‘ಶುಗರ್‌ ಫ್ಯಾಕ್ಟರಿ’ ಸಿನಿಮಾದ ‘ಹಣೆಯ ಬರಹ’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ರಾಘವೇಂದ್ರ ಕಾಮತ್‌ ರಚನೆಯ ಈ ಹಾಡಿಗೆ ಕಬೀರ್‌ ರಫಿ ಸಂಗೀತವಿದೆ. ಖ್ಯಾತ ಗಾಯಕ ಅರ್ಮಾನ್‌ ಮಲಿಕ್‌ ಹಾಡಿಗೆ ದನಿಯಾಗಿದ್ದಾರೆ.

ಡಾರ್ಲಿಂಗ್‌ ಕೃಷ್ಣ ಮತ್ತು ಸೋನಲ್‌ ಮಾಂತೆರೊ ಅಭಿನಯದ ‘ಶುಗರ್‌ ಫ್ಯಾಕ್ಟರಿ’ ಸಿನಿಮಾದ ‘ಹಣೆಯ ಬರಹ’ ಸಾಂಗ್‌ ಬಿಡುಗಡೆಯಾಗಿದೆ. ರಾಘವೇಂದ್ರ ಕಾಮತ್‌ ರಚನೆಯ ಈ ಹಾಡಿಗೆ ಕಬೀರ್‌ ರಫಿ ಸಂಗೀತವಿದೆ. ಖ್ಯಾತ ಗಾಯಕ ಅರ್ಮಾನ್‌ ಮಲಿಕ್‌ ಹಾಡಿಗೆ ದನಿಯಾಗಿದ್ದಾರೆ. ದೀಪಕ್‌ ಅರಸ್‌ ನಿರ್ದೇಶನದ ಈ ಸಿನಿಮಾ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಟೀಸರ್‌, ಹಾಡುಗಳ ಮೂಲಕ ಪ್ರೊಮೋಷನ್‌ ಶುರು ಮಾಡಿರುವ ಚಿತ್ರತಂಡ ಇದೀಗ ಮತ್ತೊಂದು ಸಾಂಗ್‌ ರಿಲೀಸ್‌ ಮಾಡಿದೆ. ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಚಿತ್ರದ ಮತ್ತಿಬ್ಬರು ನಾಯಕಿಯರು. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ. ಹೀರೋ ಡಾರ್ಲಿಂಗ್‌ ಕೃಷ್ಣ ಅವರ ಈವರೆಗಿನ ಸಿನಿಮಾಗಳ ಪೈಕಿ ಇದು ದುಬಾರಿ ಬಜೆಟ್‌ನ ಸಿನಿಮಾ ಎನ್ನಲಾಗಿದೆ. ಆರ್‌ ಗಿರೀಶ್‌ ನಿರ್ಮಾಣದ ಸಿನಿಮಾ ನವೆಂಬರ್‌ 24ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here