ನಟ ಪುನೀತ್ ರಾಜಕುಮಾರ್‌ ದಕ್ಷಿಣ ಭಾರತದ ಚಿತ್ರರಂಗಗಳು ಮಾತ್ರವಲ್ಲ ಬಾಲಿವುಡ್ ತಾರೆಯರಿಗೂ ಪರಿಚಿತರು. ಅವರ ಸಾಕಷ್ಟು ಸಿನಿಮಾಗಳು ಡಬ್ ಆಗಿ ದೇಶದ ಹಲವೆಡೆ ಪ್ರದರ್ಶನಗೊಂಡಿವೆ. ಹಾಗಾಗಿ ದೇಶದ ಹಲವೆಡೆಯಿಂದ ಅವರ ನಿಧನಕ್ಕೆ ಸಂತಾಪ ವ್ಯಕ್ತಪವಾಗುತ್ತಿದೆ.

ಖ್ಯಾತ ನಟ ಪುನೀತ್ ರಾಜಕುಮಾರ್ ನಿಧನ ಭಾರತೀಯ ಚಿತ್ರರಂಗಕ್ಕೇ ಧಿಗ್ರಮೆ ತಂದಿದೆ. ವರನಟ ಡಾ.ರಾಜಕುಮಾರ್ ಪುತ್ರನಾಗಿ ಮಾತ್ರವಲ್ಲದೆ ಜನಪ್ರಿಯ ನಟ ಮತ್ತು ಉತ್ತಮ ನಡೆ-ನುಡಿಯ ವ್ಯಕ್ತಿಯಾಗಿಯೂ ಅವರು ಎಲ್ಲರಿಗೂ ಆಪ್ತವಾಗಿದ್ದರು. ಅವರ ಹತ್ತಾರು ಸಿನಿಮಾಗಳು ಭಾರತದ ವಿವಿಧ ಭಾಷೆಗಳಿಗೆ ಡಬ್ ಆಗಿ ತೆರೆಕಂಡಿವೆ. ‘ಅಪ್ಪು’ ನಿಧನಕ್ಕೆ ಚಿತ್ರರಂಗದವರು, ಕ್ರಿಕೆಟಿಗರು ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತನಾಮರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ದಕ್ಷಿಣದ ಖ್ಯಾತ ನಟರಾದ ಚಿರಂಜೀವಿ, ದುಲ್ಕರ್ ಸಲ್ಮಾನ್‌, ಲಕ್ಷ್ಮೀ ಮಂಚು, ಪೃಥ್ವಿರಾಜ್‌, ಮಹೇಶ್ ಬಾಬು, ವಿಷ್ಣು ಮಂಚು, ಬಾಲಿವುಡ್ ತಾರೆಯರು ಹಾಗೂ ಕ್ರಿಕೆಟಿಗರು ಪುನೀತ್‌ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here