ಜೋಯಾ ಅಖ್ತರ್‌ ನಿರ್ದೇಶನದ ‘ದಿ ಆರ್ಚೀಸ್‌’ ಹಿಂದಿ ಸಿನಿಮಾದ ‘ಸುನೋ’ ಸಾಂಗ್‌ ರಿಲೀಸ್‌ ಆಗಿದೆ. ನಟ ಶಾರುಖ್‌ ಖಾನ್‌ ಪುತ್ರಿ ಸೇರಿದಂತೆ ಬಾಲಿವುಡ್‌ ಸೆಲೆಬ್ರಿಟಿಗಳ ಮಕ್ಕಳು ಅಭಿನಯಿಸಿರುವ ಈ ಸಿನಿಮಾ ಇದೇ ಡಿಸೆಂಬರ್‌ 7ರಂದು Netflixನಲ್ಲಿ ಬಿಡುಗಡೆಯಾಗಲಿದೆ.

ಶಾರುಖ್‌ ಖಾನ್‌ ಪುತ್ರಿ ಸಹಾನಾ ಖಾನ್‌ ನಟನೆಯ ಚೊಚ್ಚಲ ಹಿಂದಿ ಚಿತ್ರ ‘ದಿ ಆರ್ಚೀಸ್’ನ ಮೊದಲ ಹಾಡು ಬಿಡುಗಡೆಯಾಗಿದೆ. ತೆರೆಗೆ ಸಿದ್ಧವಾಗಿರುವ ಈ ಚಿತ್ರದಲ್ಲಿ ಬಾಲಿವುಡ್‌ ದಿಗ್ಗಜರ ಮಕ್ಕಳು, ಮೊಮ್ಮಕ್ಕಳು ನಟಿಸಿದ್ದಾರೆ. ಚಿತ್ರವನ್ನು ಜೋಯಾ ಅಖ್ತರ್ ನಿರ್ದೇಶಿಸಿದ್ದಾರೆ. ಈ ಹಾಡನ್ನು ಅಂಕುರ್ ತಿವಾರಿ ಮತ್ತು ದಿ ಐಲ್ಯಾಂಡರ್ಸ್ ಸಂಯೋಜಿಸಿದ್ದು, ಜಾವೇದ್ ಅಖರ್ ಮತ್ತು ಡಾಟ್ ಸಾಹಿತ್ಯ ಬರೆದಿದ್ದಾರೆ. ಗಾಯಕ ತೇಜಸ್ ಧ್ವನಿ ನೀಡಿದ್ದಾರೆ. ಸುಹಾನಾ ಖಾನ್ ಈ ಸಿನಿಮಾದಲ್ಲಿ ‘ವೆರೋನಿಕಾ’ ಪಾತ್ರವನ್ನು ನಿರ್ವಹಿಸಿದ್ದಾರೆ. ಸುಹಾನಾ ಖಾನ್ ಚಿತ್ರೀಕರಣದ ಅನುಭವಗಳ ಬಗ್ಗೆ ಮಾತನಾಡುತ್ತಾ, ‘ಮೊದಲ ದಿನದ ಚಿತ್ರೀಕರಣ ವಿಭಿನ್ನವಾಗಿತ್ತು. Netflix ಸಿನಿಮಾದಲ್ಲಿ ಕೆಲಸ ಮಾಡುವುದು ಓರ್ವ ಕಲಾವಿದರಿಗೆ ಒಂದು ವಿಭಿನ್ನ ಅನುಭವ. ನಾನು ಸ್ವಲ್ಪ ಆತಂಕಗೊಂಡಿದ್ದೆ’ ಎನ್ನುತ್ತಾರೆ.

‘ದಿ ಆರ್ಚೀಸ್’ ಒಂದು ಮ್ಯೂಸಿಕಲ್ ಕಾಮಿಡಿ ಸಿನಿಮಾ. ಈ ಚಿತ್ರದ ಮೂಲಕ ಬಾಲಿವುಡ್‌ಗೆ ಹೊಸಬರ ಆಗಮನವಾಗುತ್ತಿದೆ. ಪ್ರಮುಖ ಪಾತ್ರ ನಿರ್ವಹಿಸಿರುವವರಲ್ಲಿ ಬಾಲಿವುಡ್ ನಟರ ಮಕ್ಕಳಾದ ಖುಷಿ ಕಪೂರ್ ಮತ್ತು ಅಗಸ್ತ್ಯಾ ನಂದಾ, ಖುಷಿ ಕಪೂರ್, ಮಿಹಿರ್ ಅಹುಜಾ, ವೇದಂಗ್ ರೈನಾ ಮತ್ತು ಯುವರಾಜ್ ಮೆಂಡಾ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರ ಕೇವಲ ಒಬ್ಬ ನಟ, ನಟಿ ಮೇಲೆ ಕೇಂದ್ರೀಕೃತವಾಗಿಲ್ಲ. ಹಲವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾವನ್ನು ಜೋಯಾ ಅಖ್ತರ್, ರೀಮಾ ಕಾಗ್ತಿ ನಿರ್ಮಿಸಿದ್ದಾರೆ. ಚಿತ್ರವು ಇದೇ ಡಿಸೆಂಬರ್ 7ರಂದು Netflix ನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡ ಈಗಾಗಲೇ ಪ್ರಚಾರ ಪ್ರಾರಂಭಿಸಿದೆ.

LEAVE A REPLY

Connect with

Please enter your comment!
Please enter your name here