ನಾಗಭೂಷಣ್‌ ಮತ್ತು ಅಮೃತಾ ಪ್ರೇಮ್‌ ನಟನೆಯ ‘ಟಗರು ಪಲ್ಯ’ ಸಿನಿಮಾದ ಎರಡನೇ ಸಾಂಗ್‌ ಬಿಡುಗಡೆಯಾಗಿದೆ. ಚಿತ್ರ ನಿರ್ಮಿಸುತ್ತಿರುವ ನಟ ಧನಂಜಯ ಅವರ ರಚನೆಯ ಈ ಹಾಡಿಗೆ ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದು, ಮಾಧುರಿ ಶೇಷಾದ್ರಿ ಹಾಡಿದ್ದಾರೆ.

ನಟ ಧನಂಜಯ್‌ ನಿರ್ಮಾಣದ ‘ಟಗರು ಪಲ್ಯ’ ಚಿತ್ರದ ‘ಸೂರ್ಯಕಾಂತಿ ನಾನು’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ ಟೈಟಲ್‌ ಟ್ರ್ಯಾಕ್‌ಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿತ್ತು. ಶೀರ್ಷಿಕೆ ಗೀತೆ ಮತ್ತು ಈಗ ಬಿಡುಗಡೆಯಾಗಿರುವ ಮೆಲೋಡಿ ಗೀತೆಗಳು ಧನಂಜಯ ಅವರ ರಚನೆಗಳೇ ಆಗಿವೆ. ವಾಸುಕಿ ವೈಭವ್‌ ಸಂಗೀತ ಸಂಯೋಜನೆಯ ‘ಸೂರ್ಯಕಾಂತಿ’ ಹಾಡನ್ನು ಮಾಧುರಿ ಶೇಷಾದ್ರಿ ಹಾಡಿದ್ದಾರೆ. ಚಿತ್ರದ ನಾಯಕನಟಿ ಅಮೃತಾ ಪ್ರೇಮ್‌ ಅವರ ಮೇಲೆ ಹಾಡು ಪಿಕ್ಚರೈಸ್‌ ಆಗಿದೆ. ಲಿರಿಕಲ್‌ ವೀಡಿಯೋದಲ್ಲಿ ಚೆಂದದ ಸಾಲುಗಳ ಜೊತೆ ಸಂಗೀತ ಸಂಯೋಜಕ ವಾಸುಕಿ ವೈಭವ್‌, ಗೀತೆ ರಚಿಸಿರುವ ಧನಂಜಯ, ಗಾಯಕಿ ಮಾಧುರಿ ಶೇಷಾದ್ರಿ ಸೇರಿದಂತೆ ಚಿತ್ರೀಕರಣ ಸಂದರ್ಭದ ವೀಡಿಯೋಗ ತುಣುಕುಗಳು ಇವೆ. ಉಮೇಶ್ ಕೆ ಕೃಪ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರದ ನಾಯಕನಟನಾಗಿ ನಾಗಭೂಷಣ್‌ ಇದ್ದಾರೆ. ನಟ ಪ್ರೇಮ್‌ ಪುತ್ರಿ ಅಮೃತಾಗೆ ಇದು ಚೊಚ್ಚಲ ಸಿನಿಮಾ. ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಸ್ ಕೆ ರಾವ್ ಛಾಯಾಗ್ರಹಣ ಚಿತ್ರಕ್ಕಿದೆ. ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ.

Previous article‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ 50 ದಿನ | ಇದೀಗ ZEE5ನಲ್ಲಿ ಸಿನಿಮಾ
Next articleUI ಟೀಸರ್‌ | ನಟ – ನಿರ್ದೇಶಕ ಉಪೇಂದ್ರ ಅಭಿಮಾನಿಗಳ ಮಿಶ್ರ ಪ್ರತಿಕ್ರಿಯೆ

LEAVE A REPLY

Connect with

Please enter your comment!
Please enter your name here