‘ಬೈ ಟು ಲವ್‌’ ಯಶಸ್ಸಿನ ಖುಷಿಯಲ್ಲಿರುವ ನಟ ಧನ್ವೀರ್‌ರ ನೂತನ ಸಿನಿಮಾ ‘ವಾಮನ’ ಸೆಟ್ಟೇರಿದೆ. ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸಿನಿಮಾ ಬರಹಗಾರರಾಗಿ ಕೆಲಸ ಮಾಡಿರುವ ಶಂಕರ್‌ ರಾಮನ್‌ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

‘ಬಜಾರ್’ ಸಿನಿಮಾ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದ ಶೋಕ್ದಾರ್ ಧನ್ವೀರ್ ಸದ್ಯ ‘ಬೈ ಟು ಲವ್’ ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ. ‘ಬೈ ಟು ಲವ್’ ಸಕ್ಸಸ್ ಯಾತ್ರೆ ಮುಗಿಸಿಕೊಂಡು ಇದೀಗ ‘ವಾಮನ’ ಸಿನಿಮಾ ಶೂಟಿಂಗ್‌ಗೆ ಸಜ್ಜಾಗಿದ್ದಾರೆ. ಧನ್ವೀರ್ ಗೌಡ ನಟಿಸುತ್ತಿರುವ ಮೂರನೇ ಸಿನಿಮಾ ‘ವಾಮನ’. ಸಂಕ್ರಾಂತಿ ಹಬ್ಬದ ಪ್ರಯುಕ್ತ ವಾಮನ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಬಿಟ್ಟರೆ ಬೇರೆ ಅಪ್‌ಡೇಟ್‌ ಸಿಕ್ಕಿರಲಿಲ್ಲ. ಇದೀಗ ವಾಮನ ಸಿನಿಮಾದ ಮುಹೂರ್ತ ಸರಳವಾಗಿ ದೇವನಹಳ್ಳಿಯ ಕತ್ತಿ ಮಾರಮ್ಮ ದೇಗುಲದಲ್ಲಿ ನೆರವೇರಿದೆ.

ವಾಮನ ಸಿನಿಮಾದ ಮುಹೂರ್ತದ ನಂತರ ಚಿತ್ರತಂಡ ಇಂದಿನಿಂದಲೇ ಶೂಟಿಂಗ್‌ಗೆ ಮುನ್ನುಡಿ ಬರೆದಿದೆ. ಬೆಂಗಳೂರಿನಲ್ಲಿಯೇ‌ ಮೊದಲ ಹಂತದ ಶೂಟಿಂಗ್ ನಡೆಸುತ್ತಿದೆ. ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಅಗಿರುವ ಶಂಕರ್ ರಾಮನ್ ವಾಮನ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಈಕ್ವಿನಾಕ್ಸ್ ಗೋಬಲ್ ಎಂಟರ್ ಟ್ರೈನ್ಮೆಂಟ್ ಪ್ರೊಡಕ್ಷನ್ ನಡಿ ಚೇತನ್ ಕುಮಾರ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. “ಹಿಂದಿನ ಎರಡು ಸಿನಿಮಾಗಳ ಕತೆಗಳಿಗಿಂತ ಇದು ಬೇರೆಯದ್ದೇ ಆದ ರೀತಿಯ ಕಥಾಹಂದರ ಹೊಂದಿದೆ. ಪ್ರಜ್ಞಾಪೂರ್ವಕವಾಗಿ ಇಂಥದ್ದೊಂದು ಕತೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಹಿಂದಿನ ಎರಡು ಚಿತ್ರಗಳಿಗೆ ಸಿಕ್ಕ ಪ್ರೇಕ್ಷಕರ ಬೆಂಬಲ ಈ ಚಿತ್ರಕ್ಕೂ ಮುಂದುವರೆಯಲಿದೆ ಎನ್ನುವ ಭರವಸೆಯಿದೆ” ಎನ್ನುತ್ತಾರೆ ಧನ್ವೀರ್‌.

Previous articleThe Kashmir Files | ತೀವ್ರ ರಾಜಕೀಯ ಸ್ಪರೂಪ ಪಡೆಯುತ್ತಿರುವ ಸಿನಿಮಾ
Next articleಫ್ರೆಶ್ ಅಂಡ್ ಫೀಲ್ ಲವ್ ಸ್ಟೋರಿ ‘ಲಗೋರಿ’; ಸತೀಶ್‌ ವಜ್ರ ಟೆಲಿ ಫಿಲ್ಮ್‌

LEAVE A REPLY

Connect withPlease enter your comment!
Please enter your name here