ಕಲ್ಯಾಣ್‌ ಸಂತೋಷ್‌ ನಿರ್ದೇಶನದ ‘ಸುಂದರಂ ಮಾಸ್ಟರ್’ ತೆಲುಗು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಹರ್ಷ ಚೆಮ್ಮುಡು, ದಿವ್ಯಾ ಶ್ರೀಪಾದ, ಶಾಲಿನಿ ನಂಬು, ಕಾಳಿದಿಂಡಿ ಶ್ವೇತಾ ಪ್ರಮುಖ ಪಾತ್ರಗಳಲ್ಲಿರುವ ಸಿನಿಮಾ ಫೆಬ್ರವರಿ 23ರಂದು ತೆರೆಕಾಣಲಿದೆ.

ಹರ್ಷ ಚೆಮ್ಮುಡು ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಸುಂದರಂ ಮಾಸ್ಟರ್’ ತೆಲುಗು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ಕಲ್ಯಾಣ್ ಸಂತೋಷ್ ಬರೆದು ನಿರ್ದೇಶಿಸಿದ್ದಾರೆ. ದಿವ್ಯಾ ಶ್ರೀಪಾದ, ಶಾಲಿನಿ ನಂಬು, ಕಾಳಿದಿಂಡಿ ಶ್ವೇತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಳ್ಳಿಯೊಂದರಲ್ಲಿ ಯುವಕನೊಬ್ಬನನ್ನು ಮದುವೆಯಾಗಲು ಇಬ್ಬರು ಯುವತಿಯರು ಜಗಳವಾಡುತ್ತಿರುವುದರೊಂದಿಗೆ ಟ್ರೇಲರ್‌ ಆರಂಭವಾಗುತ್ತದೆ. ಆ ಹಳ್ಳಿಯಲ್ಲಿ ಕಪ್ಪು ವರ್ಣದ ಪುರುಷರೆಂದರೆ ವಿಶೇಷ ಪ್ರೀತಿ. ಸುಂದರ್‌ ಮಾಸ್ಟರ್‌ (ಹರ್ಷ ಚೆಮ್ಮುಡು) ಆ ಹಳ್ಳಿಗೆ ಶಿಕ್ಷಕರಾಗಿ ನೇಮಕಗೊಳ್ಳುತ್ತಾರೆ. ಸುಂದರ್‌ ಮಾಸ್ಟರ್‌ ಎಂದರೆ ಹಳ್ಳಿಯ ಮಹಿಳೆಯರಿಗೆ ವಿಶೇಷ ಕಾಳಜಿ, ಅವನಿಗಾಗಿ ಬಗೆಬಗೆಯ ಖಾದ್ಯಗಳನ್ನು ಸಿದ್ದಪಡಿಸುತ್ತಿರುತ್ತಾರೆ. ಹಾಗೂ ಅವನೂ ಎಲ್ಲೇ ಹೋದರೂ ಹಿಂಬಾಲಿಸುತ್ತಿರುತ್ತಾರೆ. ಸುಂದರಂ ಮಾಸ್ಟರ್‌ ಅವನ್ನು ಅಲ್ಲಿನ ಹೆಣ್ಣು ಮಕ್ಕಳಿಂದ ರಕ್ಷಿಸಲು ಆ ಹಳ್ಳಿಯ ಪುರುಷರು ಕಾವಲಿರುತ್ತಾರೆ. ಹಾಸ್ಯದ ಜೊತೆಗೆ ಒಂದು ನಿಗೂಢ ಕಥೆಯೂ ಈ ಚಿತ್ರದಲ್ಲಿದೆ.

ಬುಡಕಟ್ಟು ಪ್ರದೇಶದಲ್ಲಿ ಶಾಲೆಗೆ ನೇಮಕಗೊಂಡ ಒಬ್ಬ ಶಿಕ್ಷಕನು ಅಲ್ಲಿರುವ ಮಕ್ಕಳಿಗೆ ಮತ್ತು ವಯಸ್ಕರಿಗೆ ಶಿಕ್ಷಣ ನೀಡಲು ಹೋದಾಗ ಎದುರಿಸುವ ಸಮಸ್ಯೆಗಳನ್ನು ಹಾಸ್ಯದ ಮೂಲಕ ತೋರಿಸಲಾಗಿದೆ. ಚಿತ್ರವನ್ನು RT Team Works ಮತ್ತು Goalden Media ಬ್ಯಾನರ್‌ ಅಡಿಯಲ್ಲಿ ಅಡಿಯಲ್ಲಿ ನಟ ರವಿತೇಜ ಮತ್ತು ಸುಧೀರ್ ಕುಮಾರ್ ಕುರ್ರು ಜಂಟಿಯಾಗಿ ನಿರ್ಮಿಸಿದ್ದಾರೆ. ಶ್ರೀಚರಣ್ ಪಾಕಳ ಸಂಗೀತ ನೀಡಿದ್ದು, ದೀಪಕ್ ಯರಗೇರ ಛಾಯಾಗ್ರಹಣ
ನಿರ್ವಹಿಸಿದ್ದಾರೆ. ಶ್ರೀಹಿತ ಕೋಟಗಿರಿ, ರಾಜಶೇಖರ್ ರೆಡ್ಡಿ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಸಿನಿಮಾ ಫೆಬ್ರವರಿ 23ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here