Kemp Powers ಮತ್ತು Justin K. Thompson ನಿರ್ದೇಶನದ ‘Spider Man – Across the Spider Verse’ ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಭಾರತದ ಹತ್ತು ಭಾಷೆಗಳಲ್ಲಿ ಸಿನಿಮಾ ತೆರೆಕಂಡಿದ್ದು ಎಲ್ಲಾ ವಯೋಮಾನದ ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

ಜೂನ್‌ ಆರಂಭದಲ್ಲಿ ವಿಶ್ವದಾದ್ಯಂತ ತೆರೆಕಂಡ ಸೂಪರ್‌ ಹೀರೋ ಸಿನಿಮಾ ‘Spider Man – Across the Spider Verse’ ಭಾರತದ ಬಾಕ್ಸ್‌ ಆಫೀಸ್‌ನಲ್ಲೂ ಸದ್ದು ಮಾಡುತ್ತಿದೆ. ಹಾಲಿವುಡ್‌ನ ಈ ಅನಿಮೇಷನ್ ಚಿತ್ರ ಮೊದಲ ಏಳು ದಿನಗಳಲ್ಲಿ ಭಾರತದ ಬಾಕ್ಸ್‌ ಆಫೀಸ್‌ನಲ್ಲಿ 22.87 ಕೋಟಿ ರೂಪಾಯಿ ಗಳಿಸಿದೆ. ದಿನದಿಂದ ದಿನಕ್ಕೆ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗಳಿಕೆ ಹೆಚ್ಚುವ ಸೂಚನೆಗಳಿವೆ. ಅದೇ ದಿನ ತೆರೆಕಂಡ ಭಾರತೀಯ ಸಿನಿಮಾಗಳಿಗೆ ತೀವ್ರ ಸ್ಪರ್ಧೆ ನೀಡುತ್ತಿದೆ.

2018ರಲ್ಲಿ ಬಿಡುಗಡೆಯಾದ ‘Spider-Man: Into the Spider-Verse’ ಅಮೇರಿಕನ್ ಫ್ರ್ಯಾಂಚೈಸ್ ಕತೆಯ sequel ಇದು. Spider Verse ಅಥವಾ ಸ್ಪೈಡರ್ ಪ್ರಪಂಚದಲ್ಲಿ ನಡೆಯುವ ಸಾಹಸಗಾಥೆ. ಹೊಸದಾಗಿ SpiderMan-2 ಆದ Miles Morales ಮತ್ತು Spider Woman ಒಟ್ಟಾಗಿ ನಡೆಸುವ ರೋಮಾಂಚಕಾರಿ ಸಾಹಸಗಳು ಮತ್ತು ಅವರ ನಡುವಿನ ಪ್ರೇಮಕತೆಯೇ ಚಿತ್ರದ ವಸ್ತು. ಅನಿಮೇಷನ್‌ನಿಂದ ಅಸಾಧ್ಯವೆನಿಸುವ ಸೂಪರ್ ಹೀರೋ ಆಕ್ಷನ್ ದೃಶ್ಯಗಳನ್ನು ಸಾಧ್ಯವಾಗಿದ್ದು ಸೂಪರ್ ಹೀರೋ ಕಥೆಗಳನ್ನು ಮೆಚ್ಚುವ ಯುವಪ್ರೇಕ್ಷಕರು, ಅನಿಮೇಷನ್ ಸಿನಿಪ್ರಿಯರಿಗೆ ಈ ಚಿತ್ರ ಉತ್ತಮ ಮನರಂಜನೆ ನೀಡುತ್ತಿದೆ.

Kemp Powers ಮತ್ತು Justin K. Thompson ನಿರ್ದೇಶನದ ಚಿತ್ರವನ್ನು Marvel Entertainmentನ ಸಹಯೋಗದೊಂದಿಗೆ, Columbia Pictures ಮತ್ತು Sony Entertainment ನಿರ್ಮಿಸಿವೆ. Phil Lord, Christopher Miller ಮತ್ತು Dave Callaham ಅವರ ಚಿತ್ರಕಥೆ ರಚಿಸಿದ್ದು, Daniel Pemberton ಸಂಗೀತ ನೀಡಿದ್ದಾರೆ. ಭಾರತದಲ್ಲಿ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಗುಜರಾತಿ, ಮರಾಠಿ, ಪಂಜಾಬಿ ಮತ್ತು ಬೆಂಗಾಲಿ ಸೇರಿದಂತೆ 10 ಭಾರತೀಯ ಭಾಷೆಗಳಲ್ಲಿ ತೆರೆಕಂಡು ವಿಮರ್ಶಕರು ಹಾಗೂ ಸಾಮಾನ್ಯ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತಿದೆ.

‘Spider Man – Across the Spider Verse’ನ ಭಾರತೀಯ ಆವೃತ್ತಿಗಳಲ್ಲಿ ಮತ್ತೊಂದು ಆಕರ್ಷಣೆ ಎಂದರೆ Indian Spider Man ಪವಿತ್ರಾ ಪ್ರಭಾಕರ್ ಪಾತ್ರಕ್ಕೆ ಧ್ವನಿ ನೀಡಿದ್ದ ಕ್ರಿಕೆಟಿಗ ಶುಭ್‌ಮನ್ ಗಿಲ್ ಹಿಂದಿ ಮತ್ತು ಪಂಜಾಬಿ ಆವೃತ್ತಿಗೂ ಸಹ ಧ್ವನಿ ನೀಡಿದ್ದಾರೆ. ಸಿನಿಮಾವು Los Angeles, California ದಲ್ಲಿ May 30ರಂದು ಪ್ರಥಮ ಪ್ರದರ್ಶನವಾಗಿ Golden Trailer Awardsನಲ್ಲಿ Best Animation/Family ಗೆ ನಾಮನಿರ್ದೇಶನಗೊಂಡಿತ್ತು. ಇದೀಗ Spider Man ಚಿತ್ರದ ಮುಂದುವರೆದ ಭಾಗ ‘SpiderMan 3 Beyond the Spider-Verse’ 2024ರ ಮಾರ್ಚ್ 29ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.

LEAVE A REPLY

Connect with

Please enter your comment!
Please enter your name here