‘ಬಿಗ್‌ಬಾಸ್‌ ಸೂಚಿಸಿದ್ದ ಸದಸ್ಯರು ಈ ಕೂಡಲೇ ಮುಖ್ಯಧ್ವಾರದಿಂದ ಹೊರಬರಬೇಕು’ ಹೀಗೆ ಬಿಗ್‌ಬಾಸ್ ಧ್ವನಿ ಮನೆಯೊಳಗೆ ಮೊಳಗುತ್ತಿದ್ದ ಹಾಗೆ ಸ್ಪರ್ದಿಗಳ ಮುಖದಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಹೌದು, ಬಿಗ್‌ಬಾಸ್‌ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್ ನಡೆದಿದೆ.

‘ಬಿಗ್‌ಬಾಸ್‌ ಸೂಚಿಸಿದ್ದ ಸದಸ್ಯರು ಈ ಕೂಡಲೇ ಮುಖ್ಯಧ್ವಾರದಿಂದ ಹೊರಬರಬೇಕು’ ಹೀಗೆ ಬಿಗ್‌ಬಾಸ್ ಧ್ವನಿ ಮನೆಯೊಳಗೆ ಮೊಳಗುತ್ತಿದ್ದ ಹಾಗೆ ಸ್ಪರ್ದಿಗಳ ಮುಖದಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಹೌದು, ಬಿಗ್‌ಬಾಸ್‌ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್ ನಡೆದಿದೆ. ಕಳೆದ ವಾರಾಂತ್ಯದಲ್ಲಿ ಹೋಲ್ಡ್‌ನಲ್ಲಿ ಇರಿಸಿದ್ದ ಎಲಿಮಿನೇಷನ್‌ ಪ್ರಕ್ರಿಯೆಗೆ ಈಗ ಇದ್ದಕ್ಕಿದ್ದಂತೆಯೇ ಬಿಗ್‌ಬಾಸ್‌ ಚಾಲನೆ ಕೊಟ್ಟಿದ್ದಾರೆ. ಈ ಹಂತದಲ್ಲಿ ಮನೆಯಿಂದ ಹೊರಹೋಗುತ್ತಿರುವ ಸ್ಪರ್ಧಿ ಯಾರು ಎಂಬುದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ. ಹೌದು, ಬಿಗ್‌ಬಾಸ್‌ ‘ತನಿಷಾ ಈ ಮನೆಯಲ್ಲಿ ನಿಮ್ಮ ಪಯಣ ಇಲ್ಲಿಗೆ ಮುಕ್ತಾಯವಾಗುತ್ತದೆ’ ಎಂಬ ಮಾತಿನೊಂದಿಗೆ ಮಿಡ್‌ವೀಕ್ ಎಲಿಮಿನೇಷನ್‌ ಸ್ಪೋಟಗೊಂಡಿದೆ. ತನಿಷಾ ಕುಪ್ಪಂಡ ಮನೆಯಿಂದ ಹೊರಬೀಳುತ್ತಿದ್ದಾರೆ. ಹಾಗಾದರೆ ಇವೆಲ್ಲವೂ ನಡೆದಿದ್ದು ಹೇಗೆ? ಮನೆಯ ಸದಸ್ಯರ ಪ್ರತಿಕ್ರಿಯೆ ಹೇಗಿತ್ತು? ಈ ಎಲ್ಲವನ್ನೂ ಈವತ್ತಿನ ಎಪಿಸೋಡಿನಲ್ಲಿ ವೀಕ್ಷಿಸಬಹುದು.

LEAVE A REPLY

Connect with

Please enter your comment!
Please enter your name here