ಸೋನಾಕ್ಷಿ ಸಿನ್ಹಾ ಪೊಲೀಸ್‌ ಅಧಿಕಾರಿಯಾಗಿ ನಟಿಸಿರುವ ‘ದಹಾದ್‌’ ವೆಬ್‌ ಸರಣಿಯ ಟ್ರೈಲರ್‌ ಬಿಡುಗಡೆಯಾಗಿದೆ. ಮಹಿಳೆಯರ ಸರಣಿ ಆತ್ಮಹತ್ಯೆಗಳ ತನಿಖೆಯ ಸುತ್ತ ಹೆಣೆದಿರುವ ಕಥಾಹಂದರ. ಮೇ 12ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ನಟಿಸಿರುವ ಕ್ರೈಮ್ ಡ್ರಾಮಾ ಸರಣಿ ‘ದಹಾದ್’ ಟ್ರೈಲರ್ ಬಿಡುಗಡೆಯಾಗಿದೆ. ಎರಡೂವರೆ ನಿಮಿಷಗಳ ಟ್ರೈಲರ್‌ನಲ್ಲಿ ಸೋನಾಕ್ಷಿ ಖಡಕ್‌ ಪೋಲೀಸ್ ಅಧಿಕಾರಿಯಾಗಿ, ವಿಜಯ್ ವರ್ಮಾ ಸರಣಿ ಹಂತಕನಾಗಿ ಕಾಣಿಸಿಕೊಂಡಿದ್ದಾರೆ. ಕಣ್ಮರೆಯಾಗುವ 27 ಮಹಿಳೆಯರ ಕುರಿತು ಈ ಸರಣಿ ಹೇಳಹೊರಟಿದೆ. ಸಾರ್ವಜನಿಕ ಸ್ನಾನಗೃಹದಲ್ಲಿ ಮಹಿಳೆಯರು ನಿಗೂಢವಾಗಿ ಸಾವನ್ನಪ್ಪಿದಾಗ ತನಿಖೆ ಆರಂಭಗೊಳ್ಳುತ್ತದೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದ 27 ಮಹಿಳೆಯರ ಶಂಕಿತ ಕೊಲೆಗಳನ್ನು ಅನಾವರಣಗೊಳಿಸುವ ಪ್ರಕರಣಗಳನ್ನು ಕುರಿತು ಟ್ರೈಲರ್‌ ಹೇಳುತ್ತದೆ.

ಎಂಟು ಎಪಿಸೋಡ್‌ಗಳ ಸಂಚಿಕೆಯಿದು. ಮಹಿಳೆಯರ ಆತ್ಮಹತ್ಯೆಗಳು ಸರಣಿ ಕೊಲೆಗಾರನ ಕೆಲಸವಾಗಿರಬಹುದು ಎಂದು ಅಂಜಲಿ ಭಾಟಿ (ಸೋನಾಕ್ಷಿ)ಅನುಮಾನಿಸುತ್ತಾಳೆ. ವಿಜಯ್ ವರ್ಮಾ ಖಳನಾಯಕನ ಪಾತ್ರದಲ್ಲಿ ನಟಿಸಿದ್ದು ಮಹಿಳೆಯರನ್ನು ಓಲೈಸಿ ನಂತರ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಿರುತ್ತಾನೆ. ರೀಮಾ ಕಾಗ್ತಿ, ಜೋಯಾ ಅಖ್ತರ್ ಸರಣಿಗೆ ಚಿತ್ರಕಥೆ ರಚಿಸಿದ್ದು, ರುಚಿಕಾ ಒಬೆರಾಯ್ ಜೊತೆಗೆ ರೀಮಾ ಕಾಗ್ತಿ ನಿರ್ದೇಶನವಿದೆ. ಎಕ್ಸೆಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ಮತ್ತು ಟೈಗರ್ ಬೇಬಿ ನಿರ್ಮಾಣದ ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿ ಗುಲ್ಶನ್ ದೇವಯ್ಯ, ಸೋಹುಮ್ ಶಾ ಇದ್ದಾರೆ. ಮೇ 12ರಿಂದ ಸರಣಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here