ಮೆಹರ್‌ ರಮೇಶ್ ನಿರ್ದೇಶನದ ‘ಭೋಳಾ ಶಂಕರ್‌’ ತೆಲುಗು ಚಿತ್ರದಲ್ಲಿ ಚಿರಂಜೀವಿಗೆ ನಾಯಕಿಯಾಗಿ ತಮನ್ನಾ ನಟಿಸಲಿದ್ದಾರೆ. ಇದೇ ತಿಂಗಳಲ್ಲಿ ಸೆಟ್ಟೇರಲಿರುವ ಇದು ‘ವೇದಾಲಂ’ ತಮಿಳು ಚಿತ್ರದ ರೀಮೇಕ್‌.

ಚಿರಂಜೀವಿ ಅಭಿನಯದ ‘ಭೋಳಾ ಶಂಕರ್’ ತೆಲುಗು ಚಿತ್ರದಲ್ಲಿ ತಮನ್ನಾ ನಾಯಕಿಯಾಗಿ ನಟಿಸುವುದು ಖಾತ್ರಿಯಾಗಿದೆ. ಈ ಹಿಂದೆ ತಮನ್ನಾ ‘ಸೇ ರಾ ನರಸಿಂಹರೆಡ್ಡಿ’ ತೆಲುಗು ಚಿತ್ರದಲ್ಲಿ ಚಿರಂಜೀವಿಗೆ ನಾಯಕಿಯಾಗಿದ್ದರು. ಇದೀಗ ಎರಡನೇ ಬಾರಿ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದು, ಇದೇ ತಿಂಗಳ ಮೂರನೇ ವಾರದಲ್ಲಿ ಸಿನಿಮಾ ಸೆಟ್ಟೇರಲಿದೆ. ಯಶಸ್ವೀ ತಮಿಳು ಸಿನಿಮಾ ‘ವೇದಾಲಂ’ ರೀಮೇಕಾದ ‘ಭೋಳಾ ಶಂಕರ್‌’ ಚಿತ್ರದಲ್ಲಿ ದಕ್ಷಿಣದ ಜನಪ್ರಿಯ ನಾಯಕನಟಿ ಕೀರ್ತಿ ಸುರೇಶ್ ಚಿರಜೀವಿ ತಂಗಿಯಾಗಿ ನಟಿಸುತ್ತಿರುವುದು ವಿಶೇಷ. ಅಣ್ಣ – ತಂಗಿಯ ಬಾಂಧವ್ಯದ ಚಿತ್ರವನ್ನು ಎ.ಕೆ.ಎಂಟರ್‌ಟೇನ್‌ಮೆಂಟ್‌ ನಿರ್ಮಿಸುತ್ತಿದ್ದು, ಮಹತಿ ಸಾಗರ್ ಸಂಗೀತ ಸಂಯೋಜಿಸುತ್ತಿದ್ದಾರೆ.

ಇನ್ನು ಚಿರಂಜೀವಿ ಅವರ ‘ಆಚಾರ್ಯ’ ಸಿನಿಮಾ ತೆರೆಗೆ ಸಿದ್ಧವಾಗಿದ್ದು, 2022ರ ಫೆಬ್ರವರಿ 4ರಂದು ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಚಿರಂಜೀವಿ ಅವರೊಂದಿಗೆ ಮೊದಲ ಬಾರಿಗೆ ಅವರ ಪುತ್ರ ರಾಮ್ ಚರಣ್ ತೇಜಾ ನಟಿಸಿದ್ದಾರೆ. ಕಾಜಲ್ ಅಗರ್‌ವಾಲ್ ಮತ್ತು ಪೂಜಾ ಹೆಗ್ಡೆ ಚಿತ್ರದ ಇಬ್ಬರು ನಾಯಕಿಯರು.

LEAVE A REPLY

Connect with

Please enter your comment!
Please enter your name here