ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ‘UI’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಇಲ್ಲಿ ದೃಶ್ಯಗಳಿಲ್ಲ! ಹಿನ್ನೆಲೆಯಲ್ಲಿ ಮಳೆಯ ಶಬ್ಧ, ಮನುಷ್ಯರ ಮಾತು, ಚೀರಾಟಗಳಿವೆ. ಈ ‘ಆಡಿಯೋ ಟೀಸರ್‌’ ಬಗ್ಗೆ ಉಪೇಂದ್ರ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಉಪೇಂದ್ರ ನಿರ್ದೇಶಿಸಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಯುಐ’ (UI) ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. 90ರ ದಶಕದಿಂದಲೂ ಉಪೇಂದ್ರ ಹಲವು ರೀತಿಯ ಗಿಮಿಕ್‌ಗಳ ಮೂಲಕ ತಮ್ಮ ಸಿನಿಮಾಗಳ ಕುರಿತು ಜನರಲ್ಲಿ ನಿರೀಕ್ಷೆ ಮೂಡಿಸುತ್ತಾರೆ. ಈ ಮತ್ತೆ ಅಂಥದ್ದೇ ಒಂದು ತಂತ್ರಗಾರಿಕೆ ಹೆಣೆದಿದ್ದಾರೆ. ಟೀಸರ್‌ ಕುರಿತಂತೆ ಕೆಲವು ದಿನಗಳ ಹಿಂದೆ ಎರಡು ವೀಡಿಯೋಗಳನ್ನು ಮಾಡಿ ಹರಿಬಿಟ್ಟಿದ್ದರು. ನಿನ್ನೆ ಬೆಂಗಳೂರು ಊರ್ವಶಿ ಥಿಯೇಟರ್‌ನಲ್ಲಿ ಟೀಸರ್‌ ಬಿಡುಗಡೆ ಮಾಡಿದ್ದಾರೆ. ಈ ಟೀಸರ್​ನಲ್ಲಿ ಯಾವುದೇ ದೃಶ್ಯಗಳಿಲ್ಲ! ಹಿನ್ನೆಲೆಯಲ್ಲಿ ಸಂಭಾಷಣೆಗಳು, ನಾನಾ ರೀತಿಯ ಶಬ್ಧಗಳಿವೆ. ಈ ಮೂಲಕ ಟೀಸರ್‌ನ ನೀವೇ ಊಹಿಸಿಕೊಳ್ಳಿ ಎಂದು ಉಪೇಂದ್ರ ಸಿನಿಪ್ರಿಯರಿಗೇ ಟಾಸ್ಕ್‌ ಕೊಟ್ಟಿದ್ದಾರೆ.

ಅನೇಕ ವರ್ಷಗಳ ಬಳಿಕ ಉಪೇಂದ್ರ ಅವರು ಈ ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳಿರುವುದು ವಿಶೇಷ. ಸಹಜವಾಗಿಯೇ ಅಭಿಮಾನಿಗಳಲ್ಲಿ ನಿರೀಕ್ಷೆ ಜೋರಾಗಿದೆ. ನಿನ್ನೆ ಸೆಪ್ಟೆಂಬರ್ 18ರ ಉಪೇಂದ್ರರ ಜನ್ಮದಿನದಂದು ಅಭಿಮಾನಿಗಳ ಸಮ್ಮುಖದಲ್ಲಿ ಟೀಸರ್‌ ಬಿಡುಗಡೆಯಾಗಿದೆ. ಸಮಾರಂಭದಲ್ಲಿ ಶಿವರಾಜ್​​ಕುಮಾರ್​, ಗೀತಾ ಶಿವರಾಜ್​ಕುಮಾರ್​, ದುನಿಯಾ ವಿಜಯ್​ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ‘ಆಡಿಯೋ ಟೀಸರ್‌’ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಮಧ್ಯೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೆಲವು ಉಪೇಂದ್ರರ ಸೃಜನಶಿಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಇದು ಚೀಪ್‌ ಗಿಮಿಕ್‌ ಎಂದು ಮೂಗು ಮುರಿದಿದ್ದಾರೆ.

https://twitter.com/veerupatil877/status/1703813160275423607?ref_src=twsrc%5Etfw%7Ctwcamp%5Etweetembed%7Ctwterm%5E1703813160275423607%7Ctwgr%5E9c2e1a187ff995bf40feb9cfc314ee68c177a6b8%7Ctwcon%5Es1_c10&ref_url=https%3A%2F%2Fpublish.twitter.com%2F%3Fquery%3Dhttps3A2F2Ftwitter.com2Fveerupatil8772Fstatus2F1703813160275423607widget%3DTweet

ಟೀಸರ್‌ನಲ್ಲಿ ತಾವು ಯಾವುದೇ ದೃಶ್ಯವನ್ನು ಯಾಕೆ ತೋರಿಸಿಲ್ಲ ಎಂಬುದಕ್ಕೆ ಉಪೇಂದ್ರ ಸಮಜಾಯಿಷಿ ಕೊಟ್ಟಿದ್ದಾರೆ. ‘ಇದೆಲ್ಲವೂ ಕಲ್ಪನೆಯಲ್ಲೇ ಇರಲಿ. ಅದರಲ್ಲೇ ಮಜಾ ಇದೆ. ಇದು ನಿಮ್ಮ ಕಲ್ಪನೆಯನ್ನು ಟೀಸ್​ ಮಾಡುವ ಟೀಸರ್​. ತಲೆ ಎತ್ತಿ ಕಲ್ಪನೆ ಮಾಡಿಕೊಳ್ಳಿ. ತಲೆ ತಗ್ಗಿಸಿ ಮೊಬೈಲ್​ ನೋಡೋದು ಬಿಡಿ. ಇದರಲ್ಲಿ ಸೌಂಡ್​ ಟ್ರಾವೆಲ್​ ಆಗುತ್ತದೆ. ಅದನ್ನು ಗಮನಿಸಿ. ಇದನ್ನು ಕೇಳಿಸಿಕೊಂಡರೆ ನೀವೆಲ್ಲ ಡೈರೆಕ್ಟರ್​ ಆಗುತ್ತೀರಿ’ ಎನ್ನುತ್ತಾರೆ ಉಪೇಂದ್ರ. ಸಿನಿಮಾದ ಗ್ರಾಫಿಕ್ಸ್​ ಬಗ್ಗೆ ಉಪ್ಪಿ ಮಾಹಿತಿ ನೀಡಿದ್ದಾರೆ. ‘ಇದು ಮಾಮೂಲಿ ಸಿನಿಮಾ ಅಲ್ಲ. ಚಿತ್ರದಲ್ಲಿ 90ರಷ್ಟು ಗ್ರಾಫಿಕ್ಸ್​​ ಇದೆ. ಅದಕ್ಕಾಗಿ ನಾಲ್ಕೈದು ಕಡೆಗಳಲ್ಲಿ ಕೆಲಸ ನಡೆಯುತ್ತಿದೆ. ಆ ಕೆಲಸ ಪೂರ್ಣ ಆಗುವ ತನಕ ನಾನು ಏನನ್ನೂ ನಿಮಗೆ ತೋರಿಸಲ್ಲ. ಈ ಜನ್ಮದಿನಕ್ಕೆ ನಮ್ಮ ಅಭಿಮಾನಿಗಳು​ ಹೇಗೆ ಯೋಚನೆ ಮಾಡ್ತಾರೆ ನೋಡೋಣ ಅಂತ ನಿಮ್ಮ ತಲೆಗೆ ಕೆಲಸ ಕೊಟ್ಟಿದ್ದೇನೆ’ ಎನ್ನುತ್ತಾರವರು. Lahari Films ಮತ್ತು Venus Enterrtainers ಬ್ಯಾನರ್‌ ಅಡಿಯಲ್ಲಿ ಜಿ ಮನೋಹರನ್ ಮತ್ತು ಶ್ರೀಕಾಂತ್ ಕೆ ಪಿ ಈ ಸಿನಿಮಾ ನಿರ್ಮಿಸಿದ್ದಾರೆ. ಮೂಲ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here