ಸುಶ್ಮಿತಾ ಸೇನ್‌ ನಟನೆಯ ‘ತಾಲಿ’ ಹಿಂದಿ ಸರಣಿಯ ಟ್ರೈಲರ್‌ ಬಿಡುಗಡೆಯಾಗಿದೆ. ತೃತೀಯಲಿಂಗಿ, ಸಾಮಾಜಿಕ ಕಾರ್ಯಕರ್ತೆ ಶ್ರೀಗೌರಿ ಸಾವಂತ್‌ ಬಯೋಪಿಕ್‌ ಸೀರೀಸ್‌ ಇದು. ರವಿ ಜಾಧವ್‌ ನಿರ್ದೇಶನದ ಸರಣಿ ಆಗಸ್ಟ್‌ 15ರಿಂದ JioCinemaದಲ್ಲಿ ಸ್ಟ್ರೀಮ್‌ ಆಗಲಿದೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರನಿರ್ದೇಶಕ ರವಿ ಜಾಧವ್‌ ನಿರ್ದೇಶನದಲ್ಲಿ ಸುಶ್ಮಿತಾ ಸೇನ್‌ ನಟಿಸಿರುವ ಹಿಂದಿ ಸರಣಿ ‘ತಾಲಿ’ ಟ್ರೈಲರ್‌ ಬಿಡುಗಡೆಯಾಗಿದೆ. ತೃತೀಯಲಿಂಗಿ, ಸಾಮಾಜಿಕ ಕಾರ್ಯಕರ್ತೆ ಶ್ರೀಗೌರಿ ಸಾವಂತ್‌ ಬಯೋಪಿಕ್‌ ಸರಣಿಯಲ್ಲಿ ನಟಿ ಸುಶ್ಮಿತಾ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ‘ನಾನು ಗೌರಿ’ ಎಂದು ಸುಶ್ಮಿತಾ ಸೇನ್ ಪರಿಚಯಿಸಿಕೊಳ್ಳುವ ಮೂಲಕ‌ ಟ್ರೈಲರ್‌ ಆರಂಭವಾಗುತ್ತದೆ. ಶ್ರೀಗೌರಿ ಸಾವಂತ್‌ ಸಮಾಜದಲ್ಲಿ ಅಪಮಾನಗಳನ್ನು ಎದುರಿಸಿ ಮೆಟ್ಟಿನಿಂತ ಸಾಹಸಗಾಥೆಯನ್ನು ತೋರಿಸುತ್ತದೆ. ‘ತಾಲಿ’ ಸರಣಿಯು ತೃತೀಯಲಿಂಗಿಗಳು ಎದುರಿಸುತ್ತಿರುವ ಸಮಸ್ಯೆಗಳು, ಸಮಾಜದಲ್ಲಿ ಅವರು ಸಾಧಿಸಿರುವ ಸಾಧನೆಗಳನ್ನು ಹೇಳುತ್ತದೆ. ‘ಈ ಸರಣಿಯಿಂದ ತೃತೀಯಲಿಂಗಿ ಸಮುದಾಯವನ್ನು ಗುರುತಿಸುವ ಮತ್ತು ಸ್ವೀಕರಿಸುವ ಪರಿ ಬದಲಾಗಬಹುದು. ಸಮಾಜದಲ್ಲಿ ಮೂಲೆಗುಂಪಾಗಿರುವ ಈ ಸಮುದಾಯದವರರಿಗೆ ಬೆಂಬಲ, ಪ್ರೋತ್ರಾಹ ಸಿಗುವಂತ ಮನೋಭಾವನೆಯೂ ಮೂಡಬಹುದು’ ಎಂದು ಸರಣಿ ಕುರಿತು ಹೇಳುತ್ತಾರೆ ನಿರ್ದೇಶಕ ರವಿ ಜಾಧವ್‌. ಅರ್ಜುನ್ ಸಿಂಗ್ ಬರನ್ ಮತ್ತು ಕಾರ್ಟ್ಕ್ ಡಿ ನಿಶಾಂದರ್, ಕ್ಷಿತಿಜ್‌ ಪಟವರ್ಧನ್‌ ಬರವಣಿಗೆ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಅರ್ಜುನ್ ಸಿಂಗ್ ಬರನ್, ಕಾರ್ಟ್ಕ್ ಡಿ ನಿಶಾಂದರ್, ಅಫೀಫಾ ಸುಲೇಮಾನ್ ನಾಡಿಯಾದ್‌ವಾಲಾ ನಿರ್ಮಾಣದ ಸರಣಿಯ ಪ್ರಮುಖ ಪಾತ್ರಗಳಲ್ಲಿ ನಿತೀಶ್‌ ರಾಥೋಡ್‌, ಅಂಕುರ್‌ ಭಾಟಿಯಾ, ಕೃತಿಕಾ ಡಿಯೋ, ಐಶ್ಚರ್ಯ ನರ್ಕಾರ್‌, ಹೇಮಾಂಗಿ ಕವಿ, ಶಾನ್‌ ಕಕ್ಕರ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಗಸ್ಟ್‌ 15ರಿಂದ JioCinemaದಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here