2024ನೇ ಸಾಲಿನ Emmys ಪ್ರಶಸ್ತಿಗಳು ಘೋಷಣೆಯಾಗಿದ್ದು ‘Succession’, ಅತ್ಯುತ್ತಮ ಸರಣಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ‘Bear’ ಸರಣಿಯು ಅತ್ಯುತ್ತಮ ಹಾಸ್ಯ ಸರಣಿ ಪ್ರಶಸ್ತಿ ಪಡೆದುಕೊಂಡಿದೆ. Kieran Culkin ಅವರು ‘Succession’ ಸರಣಿಯಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟ’, ಸಾರಾ ಸ್ನೂಕ್ ಅವರು ‘Succession’ ಸರಣಿಯಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟಿ’ ಪ್ರಶಸ್ತಿಗಳನ್ನು ಪಡೆದಿದ್ದಾರೆ.

75ನೇ ಪ್ರೈಮ್‌ಟೈಮ್ ಎಮ್ಮಿ ಅವಾರ್ಡ್ಸ್ (Emmys Awards) 2024 ಘೋಷಣೆಯಾಗಿವೆ. ಜನವರಿ 15 ರಂದು US ನಲ್ಲಿ ಪ್ರಶಸ್ತಿ ಸಮಾರಂಭ ಜರುಗಿದೆ. ಈ ವರ್ಷದ ವಿಮರ್ಶಕರ ವಿಭಾಗದಲ್ಲಿ ಅತ್ಯುತ್ತಮ ಸರಣಿ ಆಸ್ಕರ್‌ ಪ್ರಶಸ್ತಿಯನ್ನು ಪಡೆದ ‘Succession’ ಸರಣಿಯು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ‘Bear’ ಸರಣಿಯು ಅತ್ಯುತ್ತಮ ಹಾಸ್ಯ ಸರಣಿ ಪ್ರಶಸ್ತಿ ಪಡೆದುಕೊಂಡಿದೆ. Kieran Culkin ಅವರು ‘Succession’ ಸರಣಿಯಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟ’, ಸಾರಾ ಸ್ನೂಕ್ ಅವರು ‘Succession’ ಸರಣಿಯಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟಿ’, ಮ್ಯಾಥ್ಯೂ ಮ್ಯಾಕ್‌ ಫಾಡೆನ್ ಅವರು ‘Succession’ ಸರಣಿಯಲ್ಲಿನ ನಟನೆಗಾಗಿ ʼಅತ್ಯುತ್ತಮ ಪೋಷಕ ನಟʼ, ಜೆನ್ನಿಫರ್ ಕೂಲಿಡ್ಜ್ ಅವರು ‘The White Lotus’ ಸರಣಿಯ ನಟನೆಗಾಗಿ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಜೆರೆಮಿ ಅಲೆನ್ ವೈಟ್ ಅವರು ‘Bear’ ಹಾಸ್ಯ ಸರಣಿಯಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟ’, ‘Abbott Elementary’ ಸರಣಿಯಲ್ಲಿನ ನಟನೆಗಾಗಿ ಕ್ವಿಂಟಾ ಬ್ರನ್ಸನ್ ಅವರು ‘ಅತ್ಯುತ್ತಮ ನಟಿ’, ಅತ್ಯುತ್ತಮ ಪೋಷಕ ನಟ ಹಾಸ್ಯ ಸರಣಿ ವಿಭಾಗದಲ್ಲಿ ‘The Bear’ ಸರಣಿಯಲ್ಲಿನ ನಟನೆಗಾಗಿ ಎಬಾನ್ ಮಾಸ್ ಪ್ರಶಸ್ತಿ ಪಡೆದಿದ್ದಾರೆ. Ayo Edebiri ಅವರು ಇದೇ ಸರಣಿಯಲ್ಲಿನ ನಟನೆಗಾಗಿ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ ಗೆದ್ದಿದ್ದಾರೆ. ಅತ್ಯುತ್ತಮ ಆಂಥಾಲಜಿ ಸರಣಿ ವಿಭಾಗದಲ್ಲಿ Netflixನ ‘Beef’ ಸರಣಿ ಪ್ರಶಸ್ತಿ ಪಡೆದುಕೊಂಡಿದೆ.

ಇದೇ ವಿಭಾಗದಲ್ಲಿ ಸ್ಟೀವನ್ ಯೂನ್ ಅವರು ‘Beef’ ಸರಣಿಯಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟ’, ಅಲಿ ವಾಂಗ್ ಅವರು ಇದೇ ಸರಣಿಯಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟಿ’, ಅತ್ಯುತ್ತಮ ಪೋಷಕ ನಟ ಅಂಥಾಲಜಿ ಸರಣಿ ವಿಭಾಗದಲ್ಲಿ ‘Black Bird’ ಸರಣಿಯಲ್ಲಿನ ನಟನೆಗಾಗಿ ಪಾಲ್ ವಾಲ್ಟರ್ ಪ್ರಶಸ್ತಿ ಪಡೆದಿದ್ದಾರೆ. ‘Dahmer — Monster: The Jeffrey Dahmer Story’ ಸರಣಿಯಲ್ಲಿನ ನಟನೆಗಾಗಿ ನೀಸಿ ನ್ಯಾಶ್-ಬೆಟ್ಸ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ‘Succession’ ಸರಣಿಗೆ ‘ಅತ್ಯುತ್ತಮ ಬರವಣಿಗೆ ಪ್ರಶಸ್ತಿ ಸಂದಿದೆ. ಹಾಸ್ಯ ಸರಣಿ ಅತ್ಯುತ್ತಮ ಬರವಣಿಗೆ ವಿಭಾಗದಲ್ಲಿ ‘The Bear’ ಸರಣಿಗೆ ಪ್ರಶಸ್ತಿ ದೊರೆತಿದೆ. ಆಂಥಾಲಜಿ ಸರಣಿ ವಿಭಾಗದಲ್ಲಿ ‘Beef’ ಸರಣಿಗೆ ‘ಅತ್ಯುತ್ತಮ ಬರವಣಿಗೆ’ ಪ್ರಶಸ್ತಿ ಸಂದಿದೆ.

‘Succession’ ಸರಣಿ ನಿರ್ದೇಶನಕ್ಕಾಗಿ ಮಾರ್ಕ್ ಮೈಲೋಡ್ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಪಡೆದರೆ, ಕ್ರಿಸ್ಟೋಫರ್ ಸ್ಟೋರರ್‌ ‘The Bear’ ಹಾಸ್ಯ ಸರಣಿ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಅಂಥಾಲಜಿ ವಿಭಾಗದಲ್ಲಿ ‘Beef’ ಸರಣಿಯು ಪ್ರಶಸ್ತಿ ಪಡೆದುಕೊಂಡಿದೆ. ‘The Daily Show with Trevor Noah’ ಸರಣಿಯು ‘ಅತ್ಯುತ್ತಮ ಚರ್ಚಾ ಸರಣಿ’ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ‘RuPaul’s Drag Raceʼ (MTV)’ ಅತ್ಯುತ್ತಮ ರಿಯಾಲಿಟಿ ಸ್ಪರ್ಧೆʼ ಪ್ರಶಸ್ತಿ ಪಡೆದುಕೊಂಡಿದೆ.

‘The Simpsons (Fox)’ ಅತ್ಯುತ್ತಮ ಅನಿಮೇಟೆಡ್ ಪ್ರೋಗ್ರಾಂ ಪ್ರಶಸ್ತಿ ಪಡೆದುಕೊಂಡಿದೆ. ‘Weird: The Al Yankovic Story’ (The Roku Channel)- ಅತ್ಯುತ್ತಮ ದೂರದರ್ಶನ ಚಲನಚಿತ್ರ ಪ್ರಶಸ್ತಿ ಗೆದ್ದಿದೆ. ‘Last Week Tonight With John Oliver’ (HBO/Max) ಸರಣಿಯು ಅತ್ಯುತ್ತಮ ಸ್ಕ್ರಿಪ್ಟೆಡ್ ವೆರೈಟಿ ಸರಣಿ ಪ್ರಶಸ್ತಿ ಪಡೆದುಕೊಂಡಿದೆ. ‘Barack Obama, Working: What We Do Today’ ಸಾಕ್ಷ್ಯಚಿತ್ರವು ‘ಅತ್ಯುತ್ತಮ ನಿರೂಪಕ’ ಪ್ರಶಸ್ತಿ ಪಡೆದುಕೊಂಡಿದೆ.

LEAVE A REPLY

Connect with

Please enter your comment!
Please enter your name here