ವಿಕ್ರಂ ಭಟ್‌ ನಿರ್ದೇಶನದಲ್ಲಿ ಸನ್ನಿ ಲಿಯೋನ್‌ ನಟಿಸಿರುವ ಸ್ಪೈ – ಥ್ರಿಲ್ಲರ್‌ ಸರಣಿ ‘ಅನಾಮಿಕಾ’ ಟ್ರೈಲರ್‌ ಬಿಡುಗಡೆಯಾಗಿದೆ. ಸೋನಾಲಿ ಸೈಗಲ್‌, ಸಮೀರ್‌ ಸೋನಿ, ರಾಹುಲ್‌ ದೇವ್‌ ಅಭಿನಯದ ಸರಣಿ ಮಾರ್ಚ್‌ 10ರಿಂದ MX Player ನಲ್ಲಿ ಸ್ಟ್ರೀಮ್‌ ಆಗಲಿದೆ.

“Meet Agent M…” ಎನ್ನುವ ಕ್ಯಾಪ್ಶನ್‌ನೊಂದಿಗೆ ಸೋಷಿಯಲ್‌ ಮೀಡಿಯಾದಲ್ಲಿ ನಟಿ ಸನ್ನಿ ಲಿಯೋನ್‌ ತಮ್ಮ ‘ಅನಾಮಿಕಾ’ ವೆಬ್‌ ಸರಣಿಯ ಟ್ರೈಲರ್‌ ಹಂಚಿಕೊಂಡಿದ್ದಾರೆ. ಹತ್ತು ಎಪಿಸೋಡ್‌ಗಳ ಈ ಸ್ಪೈ – ಥ್ರಿಲ್ಲರ್‌ ಸರಣಿ MX Player ನಲ್ಲಿ ಮಾರ್ಚ್‌ 10ರಿಂದ ಸ್ಟ್ರೀಮ್‌ ಆಗಲಿದೆ. ಖ್ಯಾತ ಬಾಲಿವುಡ್‌ ನಿರ್ದೇಶಕ ವಿಕ್ರಮ್‌ ಭಟ್‌ ನಿರ್ದೇಶನದ ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿ ಸಮೀರ್‌ ಸೋನಿ, ರಾಹುಲ್‌ ದೇವ್‌, ಸೋನಾಲಿ ಸೈಗಲ್‌ ನಟಿಸಿದ್ದಾರೆ. ಸರಣಿಯಲ್ಲಿ ಸನ್ನಿ ಲಿಯೋನ್‌ ಮೊದಲ ಬಾರಿ ಸ್ಪೈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವೆಬ್‌ ಸರಣಿ ಮಾದರಿಯಲ್ಲಿ ಕ್ರೈಮ್‌ ಡ್ರಾಮಾ ಜಾನರ್‌ನಲ್ಲಿ ಹಲವಾರು ಕತೆಗಳು ಬಂದಿವೆ. ಈ ಸರಣಿ ಅವುಗಳಿಗಿಂತ ಹೇಗೆ ಭಿನ್ನವಾಗಿರಲಿದೆ ಎಂದು ನೋಡಬೇಕು. ಕಳೆದ ವರ್ಷ ಸರಣಿ ಘೋಷಣೆಯಾದಾಗ ಸನ್ನಿ, “Satnam….the start of something new…and the end of my lockdown. A new journey starting with the ever so nice @vikrampbhatt (sic).” ಎನ್ನುವ ಸಂದೇಶ ಹಾಕಿದ್ದರು. ಈಗ ಸರಣಿ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ. ಲೋನ್‌ರೇಂಜರ್‌ ಬ್ಯಾನರ್‌ನಡಿ ವಿಕ್ರಮ್‌ ಭಟ್‌ ಮತ್ತು ಕೃಷ್ಣ ಭಟ್‌ ಸರಣಿ ನಿರ್ಮಿಸಿದ್ದಾರೆ.

Previous articleಕರ್ಣೇಶ್‌ – ಅನುಷ್ಕಾ ಸಂಸ್ಥೆಯ Clean OTT; ಇದು ಸ್ತ್ರೀಪ್ರಧಾನ ಓಟಿಟಿ ಪ್ಲಾಟ್‌ಫಾರ್ಮ್‌
Next articleವಾರಾಹಿ ಪ್ರೊಡಕ್ಷನ್‌ ಹೌಸ್‌ ಕನ್ನಡ – ತೆಲುಗು ಸಿನಿಮಾ; ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಹೀರೋ

LEAVE A REPLY

Connect with

Please enter your comment!
Please enter your name here