ಸ್ಟಾರ್‌ ಸುವರ್ಣ ವಾಹಿನಿ ‘ನೀನಾದೆ ನಾ’ ನೂತನ ಧಾರಾವಾಹಿ ಆರಂಭಿಸುತ್ತಿದೆ. ದಿಲೀಪ್‌ ಶೆಟ್ಟಿ ಮತ್ತು ಖುಷಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ನಟ – ಚಿತ್ರನಿರ್ದೇಶಕ ರಮೇಶ್‌ ಅರವಿಂದ್‌ ಅವರ ‘ವಂದನಾ ಮೀಡಿಯಾ’ದ ಚೊಚ್ಚಲ ನಿರ್ಮಾಣವಿದು. ಇದೇ ಮೇ 16, ಮಂಗಳವಾರ ರಾತ್ರಿ 9.30ರಿಂದ ಧಾರಾವಾಹಿ ಮೂಡಿಬರಲಿದೆ.

ಕಥಾನಾಯಕಿಯ ಹೆಸರು ವೇದಾ. ನೇರ ನಡೆ – ನುಡಿಯ ಹುಡುಗಿ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದರೂ ಸಂಸ್ಕಾರ, ಸಂಸ್ಕೃತಿ, ಆಚಾರ – ವಿಚಾರ ಪರಿಪಾಲಿಸುವಲ್ಲಿ ಮುಂದು. ಹುಟ್ಟಿ ಬೆಳೆದ ಊರಿನಲ್ಲಿ, ಮನೆಯವರು ನೋಡಿದ ಹುಡುಗನೊಂದಿಗೆ ಮದುವೆಯಾಗಬೇಕು ಅನ್ನೋದು ಆಕೆಯ ಆಸೆ. ಇನ್ನು ಕಥಾ ನಾಯಕ ವಿಕ್ರಮ್. ಗೂಂಡಾಗಿರಿ ಮಾಡಿಕೊಂಡಿರುವ ಬೇಜವಾಬ್ದಾರಿ ಯುವಕ. ಪದವಿ ಪಡೆದಿದ್ದರೂ ಸಂಸ್ಕಾರ ರೂಢಿಯಾಗಿಲ್ಲ. ಅಚಾನಕ್ ಆಗಿ ಒಂದು ದಿನ ದೇವರ ಸನ್ನಿಧಾನದಲ್ಲಿ ವಿಧಿಯಾಟದಂತೆ ವಿಕ್ರಮ್ – ವೇದಾಳಿಗೆ ತಾಳಿ ಕಟ್ಟುತ್ತಾನೆ! ಶ್ರೀಮಂತ ಕುಟುಂಬದಲ್ಲಿ ಬೆಳೆದ ವೇದ ರೌಡಿಯಂತಿರುವ ವಿಕ್ರಮ್‌ನನ್ನು ಗಂಡ ಎಂದು ಒಪ್ಪಿಕೊಳ್ತಾಳಾ? ವಿದ್ಯಾವಂತಳಾಗಿರುವ ವೇದಾಳ ಮುಂದಿನ ನಡೆ ಏನು? ವಿರುದ್ಧ ಮನಸುಗಳು ಒಂದಾಗುತ್ತವೆಯೇ? ಇದು ‘ನೀನಾದೆ ನಾ’ ಧಾರಾವಾಹಿಯ ಕಥಾ ಹಂದರ.

ಸ್ಟಾರ್‌ ಸುವರ್ಣ ವಾಹಿನಿಯ ನೂತನ ಧಾರಾವಾಹಿಯಿದು. ಇದೇ ಮೇ 16, ಮಂಗಳವಾರ ರಾತ್ರಿ 9.30ರಿಂದ ಪ್ರಸಾರವಾಗಲಿದೆ. ‘ನಮ್ಮ ಲಚ್ಚಿ’, ‘ರಾಣಿ’ ಧಾರಾವಾಹಿಗಳ ನಂತರ ವಾಹಿನಿ ಪ್ರಸಾರ ಮಾಡುತ್ತಿರುವ ಮತ್ತೊಂದು ಹೊಸ ಧಾರಾವಾಹಿ ‘ನೀನಾದೆ ನಾ’. ದಿಲೀಪ್‌ ಶೆಟ್ಟಿ ಮತ್ತು ಖುಷಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಕನ್ನಡ ಕಿರುತೆರೆಯ ಪ್ರಮುಖ ಕಲಾವಿದರು ಪೋಷಕ ಪಾತ್ರಗಳಲ್ಲಿದ್ದಾರೆ. ನಟ – ಚಿತ್ರನಿರ್ದೇಶಕ ರಮೇಶ್‌ ಅರವಿಂದ್‌ ಅವರ ‘ವಂದನಾ ಮೀಡಿಯಾ’ ಸಂಸ್ಥೆಯಡಿ ನಿರ್ಮಾಣವಾಗಿರುವ ಚೊಚ್ಚಲ ಧಾರಾವಾಹಿಯಿದು ಎನ್ನುವುದು ವಿಶೇಷ.

Previous article‘ಮತ್ತೆ ಮದುವೆ’ ಟ್ರೈಲರ್‌ | ನರೇಶ್‌ – ಪವಿತ್ರಾ ಜೋಡಿಯ ನಿಜ ಘಟನೆಗಳೇ ತೆರೆಗೆ!?
Next articleರಾಧಿಕಾ ಕುಮಾರಸ್ವಾಮಿ ಸಿನಿಮಾ ‘ಅಜಾಗ್ರತ’ ಶುರು | ಹೈದರಾಬಾದ್‌ನಲ್ಲಿ ಮುಹೂರ್ತ

LEAVE A REPLY

Connect with

Please enter your comment!
Please enter your name here