ಖ್ಯಾತ ಚಿತ್ರನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರಲ್ಲಿ ಸಹಾಕರಾಗಿದ್ದ ಕಿಶೋರ್‌ ಭಾರ್ಗವ್‌ ನಿರ್ದೇಶನದ ಸಸ್ಪೆನ್ಸ್‌ – ಥ್ರಿಲ್ಲರ್‌ ‘ಸ್ಟಾಕರ್‌’ ಸಿನಿಮಾ ನಾಳೆ ತೆರೆಕಾಣುತ್ತಿದೆ. ಸುಮನ್‌ ನಗರ್‌ಕರ್‌, ರಾಮ್‌, ಐಶ್ವರ್ಯಾ ನಂಬಿಯಾರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಗಂಡ, ಹೆಂಡತಿ, ಮಗಳನ್ನೊಳಗೊಂಡ ಸುಂದರ ಕುಟುಂಬ. ಎಲ್ಲವೂ ಚೆನ್ನಾಗಿದ್ದ ಕುಟುಂಬ ಸ್ಟಾಕರ್‌ ಪ್ರವೇಶದಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತದೆ. ಮಗಳ ಲೈಫ್‌ನಲ್ಲಿ ಕಾಟ ಕುಡುವ ವಿಲನ್.. ಆ ವಿಲನ್ ಮತ್ತೆ ಹಚ್ಚಲು ಬರುವ ಉಗ್ರ ನಿಗ್ರಹ ಪಡೆ.. ಇದು ‘ಸ್ಟಾಕರ್’ ಚಿತ್ರದ ಕಥಾಹಂದರ. ಸಸ್ಪೆನ್ಸ್ – ಥ್ರಿಲ್ಲಿಂಗ್ ಕತೆಯ ಸಿನಿಮಾ ಫಸ್ಟ್‌ಲುಕ್‌ ಮತ್ತು ಟ್ರೈಲರ್‌ನಿಂದ ಗಮನ ಸೆಳೆದಿತ್ತು. ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರಲ್ಲಿ ಸಹಾಯಕರಾಗಿದ್ದ ಕಿಶೋರ್‌ ಭಾರ್ಗವ್‌ ಈಗಾಗಲೇ ತೆಲುಗಿನಲ್ಲಿ ‘ಸೈಕೋ’ ಸಿನಿಮಾ ಮಾಡಿದ್ದಾರೆ. ‘ಸ್ಟಾಕರ್‌’ ಕನ್ನಡದಲ್ಲಿ ಅವರ ಮೊದಲ ಪ್ರಯೋಗ. ನಾಳೆ ಸಿನಿಮಾ ತೆರೆಕಾಣುತ್ತಿದೆ.

ಸ್ಟಾಕರ್ ಸಿನಿಮಾದಲ್ಲಿ ‘ಬೆಳದಿಂಗಳ ಬಾಲೆ’ ಸುಮನ್ ನರ್ಗಕರ್, ರಾಮ್, ಐಶ್ವರ್ಯ ನಂಬಿಯಾರ್, ಉದಯ್ ಆಚಾರ್, ನಮ್ರತಾ ಪಾಟೀಲ್, ಜಿತೆನ್ ಆರೋರಾ, ಭವಾನಿಶಂಕರ್ ದೇಸಾಯಿ ಮತ್ತಿತರರು ನಟಿಸಿದ್ದಾರೆ. ಸೋಮಶೇಖರ್, ಭರತ್ ಪ್ರಮೋದ್ ಹಾಗೂ ಕಿಶೋರ್ ಭಾರ್ಗವ್ ಚಿತ್ರಕಥೆ ಬರೆದಿದ್ದು, ವಿನೋದ್ ರಾಜ್ ಕ್ಯಾಮೆರಾ, ಸ್ಕಂದ ಕಶ್ಯಪ್ ಮ್ಯೂಸಿಕ್, ಸುಧೀರ್ ಪಿ.ಆರ್. ಕಲಾ ನಿರ್ದೇಶನ, ವಂದನಾ ಭಂಡಾರೆ ವಸ್ತ್ರ ವಿನ್ಯಾಸ ಚಿತ್ರಿಕ್ಕಿದೆ. ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಸ್ಟಾಕರ್ ಸಿನಿಮಾವನ್ನು ಎಸ್.ಎಂ.ಎಲ್ ಪ್ರೊಡಕ್ಷನ್ಸ್, ಸ್ಕ್ರಿಪ್ಟ್ ಟೀಸ್ ಫಿಲ್ಮ್ಸ್‌ನಡಿ ಎಂ.ಎನ್.ವಿ. ರಮಣ, ಸಂದೀಪ್ ಗೌಡ ಹಾಗೂ ಸ್ವಾತಿ ಗೋವಾಡ ನಿರ್ಮಿಸಿದ್ದಾರೆ.

Previous articleಕೆನಡಾ ನಿವಾಸಿ ಬೃಂದಾ ನಿರ್ದೇಶನದಲ್ಲಿ ‘ಅಂತು ಇಂತು’; ದಿಗಂತ್‌ ಹೀರೋ
Next articleಶಾನ್ವಿ ‘ಕಸ್ತೂರಿ ಮಹಲ್’ ಮೇ 13ಕ್ಕೆ; ಇದು ದಿನೇಶ್ ಬಾಬು 50ನೇ ಸಿನಿಮಾ

LEAVE A REPLY

Connect with

Please enter your comment!
Please enter your name here