ಹೆಚ್ಚು ಪಾತ್ರಗಳು, ಅತಿಯಾದ ಡ್ರಾಮಾ, ಕಿವಿಗೆ ಅಪ್ಪಳಿಸುವ ಹಿನ್ನೆಲೆ ಸಂಗೀತ ಸಿನಿಮಾಗೆ ದುಬಾರಿಯಾಗಿವೆ. ಪ್ರಶಾಂತ್‌ ನೀಲ್‌ರ ಹಿಂದಿನ ಸಿನಿಮಾಗಳಲ್ಲಿ ಅಬ್ಬರದ ಹಿನ್ನೆಲೆ ಸಂಗೀತದೊಂದಿಗೆ Silenceಗೂ ಜಾಗವಿತ್ತು. ‘ಸಲಾರ್‌’ನಲ್ಲಿ ಅದು ಮಿಸ್‌ ಆಗಿದೆ. ಸಾಲಾಗಿ ಬರುವ ಪಾತ್ರಗಳನ್ನು ಅರ್ಥ ಮಾಡಿಕೊಳ್ಳಲೂ ಆಗದಷ್ಟು ಸದ್ದು.

ಈ ಚಿತ್ರದ ಪ್ರೀ ಕ್ಲೈಮ್ಯಾಕ್ಸ್‌ ಸನ್ನಿವೇಶದಲ್ಲೊಂದು ದೃಶ್ಯವಿದೆ. ಹೀರೋ ಕಡೆಯ ವ್ಯಕ್ತಿಯೊಬ್ಬ ನಾಯಕಿ ಆದ್ಯಾಳನ್ನು (ಶ್ರುತಿ ಹಾಸನ್‌) ಜೀಪಿನಲ್ಲಿ ಸುರಕ್ಷಿತ ಸ್ಥಳವೊಂದಕ್ಕೆ ಕರೆದೊಯ್ಯುತ್ತಿರುತ್ತಾನೆ. ಖಳರು ತನ್ನ ಹಿಂದೇಕೆ ಬಿದ್ದಿದ್ದಾರೆ? ಹೀರೋ ಹಿನ್ನೆಲೆ ಏನು? ಎನ್ನುವ ಬಗ್ಗೆ ನಾಯಕಿಗೆ ಗೊಂದಲಗಳಿವೆ. ಜೊತೆಗಿರುವ ವ್ಯಕ್ತಿ ಆಕೆಗೆ ಒಂದೊಂದೇ ವಿಷಯಗಳನ್ನು ಹೇಳುತ್ತಾ ಹೋಗುತ್ತಾನೆ. ನಾಯಕಿಗೆ ತಕ್ಷಣಕ್ಕೆ ಇವೆಲ್ಲಾ ಅರ್ಥವಾಗುತ್ತಿಲ್ಲ. ತಲೆಕೆಡಿಸಿಕೊಂಡು ಮತ್ತೆ ಮತ್ತೆ ಆತನನ್ನು ಕೇಳುತ್ತಿರುತ್ತಾಳೆ. ಈ ಹಂತದಲ್ಲಿ ಚಿತ್ರ ನೋಡುವ ಪ್ರೇಕ್ಷಕನ ಸ್ಥಿತಿಯೂ ಇದೇ ಆಗಿರುತ್ತದೆ! ಕತೆಗೆ ಸಾವಿರಾರು ವರ್ಷಗಳ ಹಿನ್ನೆಲೆ, ದೊಡ್ಡದೊಂದು ಸಾಮ್ರಾಜ್ಯ, ಅದನ್ನು ಆಳುವ 50ಕ್ಕೂ ಹೆಚ್ಚು ನಾಯಕರು.. ಹೀಗೆ ಸಿನಿಮಾದಲ್ಲಿ ವಿಪರೀತ ಪಾತ್ರಗಳು ತುಂಬಿಕೊಂಡಿವೆ.

ಪ್ರಶಾಂತ್‌ ನೀಲ್‌, ಮೇಕಿಂಗ್‌ನಿಂದಾಗಿ ಚಿತ್ರಪ್ರೇಮಿಗಳನ್ನು ಸೆಳೆದ ನಿರ್ದೇಶಕ. ‘ಉಗ್ರಂ’, ‘KGF’ ಸರಣಿ ಸಿನಿಮಾಗಳಲ್ಲಿ ಆಕರ್ಷಕ ವಿಶ್ಯುಯೆಲ್ಸ್‌ನೊಂದಿಗೆ ಕತೆ ನಿರೂಪಿಸಿದ್ದರು. ಆ ಚಿತ್ರಗಳಲ್ಲಿ character elevation, ಮೇಕಿಂಗ್‌ ಮತ್ತು ಕತೆಯ ನಿರೂಪಣೆ ಒಂದಕ್ಕೊಂದು ಬ್ಯಾಲೆನ್ಸ್‌ ಆಗಿದ್ದವು. ಯಾವುದೂ ಅತಿಯಾಗಿರಲಿಲ್ಲ. ಈ ಮೂರೂ ಚಿತ್ರಗಳಿಗೆ ಹೋಲಿಸಿದಲ್ಲಿ ‘ಸಲಾರ್‌’ ತೀರಾ loud ಎನಿಸುತ್ತದೆ. ಹೆಚ್ಚು ಪಾತ್ರಗಳು, ಅತಿಯಾದ ಡ್ರಾಮಾ, ಕಿವಿಗೆ ಅಪ್ಪಳಿಸುವ ಹಿನ್ನೆಲೆ ಸಂಗೀತ ಸಿನಿಮಾಗೆ ದುಬಾರಿಯಾಗಿವೆ. ಪ್ರಶಾಂತ್‌ ನೀಲ್‌ರ ಹಿಂದಿನ ಸಿನಿಮಾಗಳಲ್ಲಿ ಅಬ್ಬರದ ಹಿನ್ನೆಲೆ ಸಂಗೀತದೊಂದಿಗೆ Silenceಗೂ ಜಾಗವಿತ್ತು. ‘ಸಲಾರ್‌’ನಲ್ಲಿ ಅದು ಮಿಸ್‌ ಆಗಿದೆ. ಸಾಲಾಗಿ ಬರುವ ಪಾತ್ರಗಳನ್ನು ಅರ್ಥ ಮಾಡಿಕೊಳ್ಳಲೂ ಆಗದಷ್ಟು ಸದ್ದು.

PAN ಇಂಡಿಯಾ ಎಂದೇ ಕರೆಸಿಕೊಂಡ ‘ಸಲಾರ್‌’ ಮತ್ತೊಂದು ರೀತಿ ಜಾಗತಿಕ ಸಿನಿಮಾ ಕೂಡ ಹೌದು! ಏಕೆಂದರೆ ಪ್ರಶಾಂತ್‌ ನೀಲ್‌ ಹೆಣೆದಿರುವ ಕತೆಯಲ್ಲಿನ ಖಾನ್ಸಾರ್‌ ಸಾಮ್ರಾಜ್ಯದ ಯುದ್ಧಕ್ಕೆಂದು ಹಲವು ದೇಶಗಳಿಂದ ಸೈನ್ಯಗಳು ಬರುತ್ತವೆ! ಚಿತ್ರದ ಕತೆಗೆ ಸಾವಿರ ವರ್ಷಗಳ ಹಿಂದಿನ ಆದಿವಾಸಿಗಳ ಮೂಲವಿದೆ. ಇಂಗ್ಲಿಷ್‌ ಸಿನಿಮಾಗಳಲ್ಲಿ ಮೊದಲು ಪರಿಚಯವಾದ ವಿಲಕ್ಷಣ ಝೋಂಬಿಗಳನ್ನು ಹೋಲುವ ಪಾತ್ರಗಳನ್ನು ಅವರಿಲ್ಲಿ ಸೃಷ್ಟಿಸಿದ್ದಾರೆ. ಪ್ರಸ್ತುತ ಕಾಲಘಟ್ಟದ ಕತೆಯನ್ನೇ ಅವರು ಹೇಳಿದ್ದಾರೆ. ಆದರೆ ‘KGF’ ಸಿನಿಮಾದಂತೆ ಪ್ರತ್ಯೇಕ ಸಾಮ್ರಾಜ್ಯ ಸೃಷ್ಟಿಸಿ ಪಾತ್ರ, ಸನ್ನಿವೇಶಗಳನ್ನು ಎಲಿವೇಟ್‌ ಮಾಡುತ್ತಾ ಹೋಗುತ್ತಾರೆ.

ಎರಡು Partಗಳಲ್ಲಿ ಪೂರ್ಣಗೊಳಿಸುತ್ತೇನೆ ಎಂದೇ ಪ್ರಶಾಂತ್‌ ನೀಲ್‌ ಪಟ್ಟು ಹಿಡಿದು ಕುಳಿತು ಕತೆ ಬರೆದಿದ್ದಾರೆ. ಸರಣಿ ಸಿನಿಮಾಗಳನ್ನೇ ಮಾಡುವುದಾದರೂ Part 1ಕ್ಕೆ ನ್ಯಾಯ ಸಲ್ಲಬೇಕು ಎನ್ನುವುದು ಪ್ರೇಕ್ಷಕರ ಅಪೇಕ್ಷೆ. ಆದರೆ ‘ಸಲಾರ್‌’ ವಿಚಾರದಲ್ಲಿ ಇದಾಗಿಲ್ಲ. Part 2ಗೆ ಕಾಯಲೇಬೇಕೆಂದು ಪ್ರಶಾಂತ್‌ ನೀಲ್‌ ಕತೆ ನಿರೂಪಿಸಿದಂತಿದೆ. ಪಾತ್ರ, ಕತೆ ಪ್ರೇಕ್ಷಕರ ಮನಸ್ಸಿಗಿಳಿಯುವ ಹೊತ್ತಿಗೇ ಸಿನಿಮಾ ಮುಗಿದುಹೋಗುತ್ತದೆ. ಈ ಅಬ್ಬರದಲ್ಲಿ ಕೆಲವು ಆಕರ್ಷಕ ವಿಶ್ಯುಯೆಲ್‌ಗಳ ಆಕ್ಷನ್‌ ಸೀನ್‌ಗಳು ಕಳೆದುಹೋಗುತ್ತವೆ ಎನ್ನುವುದು ಚಿತ್ರಕ್ಕಾಗುವ ಹಿನ್ನೆಡೆ. ಹೀರೋ ಪ್ರಭಾಸ್‌ ಸ್ಕ್ರೀನ್‌ ಪ್ರಸೆನ್ಸ್‌ ಮತ್ತು ಆ ಪಾತ್ರವನ್ನು ಎಲಿವೇಟ್‌ ಮಾಡಿರುವ ರೀತಿ ಅವರ ಅಭಿಮಾನಿಗಳಿಗೆ ಖಂಡಿತ ಇಷ್ಟವಾಗುತ್ತದೆ. ಪೃಥ್ವಿರಾಜ್‌ ಪಾತ್ರಕ್ಕೆ ಬಹುಶಃ ಎರಡನೇ ಭಾಗದಲ್ಲಿ ಹೆಚ್ಚಿನ ಸ್ಕೋಪ್‌ ಸಿಗಬಹುದು. ಇನ್ನಷ್ಟು ಸಾವಧಾನದ ನಿರೂಪಣೆ ಇದ್ದಿದ್ದರೆ ಚಿತ್ರದ ಎಲ್ಲಾ ತಂತ್ರಜ್ಞರ ಕೆಲಸಕ್ಕೆ ಹೆಚ್ಚಿನ ಮನ್ನಣೆ ಸಿಗುತ್ತಿತ್ತು. ಭಾಗ 2ಕ್ಕೆ ಕಾಯುವಷ್ಟು ಭಾರಿ ನಿರೀಕ್ಷೆಯನ್ನೇನೂ ಸಿನಿಮಾ ಹುಟ್ಟುಹಾಕಿಲ್ಲ ಎನ್ನುವುದು ಕೊನೆಯ ಮಾತು.

LEAVE A REPLY

Connect with

Please enter your comment!
Please enter your name here