‘ಬಡವ ರಾಸ್ಕಲ್‌’ ಸಿನಿಮಾದಲ್ಲಿ ಜೊತೆಯಾಗಿದ್ದ ಧನಂಜಯ್‌ ಮತ್ತು ಸ್ನೇಹಿತರು ‘ಆರ್ಕೇಸ್ಟ್ರಾ, ಮೈಸೂರು!’ ಚಿತ್ರದಲ್ಲಿ ಮತ್ತೆ ಒಟ್ಟುಗೂಡಿದ್ದಾರೆ. ಧನಂಜಯ್‌ ಮತ್ತು KRG ಸ್ಟುಡಿಯೋಸ್‌ ಅರ್ಪಿಸುತ್ತಿರುವ ಸಿನಿಮಾದ ಟ್ರೈಲರ್‌ ಇಂದು ಬಿಡುಗಡೆಯಾಗಿದೆ.

ಪೂರ್ಣಚಂದ್ರ ಮತ್ತುರಾಜಲಕ್ಷ್ಮಿ ಅಭಿನಯದ ‘ಆರ್ಕೇಸ್ಟ್ರಾ, ಮೈಸೂರು!’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಧನಂಜಯ್‌ ನಿರ್ಮಿಸಿ, ನಟಿಸಿದ್ದ ಯಶಸ್ವೀ ಸಿನಿಮಾ ‘ಬಡವ ರಾಸ್ಕಲ್‌’ನಲ್ಲಿನ ಪ್ರತಿಭಾವಂತರೆಲ್ಲರೂ ಸೇರಿ ಈ ಸಿನಿಮಾ ಮಾಡಿದ್ದಾರೆ. ನಟ ಧನಂಜಯ್‌ KRG ಸ್ಟುಡಿಯೋಸ್‌ ಜೊತೆಗೂಡಿ ನಿರ್ಮಾಣ ಮತ್ತು ಪ್ರಚಾರದಲ್ಲಿ ಕೈಜೋಡಿಸಿದ್ದರೆ, ಅಶ್ವಿನಿ ಕ್ರಿಯೇಷನ್ಸ್‌ ಮತ್ತು ರಘು ದೀಕ್ಷಿತ್‌ ಪ್ರೊಡಕ್ಷನ್ಸ್‌ ನಿರ್ಮಾಣದ ಹೊಣೆ ಹೊತ್ತಿದೆ. ಆರ್ಕೇಸ್ಟ್ರಾ ಕಲೆ ಮತ್ತು ಅಲ್ಲಿನ ಗಾಯಕರು ಹಾಗೂ ಸಂಗೀತಗಾರರ ಕತೆ ಹೇಳಲಿದೆ ಸಿನಿಮಾ. ಒಂದು ಕ್ಯೂಟ್‌ ಲವ್‌ ಸ್ಟೋರಿಯೂ ಇದೆ ಎನ್ನುತ್ತಾರೆ ಧನಂಜಯ್‌. ಹೀರೋ ಪೂರ್ಣಚಂದ್ರ, ಜೋಸೆಫ್‌ ರಾಜಾ ಮತ್ತು ಮಹದೇವ ಪ್ರಸಾದ್‌ ಚಿತ್ರಕಥೆ ರಚಿಸಿದ್ದು, ಸುನೀಲ್‌ ಮೈಸೂರು ಸಿನಿಮಾ ನಿರ್ದೇಶಿಸಿದ್ದಾರೆ. ರಂಗಭೂಮಿ ಹಿನ್ನೆಲೆಯ ರಾಜಲಕ್ಷ್ಮಿ ಚಿತ್ರದ ಹಿರೋಯಿನ್‌. ದಿಲೀಪ್‌ ರಾಜ್‌, ಮಹೇಶ್‌ ಕುಮಾರ್‌, ರವಿ ಹುಣಸೂರು, ರಾಜೇಶ್‌ ಬಸವಣ್ಣ, ಲಿಂಗರಾಜು ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಧನಂಜಯ್‌ ಚಿತ್ರಕ್ಕೆ ಏಳು ಹಾಡುಗಳನ್ನು ರಚಿಸಿರುವುದು ವಿಶೇಷ. ಈ ಗೀತೆಗಳಿಗೆ ರಘು ದೀಕ್ಷಿತ್‌ ಸಂಗೀತ ಸಂಯೋಜಿಸಿದ್ದಾರೆ. ಆರ್ಕೇಸ್ಟ್ರಾ ನಡೆಯುತ್ತಿದ್ದಾಗಿನ ನೈಜ ಚಿತ್ರಣಗಳನ್ನು ಶೂಟ್‌ ಮಾಡಿ ಬಳಕೆ ಮಾಡಲಾಗಿದೆ. ಗೌರಿ – ಗಣೇಶ ಹಬ್ಬದ ಹೊತ್ತಿಗೆ ಸಿನಿಮಾ ರಿಲೀಸ್‌ ಮಾಡುವುದು ನಿರ್ಮಾಪಕರ ಯೋಜನೆ.

Previous article‘ಸ್ಪೂಕಿ ಕಾಲೇಜ್‌’ ಟೀಸರ್‌; ಇದು ಸೈಕಾಲಾಜಿಕಲ್‌ ಹಾರರ್‌ – ಥ್ರಿಲ್ಲರ್‌
Next articleದಿಗಂತ್‌ಗೆ ಶಸ್ತ್ರಚಿಕಿತ್ಸೆ; ಹೆಚ್ಚಿನ ಅಪಾಯ ಇಲ್ಲವೆಂದ ನಟನ ತಂದೆ

LEAVE A REPLY

Connect with

Please enter your comment!
Please enter your name here