್ಲ… ನಾನು ಮೊದಲು ವೀಕ್ ಆಗಿದ್ದೆ. ನನ್ನ ಫ್ರೆಂಡ್ ಒಬ್ಬ ಇದ್ದ. ನಾವು ಸ್ಕೂಲ್ ಟೈಮಲ್ಲೂ ಒಟ್ಟಿಗೇ ಓದಿದ್ದು. ಯಾರಾದ್ರೂ ಹೊಡೆದ್ರೆ ನನ್ ಜೊತೆ ನಿಂತ್ಕೊಳೋನು ಅವ್ನು… ಯಾಕಂದ್ರೆ ಅವ್ನು ನನಗಿಂತ ಸ್ಟ್ರಾಂಗ್ ಇದ್ದ. ಮತ್ಯಾರೂ ನನ್ ಜೊತೆಗೆ ನಿಲ್ತಿರಲಿಲ್ಲ. ಅವನು ನಾನು ಸ್ಟ್ರಗಲ್ ಮಾಡುತ್ತಿದ್ದಾಗ ನಂಗೆ ತುಂಬ ಹೆಲ್ಪ್ ಮಾಡಿದ್ದ. ರಿಹರ್ಸಲ್‌ಗೆ ನನ್ನಲ್ಲಿ ದುಡ್ಡು ಇರ್ತಿರ್ಲಿಲ್ಲ. ಮನೇಲಿ ದುಡ್ಡ ಕೇಳೋಕೆ ಆಗ್ತಾನೇ ಇರ್ಲಿಲ್ಲ. ಅವ್ನು ಯಾವಾಗ್ಲೋ ಸಿಕ್ಕಾಗ ಮೂರು ಸಾವಿರ ಹಣ ಕೊಟ್ಟು ಹೋಗೋನು. ಆ ಮೂರು ಸಾವಿರ ನಂಗೆ ಎರಡು ತಿಂಗಳ ಪೆಟ್ರೋಲ್‌ಗೆ ಸಾಕಾಗ್ತಿತ್ತು. ಎರಡು ತಿಂಗಳು ರಿಹರ್ಸಲ್ ನಡೀತಿತ್ತು. ನನ್ನ ಕರ್ಚು ಅಷ್ಟೇ ಇರ್ತಿತ್ತು. ಆ ಥರ ಫ್ರೆಂಡ್ಸ್ ಸಿಗೋದು ಕಷ್ಟ. ಆ ಸ್ಟ್ರಗಲ್‌ನಲ್ಲಿ ನನ್ ಜೊತೆಗಿದ್ದ… ನಾನು ಮನೆಯೊಳಗೆ ಬರುವ ದಿನವೂ ಅವನು ಬಂದಿದ್ದ… ಹೀಗೆ ಹೇಳುತ್ತಲೇ ಸ್ನೇಹಿತ್ ಕಣ್ಣುಗಳು ತುಂಬಿಕೊಂಡವು. ನಮ್ರತಾ ಮತ್ತು ಇಶಾನಿ, ಸ್ನೇಹಿತ್ ಬಳಿಗೆ ಬಂದು ಸಂತೈಸುತ್ತಾರೆ.
ನಮ್ರತಾ : ಕ್ರೈಯಿಂಗ್ ಈಸ್ ನಾಟ್ ವೀಕ್‌ನೆಸ್….
ಸ್ನೇಹಿತ್ : ವೀಕ್‌ನೆಸ್ ಅಲ್ಲ. ಇದನ್ನು ನಾರ್ಮಲೈಜ್ ಮಾಡಬೇಕು. ಗಂಡಸರು ಅಳಬಾರದು ಅನ್ನೋದು wrong… ಎಲ್ಲ ಎಮೋಷನ್ ಕೂಡ ಎಮೋಷನ್ನೇ…. ಖುಷಿ ದುಃಖ ಎಲ್ಲವೂ ಇರಬೇಕು…
ಇಶಾನಿ : ಗಂಡಸರನ್ನೂ ಕೂಡ ನಾವು ಸೆನ್ಸಿಟೀವ್ ಆಗಿ ಸಾಫ್ಟ್ ಆಗೇ ನೋಡಬೇಕು. ನನಗೆ ಈಗ ಅರ್ಥ ಆಗುತ್ತಿದೆ. ಅವರೂ ಎಷ್ಟು ಕಷ್ಟಪಡ್ತಾರೆ.