ಡೇವಿಡ್‌ ವಾರ್ನರ್‌ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ಕ್ರಿಕೆಟಿಗ. ಇವರು ಮಾಡುವ ರೀಲ್ಸ್‌ ಸಖತ್‌ ವೈರಲ್‌ ಆಗುತ್ತೆ. ಅದಕ್ಕೆ ಇರಬೇಕು ಸ್ಟಾರ್‌ ನಿರ್ದೇಶಕ ರಾಜಮೌಳಿ ಇವರಿಗೆ ಡೈರೆಕ್ಟ್‌ ಮಾಡೋಕೆ ಓಕೆ ಅಂದಿರೋದು.

ಕ್ರಿಕೆಟ್‌ ಜೊತೆಗೆ ಅಭಿಮಾನಿಗಳ ಮನರಂಜಿಸುವ ಸೆಲೆಬ್ರಿಟಿ ಕ್ರಿಕೆಟಿಗ ಅಂದ್ರೆ ಅದು ಡೇವಿಡ್‌ ವಾರ್ನರ್‌. ಕೋವಿಡ್‌ನಿಂದಾಗಿ ಲಾಕ್‌ಡೌನ್‌ ಆಗಿದ್ದ ವೇಳೆ ಮನೆಯಲ್ಲೇ ಬಾಲಿವುಡ್‌ ದಕ್ಷಿಣ ಭಾರತದ ಸಿನಿಮಾಗಳ ಹಿಟ್‌ ಹಾಡುಗಳಿಗೆ ರೀಲ್ಸ್‌ ಮಾಡಿ ಪೋಸ್ಟ್‌ ಮಾಡ್ತಿದ್ರು. ವಾರ್ನರ್‌ ಹೆಂಡತಿ ಮಕ್ಕಳ ಜತೆ ಡ್ಯಾನ್ಸ್‌ ಮಾಡೋದನ್ನ ನೋಡಿದ ನೆಟ್ಟಿಗರು ಅವರ ಅಭಿಮಾನಿಗಳಾಗಿದ್ದರು. ಎಷ್ಟರ ಮಟ್ಟಿಗೆ ಅಂದರೆ ಅವರ ಒಂದೊಂದು ಡ್ಯಾನ್ಸ್‌ ವಿಡಿಯೋಗಳು ಮಿಲಿಯನ್‌ ಗಟ್ಟಲೆ ವೀಕ್ಷಣೆ ಪಡೆಯಲಾರಂಭಿಸಿತ್ತು. ಸರಿಯಾಗಿ ಡ್ಯಾನ್ಸ್‌ ಮಾಡೋಕೆ ಬರ್ತಿಲ್ಲ ಅಂತ ಪತ್ನಿ ಬಳಿ ಸ್ಟೆಪ್ಸ್‌ ಹೇಳಿಸಿಕೊಂಡಿದ್ದೂ ಇದೆ. ಇದು ಶ್ರಮಪಟ್ಟು ತಮ್ಮ ಫಾಲೀವರ್ಸ್‌ಗಳನ್ನ ರಂಜಿಸ್ತಿದ್ರು. ಇಂತಹ ಎಂಟಟೈನರ್‌ಗೆ ಈಗ ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ನಿರ್ದೇಶನ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ.

RRR ಸಿನಿಮಾದ ನಂತರ ನಿರ್ದೇಶಕ ರಾಜಮೌಳಿ ಮಹೇಶ್‌ ಬಾಬು ಜೊತೆಗೆ ಬಿಗ್‌ ಬಜೆಟ್‌ ಸಿನಿಮಾವೊಂದನ್ನ ಪ್ಲ್ಯಾನ್‌ ಮಾಡುತ್ತಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಇನ್ನೇನು ಚಿತ್ರೀಕರಣಕ್ಕೆ ತಯಾರಿ ನಡೆದಿದೆ. ಹೀಗಿರುವಾಗಲೇ ರಾಜಮೌಳಿ ಅವರು ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್‌ ವಾರ್ನರ್‌ ಜೊತೆ ಕಾಣಿಸಿಕೊಂಡಿದಾರೆ. ವಾರ್ನರ್‌ಗೆ ಈ ಸ್ಟಾರ್‌ ನಿರ್ದೇಶಕ ಆಕ್ಷನ್‌ ಕಟ್‌ ಹೇಳಿರೋದು ದೊಡ್ಡ ಸುದ್ದಿಯಾಗಿದೆ. ಹೌದು, ವಾರ್ನರ್‌ ಹಾಗೂ ರಾಜಮೌಳಿ ಅವರು ಒಟ್ಟಿಗೆ ಕೆಲಸ ಮಾಡುತ್ತಿರುವುದು ಸತ್ಯ. ಹೌದು, ಜಾಹೀರಾತೊಂದರಲ್ಲಿ ಈ ಜೋಡಿ ದರ್ಶನ ಕೊಟ್ಟಿದೆ. ಪೇಮೆಂಟ್‌ ಆಪ್‌ವೊಂದರ ಜಾಹೀರಾತಿನಲ್ಲಿ ರಾಜಮೌಳಿ ಹಾಗೂ ವಾರ್ನರ್ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿಲ್ಲೂ ರಾಜಮೌಳಿ ನಿರ್ದೇಶಕರಾದ್ರೆ, ವಾರ್ನರ್ ಸಿನಿಮಾದ ಹೀರೊ ಆಗಿ ಮಿಂಚಿದ್ದಾರೆ. ಸಖತ್‌ ತಮಾಷೆಯಾಗಿರುವ ಈ ಜಾಹೀರಾತು ಈಗ ವೈರಲ್ ಆಗುತ್ತಿದೆ.

ಈ ಜಾಹೀರಾತಿನಲ್ಲಿ ರಾಜಮೌಳಿ ಅವರು ಡೇವಿಡ್ ವಾರ್ನರ್‌ಗೆ ಕರೆ ಮಾಡುತ್ತಾರೆ. ‘ನಿಮ್ಮ ಕ್ರಿಕೆಟ್‌ ಮ್ಯಾಚ್ ಟಿಕೆಟ್ ಮೇಲೆ ಡಿಸ್ಕೌಂಟ್ ಸಿಗುತ್ತದೆಯೇ’ ಎಂದು ಕೇಳುತ್ತಾರೆ ರಾಜಮೌಳಿ. ಆಗ ವಾರ್ನರ್‌ ನಿಮಗೆ ಆಫರ್ ಬೇಕು ಎಂದರೆ ನೀವು ನನಗೆ ಒಂದು ಫೇವರ್ ಮಾಡಬೇಕು’ ಎನ್ನುತ್ತಾರೆ. ಅದು ವಾರ್ನರ್ ಅವರನ್ನ ಹೀರೋ ಆಗಿ ಇಟ್ಟುಕೊಂಡು ಸಿನಿಮಾ ಮಾಡೋದು. ಈ ಮಾತು ಕೇಳಿದ ರಾಜಮೌಳಿ ಒಮ್ಮೆ ಸೆಟ್‌ನಲ್ಲಿ ಅಭಿನಯಿಸುವ ವಾರ್ನರ್‌ ಬಗ್ಗೆ ಊಹಿಸಿಕೊಳ್ಳುತ್ತಾರೆ. ಶೂಟಿಂಗ್‌ ಸೆಟ್‌ನಲ್ಲಿ ವಾರ್ನರ್ ಓವರ್‌ ಆಕ್ಟಿಂಗ್, ಡ್ಯಾನ್ಸ್, ಡೈಲಾಗ್ ಡೆಲಿವರಿ ಎಲ್ಲ ಊಹಿಸಿಕೊಂಡು ಮೂಖರಾಗುತ್ತಾರೆ ರಾಜಮೌಳಿ. ಕೂಡಲೇ ಯಾವ ಆಫರ್‌ ಬೇಡ ಅಂತ ಕಾಲ್‌ ಕಟ್ ಮಾಡುತ್ತಾರೆ. ಈ ಜಾಹೀರಾತಿಗೆ ನೆಟ್ಟಿಗರು ಮುಗಿಬಿದ್ದು ಕಮೆಂಟ್‌ ಮಾಡುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here