ಸರಣಿ ಮುಂದೆ ಸಾಗುತ್ತಿದ್ದಂತೆ ಅದು ಮೊದಲ ಸೀಸನ್‌ನಲ್ಲಿ ಹೊಂದಿದ್ದ ಗಮನವನ್ನು ಕಳೆದುಕೊಳ್ಳುತ್ತದೆ. ಇಡೀ ಪ್ರದರ್ಶನವು ಕೇಂದ್ರೀಕೃತವಾಗಿರುವ ವಿಷಯವಾಗಿರುವ ಮಾನ್‌ಸ್ಟರ್ ಕೂಡಾ ಇಲ್ಲಿ ಗಟ್ಟಿಕಾಳು ಎನಿಸುವುದಿಲ್ಲ. ‘ಸ್ವೀಟ್ ಹೋಮ್’ ಸೀಸನ್-2 ಬ್ಲಾಕ್‌ಬಸ್ಟರ್ ಸೀಕ್ವೆಲ್ ಎಂದು ಹೇಳಲಾಗುವುದಿಲ್ಲ. ಆದರೆ ಸೀಸನ್ ಮೂರಕ್ಕೆ ಇರುವ ಮೆಟ್ಟಿಲು ಎಂದು ಹೇಳಬಹುದು.
ಮೂರು ವರ್ಷಗಳ ಹಿಂದೆ ಮೂಡಿಬಂದಿದ್ದ, ಮನುಷ್ಯರು ರಾಕ್ಷಸರಾಗಿ ಬದಲಾಗುವ ಮತ್ತು ಪರಸ್ಪರ ವೈರಿಗಳಾಗುವ ಭಯಾನಕ ದೃಶ್ಯಗಳೊಂದಿಗೆ ‘ಸ್ವೀಟ್ ಹೋಮ್’ ಭಯ ಹುಟ್ಟಿಸಿತ್ತು. ‘ಸ್ಟೀಟ್ ಹೋಮ್’ ಮೊದಲ ಸೀಸನ್ ದೊಡ್ಡ ಹಿಟ್ ಆಗಿತ್ತು. ಅಮೆರಿಕದಲ್ಲಿ ನೆಟ್‌ಫ್ಲಿಕ್ಸ್‌ನ ಟಾಪ್ 10 ಶೋಗಳಲ್ಲಿ ಸ್ಥಾನ ಗಿಟ್ಟಿಸಿದ ಮೊದಲ K-ಡ್ರಾಮಾ ಆಗಿತ್ತು. ಇದೀಗ ಎರಡನೇ ಸೀಸನ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಸೀಸನ್ 1 ಎಲ್ಲಿ ನಿಂತಿತ್ತೋ ಅಲ್ಲಿಂದಲೇ ಸೀಸನ್ 2ನ ಮೊದಲ ಎಪಿಸೋಡ್ ಆರಂಭವಾಗುತ್ತದೆ.
ಚಾ ಹ್ಯುನ್-ಸು (ಸಾಂಗ್ ಕಾಂಗ್) ಮಾನ್‌ಸ್ಟರ್ (ದೈತ್ಯದ) ಸಂಪೂರ್ಣ ಪರಿವರ್ತನೆಯನ್ನು ವಿರೋಧಿಸುತ್ತಿದ್ದು, ತನ್ನ ಸಹವರ್ತಿ ಗ್ರೀನ್ ಹೋಮ್ ನಿವಾಸಿಗಳು ತಪ್ಪಿಸಿಕೊಳ್ಳಲು ಸಹಾಯ ಮಾಡುವ ಪ್ರಯತ್ನದಲ್ಲಿ ಮಿಲಿಟರಿಗೆ ಶರಣಾಗಿದ್ದಾನೆ. ದುರದೃಷ್ಟವಶಾತ್, ಆ ಬಿಲ್ಡಿಂಗ್‌ನಲ್ಲಿರುವ ಪ್ರತಿಯೊಬ್ಬರೂ ಗುಂಪಿನ ಉತ್ತಮ ಹಿತಾಸಕ್ತಿಗಳನ್ನು ಹೊಂದಿರುವುದಿಲ್ಲ. ರ್ಯು ಜೇ-ಹ್ವಾನ್ (ಲೀ ಜೂನ್-ವೂ) ಅವರ ಸ್ವಯಂ-ಸೇವೆಯ ಕ್ರಮಗಳಿಂದಾಗಿ ಸೇನಾಪಡೆ ನಿವಾಸಿಗಳನ್ನು ಸೆರೆಹಿಡಿದಿದ್ದು, ಅವರನ್ನು ಸಂತ್ರಸ್ತರ ತಾಣಕ್ಕೆ ಕರೆದೊಯ್ಯಲು ಬಯಸಿದ್ದಾರೆ. ಬದುಕುಳಿದವರನ್ನು ಸಿಯೋಲ್ ಮೂಲಕ ಸಾಗಿಸಲಾಗುತ್ತದೆ. ಆದರೆ ಆಶ್ರಯ ತಾಣಕ್ಕೆ ಆಗಮಿಸಿದಾಗ, ಊಹೆಗೆ ನಿಲುಕದ ಸಂಗತಿ ಘಟಿಸಿ ಬಿಡುತ್ತದೆ. ಮೂಗಿನಿಂದ ರಕ್ತಸ್ರಾವವಾಗುತ್ತಾ ಅವರು ತಮ್ಮ ಮಾನವ ರೂಪವನ್ನು ಕಳೆದುಕೊಳ್ಳುತ್ತಿರುವುದು ರೂಪಾಂತರ ಆರಂಭಿಕ ಸಂಕೇತವಾಗಿ ಕಾಣಿಸುತ್ತದೆ. ಸೈನಿಕರು ಅವರನ್ನು ಬದಿಗೆ ತೆಗೆದುಕೊಂಡು ಹೋಗಿ ಶೂಟ್ ಮಾಡುತ್ತಾರೆ. ಅಲ್ಲಿ ದೈತ್ಯಾಕಾರದ ಮಾನ್‌ಸ್ಟರ್ ಬದುಕುಳಿದವರನ್ನು ಓಡಿಸುತ್ತದೆ. ಆದರೆ ಬೇಬಿ ಮಾನ್‌ಸ್ಟರ್ ಸೈನಿಕನ ಮಾನವೀಯತೆಯನ್ನು ಪರೀಕ್ಷಿಸುತ್ತದೆ.
ಏತನ್ಮಧ್ಯೆ, ಹ್ಯುನ್-ಸು ಅವರನ್ನು ಈ ಮಾನ್‌ಸ್ಟರ್ ಸಮಸ್ಯೆಯನ್ನು ತೊಡೆದುಹಾಕಲು ಲಸಿಕೆಯನ್ನು ಕಂಡುಹಿಡಿಯುವ ನೆಪದಲ್ಲಿ ‘ವಿಶೇಷ ಸೋಂಕಿತರನ್ನು’ ಪರೀಕ್ಷಿಸುವ ಸೌಲಭ್ಯಕ್ಕೆ ಕರೆದೊಯ್ಯಲಾಗುತ್ತಿದೆ. ದಾರಿಯಲ್ಲಿ, ತನ್ನ ಟ್ಯಾಂಕ್ ಅನ್ನು ಚಾಲನೆ ಮಾಡುವ ವ್ಯಕ್ತಿ ಸೀಸನ್ ಒಂದರ ಅರ್ಧ-ಮಾನವ ಅರ್ಧ-ದೈತ್ಯಾಕಾರದ ಜಂಗ್ ಉಯಿ-ಮಿಯೊಂಗ್ ಎಂದು ಅವನು ಕಂಡುಕೊಳ್ಳುತ್ತಾನೆ. ಆತ ಮಾಜಿ ಗ್ರೀನ್ ಹೋಮ್ ನಿವಾಸಿ ಪಿಯೋನ್ ಸಾಂಗ್-ವೂಕ್ ಅವರ (ಲೀ ಜಿನ್-ಯುಕೆ) ದೇಹವನ್ನು ಸ್ವಾಧೀನಪಡಿಸಿಕೊಂಡಿದ್ದಾನೆ. ಈ ಬಹಿರಂಗಪಡಿಸುವಿಕೆಯೇ ಇವರ ನಡುವಿನ ಕಾದಾಟಕ್ಕೆ ಕಾರಣವಾಗಿಬಿಡುತ್ತದೆ.
ಮೂರು ಕಂತುಗಳವರೆಗೆ ಸೈನಿಕರು ಮತ್ತು ನಾಗರಿಕರ ನಡುವಿನ ಹೋರಾಟ ಮುಂದುವರಿಯುತ್ತದೆ. ಇದಾದ ನಂತರ ಸ್ವೀಟ್ ಹೋಮ್ ಒಂದು ವರ್ಷ ಮುಂದೆ ಹೋಗುತ್ತದೆ. ಈಗ, ಬದುಕುಳಿದವರು ಒಲಿಂಪಿಕ್ ಕ್ರೀಡಾಂಗಣದಲ್ಲಿ ವಾಸಿಸುತ್ತಿದ್ದಾರೆ, ಮಿಲಿಟರಿಯ ಒಂದು ಬಣ ಅವರನ್ನು ನೋಡಿಕೊಳ್ಳುತ್ತಿದೆ. ಇಲ್ಲಿ ಹೊಸ ಪಾತ್ರಗಳನ್ನು ಪರಿಚಯಿಸಲಾಗುತ್ತದೆ. ಆದರೆ ಈ ಹೊಸ ಸೇರ್ಪಡೆಗಳಲ್ಲಿ ಹೆಚ್ಚಿನವುಗಳು ಯಾಕೆ ಎಂಬುದು ನಮಗೆ ತಿಳಿಯುವುದಿಲ್ಲ. ಅವರ ಹಿನ್ನಲೆಗಳ ಬಗ್ಗೆ ಸ್ಪಷ್ಟತೆ ಸಿಗುವುದಿಲ್ಲ. ಕಥೆ ಮುಂದುವರಿದಂತೆ ಯಾರೆಂದು ಟ್ರ್ಯಾಕ್ ಮಾಡುವುದು ಕಷ್ಟವಾಗಿ ನೋಡುಗರಲ್ಲಿ ಗೊಂದಲವುಂಟು ಮಾಡುತ್ತದೆ. ಇಲ್ಲಿ ಕತೆ ಏನಾಗುತ್ತಿದೆ ಎಂಬುದೇ ಗೊಂದಲಮಯ. ಕೆಲವು ಘಟನೆಗಳು ಅರ್ಥವಾಗುವುದಿಲ್ಲ. ಅವುಗಳನ್ನು ಕತೆ ಎಳೆಯುವುದಕ್ಕಾಗಿ ಸುಮ್ಮನೆ ಸೇರಿಸಿ ಆಮೇಲೆ ಬಿಟ್ಟು ಬಿಡಲಾಗಿದೆ.
ಸರಣಿ ಮುಂದೆ ಸಾಗುತ್ತಿದ್ದಂತೆ ಅದು ಮೊದಲ ಸೀಸನ್‌ನಲ್ಲಿ ಹೊಂದಿದ್ದ ಗಮನವನ್ನು ಕಳೆದುಕೊಳ್ಳುತ್ತದೆ. ಇಡೀ ಪ್ರದರ್ಶನವು ಕೇಂದ್ರೀಕೃತವಾಗಿರುವ ವಿಷಯವಾಗಿರುವ ಮಾನ್‌ಸ್ಟರ್ ಕೂಡಾ ಇಲ್ಲಿ ಗಟ್ಟಿಕಾಳು ಎನಿಸುವುದಿಲ್ಲ. ಈ ಜೀವಿಗಳು ಹೋರಾಟದ ದೃಶ್ಯಕ್ಕಾಗಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತವೆ ಮತ್ತು ನಂತರ ಕಣ್ಮರೆಯಾಗುತ್ತವೆ. ಆದಾಗ್ಯೂ, ಸೈನಿಕರು ವಿವಿಧ ರೀತಿಯ ದೈತ್ಯಾಕಾರದ ಅಸ್ತಿತ್ವವನ್ನು ಕಂಡುಕೊಂಡಿದ್ದರೂ, ಯಾರನ್ನು ಯಾವ ರೀತಿ ಪರಿವರ್ತಿಸುತ್ತದೆ ಎಂಬುದರ ಹಿಂದಿನ ತರ್ಕ ಅಥವಾ ವಿಜ್ಞಾನದ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಕೆಲವು ದೃಶ್ಯಗಳು ಸೀಸನ್ ಒಂದರಂತೆಯೇ ಭರವಸೆ ಮೂಡಿಸಿದ್ದು ಸಾಂಗ್ ಕಾಂಗ್ ನಟನೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಫ್ಲ್ಯಾಶ್‌ಬ್ಯಾಕ್‌ಗಳು ಕಥೆಯನ್ನು ಕನೆಕ್ಟ್ ಮಾಡಲು ಮತ್ತು ಸಂಭಾಷಣೆಗಳನ್ನು ಅರ್ಥೈಸಲು ಸಹಕಾರಿಯಾಗಿದೆ. ಎಲ್ಲಾ ಗೊಂದಲ ಮತ್ತು ಅವ್ಯವಸ್ಥೆಗಳ ನಡುವೆಯೇ ಸೀಸನ್‌ನ ಉತ್ತಮ ದೃಶ್ಯಗಳೆಂದರೆ, ಲೀ ಯುನ್-ಯು ಪಾತ್ರದಲ್ಲಿರುವ ಗೋ ಮಿನ್-ಸಿ ಪಾತ್ರ. ಗೋ ಮಿನ್ ಸಿ ತನ್ನ ಭಾವನಾತ್ಮಕ ನಟನೆಗೆ ಹೆಸರುವಾಸಿಯಾಗಿದ್ದು, ಈ ಬಾರಿಯೂ ಈಕೆ ನಿರಾಶೆಗೊಳಿಸಲಿಲ್ಲ. ಒಟ್ಟಾಗಿ ಹೇಳುವುದಾದರೆ ‘ಸ್ವೀಟ್ ಹೋಮ್’ ಸೀಸನ್-2 ಬ್ಲಾಕ್‌ಬಸ್ಟರ್ ಸೀಕ್ವೆಲ್ ಎಂದು ಹೇಳಲಾಗುವುದಿಲ್ಲ. ಆದರೆ ಸೀಸನ್ ಮೂರಕ್ಕೆ ಇರುವ ಮೆಟ್ಟಿಲು ಎಂದು ಹೇಳಬಹುದು.