ರಂಜಿತ್‌ ನಿರ್ದೇಶನದ ‘ಸಪ್ಲೈಯರ್‌ ಶಂಕರ’ ಸಿನಿಮಾದ ಹೊಸ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಪ್ರಮೋದ್‌ ಮರವಂತೆ ರಚನೆಯ ಹಾಡಿಗೆ ಆರ್‌ ಬಿ ಭರತ್‌ ಸಂಗೀತ ಸಂಯೋಜಿಸಿದ್ದಾರೆ. ನಕುಲ್‌ ಅಭಯಂಕರ್‌ ಮತ್ತು ಐಶ್ವರ್ಯ ರಂಗರಾಜನ್‌ ಹಾಡಿಗೆ ದನಿಯಾಗಿದ್ದಾರೆ.

ನಿಶ್ಚಿತ್‌ ಕರೋಡಿ ಮತ್ತು ದೀಪಿಕಾ ಆರಾಧ್ಯ ನಟನೆಯ ‘ಸಪ್ಲೈಯರ್‌ ಶಂಕರ’ ಸಿನಿಮಾದ ಲವ್‌ ಸಾಂಗ್‌ ಆನಂದ್‌ ಆಡಿಯೋದಲ್ಲಿ ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಅವರು ರಚಿಸಿರುವ ‘ಮಾಡೊ ಕೆಲಸವ ನೀನು ಮರೆಸಿದೆ’ ಎನ್ನುವ ಈ ಪ್ರೇಮಗೀತೆಯನ್ನು ನಕುಲ್ ಅಭಯಂಕರ್ ಹಾಗೂ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ಸಂಗೀತ ಆರ್ ಬಿ ಭರತ್ ಅವರದು. ಬಾರ್ ಸಪ್ಲೈಯರ್‌ ಒಬ್ಬನ ಸುತ್ತ ನಡೆಯುವ ಕತೆ ‘ಸಪ್ಲೈಯರ್‌ ಶಂಕರ’. ಲವ್, ಕಾಮಿಡಿ, ತಾಯಿ -ಮಗನ ಸೆಂಟಿಮೆಂಟ್, ಬಾರ್ ಸಪ್ಲೈಯರ್ ಜೀವನದ ಜೊತೆಗೆ ಸಸ್ಪೆನ್ – ಥ್ರಿಲ್ಲರ್ ಕಥಾಹಂದರ ಚಿತ್ರದಲ್ಲಿದೆ. ನಿರ್ದೇಶಕ ರಂಜಿತ್ ಅವರೇ ಚಿತ್ರಕ್ಕೆ ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

‘ಗಂಟು ಮೂಟೆ’ ಮತ್ತು ‘ಟಾಮ್ & ಜೆರ್ರಿ’ ಚಿತ್ರಗಳ ಮೂಲಕ ಜನಪ್ರಿರಾಗಿರುವ ನಿಶ್ಚಿತ್ ಕರೋಡಿ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಆರಾಧ್ಯ ಚಿತ್ರದ ನಾಯಕಿ. ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಪಡೀಲ್, ಜ್ಯೋತಿ ರೈ ಚಿತ್ರದ ತಾರಾಬಳಗದಲ್ಲಿದ್ದಾರೆ. ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ಎಂ ಚಂದ್ರಶೇಖರ್ ಮತ್ತು ಎಂ ನಾಗೇಂದ್ರ ಸಿಂಗ್ ನಿರ್ಮಿಸಿರುವ ಚಿತ್ರವಿದು. ಸತೀಶ್ ಕುಮಾರ್ ಛಾಯಾಗ್ರಹಣ , ಸತೀಶ್ ಚಂದ್ರಯ್ಯ ಸಂಕಲನ, ಬಾಲಾಜಿ ಕಲಾ ನಿರ್ದೇಶನ ಚಿತ್ರಕ್ಕಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರಕ್ಕೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಈ ವರ್ಷದ ಕೊನೆಗೆ ಸಿನಿಮಾ ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ.

Previous articleಬಿಗಿಯಿಲ್ಲದ ಚಿತ್ರಕಥೆ, ಕೊನೆಯವರೆಗೂ ಕಾಡದ ನಿಗೂಢತೆ
Next articleಈ ವಾರ ಥಿಯೇಟರ್‌ಗೆ ಬಂದ ಸಿನಿಮಾಗಳು | 13, ತತ್ಸಮ ತದ್ಭವ, ಮಾರ್ಕ್‌ ಆಂಟನಿ

LEAVE A REPLY

Connect with

Please enter your comment!
Please enter your name here