ತಮಿಳು ಚಿತ್ರರಂಗದ ಹಿರಿಯ ನಟ ಆರ್‌ ಎಸ್‌ ಶಿವಾಜಿ (66) ನಿಧನರಾಗಿದ್ದಾರೆ. ನಾಲ್ಕು ದಶಕಗಳ ಕಾಲ ತಮ್ಮ ನಟನಾ ವೃತ್ತಿಜೀವನದಲ್ಲಿ ಹಲವಾರು ಸ್ಮರಣೀಯ ಪಾತ್ರಗಳನ್ನು ನಿಭಾಯಿಸಿರುವ ಶಿವಾಜಿ ತಮಿಳು ಕಿರುತೆರೆಯಲ್ಲೂ ಸಕ್ರಿಯರಾಗಿದ್ದರು.

ತಮಿಳು ಚಿತ್ರರಂಗದ ಹಿರಿಯ ನಟ ಆರ್‌ ಎಸ್‌ ಶಿವಾಜಿ (66) ನಿಧನರಾಗಿದ್ದಾರೆ. ಮೊನ್ನೆಯಷ್ಟೇ ತೆರೆಕಂಡಿದ್ದ ಯೋಗಿ ಬಾಬು ಅವರ ‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಚಿತ್ರರಂಗದ ದಿಗ್ಗಜರೊಂದಿಗೆ ತೆರೆ ಹಂಚಿಕೊಂಡಿರುವ ಇವರು ಕಮಲ್ ಹಾಸನ್ ಅವರ ಅನೇಕ ಚಲನಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕಮಲ್‌ ಅವರ ‘ವಿಕ್ರಮ್’, ‘ಸತ್ಯ’, ‘ಅಪೂರ್ವ ಸೋದರರಂಗಳ್‌’, ‘ಗುಣ’, ‘ಅನ್ಬೆ ಶಿವಂ’, ‘ಪಮ್ಮಲ್ ಕೆ ಸಂಬಂಧಂ’, ‘ಉಳಗನಾಯಗನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಉನ್ನೈಪೋಲ್ ಒರುವನ್’, ಕಮಲ್‌ ಜೊತೆಯಲ್ಲಿ ಅವರು ಕಾಣಿಸಿಕೊಂಡ ಕಡೆಯ ಸಿನಿಮಾ.

ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿದ್ದ ಶಿವಾಜಿ ಅವರು ಇತ್ತೀಚಿಗೆ ಗಮನಾರ್ಹ ಪಾತ್ರಗಳನ್ನು ನಿರ್ವಹಿದ್ದರು. ಇವರು ಅಭಿನಯದ ‘ಗಾರ್ಗಿ’ ಸಿನಿಮಾದಲ್ಲಿ ಅತ್ಯಾಚಾರ – ಆರೋಪಿ ಕುಟುಂಬದ ವ್ಯಕ್ತಿಯಾಗಿ ಮಾಡಿದ್ದ ಪಾತ್ರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ‘ಸೂರರೈ ಪೊಟ್ರು’, ‘ಕೋಲಮಾವು ಕೋಕಿಲ’, ‘ಧಾರಾಳ ಪ್ರಭು’, ‘8 ತೊಟ್ಟಕ್ಕಲ್’, ‘ಪ್ಯಾರಿಸ್ ಜಯರಾಜ್’ ಸಿನಿಮಾಗಳಲ್ಲಿ ಕಾಣಿಕೊಂಡಿದ್ದರು ಹಾಗೂ ಕೆಲವು ಟಿವಿ ಧಾರಾವಾಹಿಗಳ ಭಾಗವಾಗಿದ್ದರು. 2000ರಲ್ಲಿ Amazon Primeನ ‘ಟೈಮ್ ಎನ್ನ ಬಾಸ್’ ವೆಬ್‌ ಸರಣಿಯ ಮೂಲಕ ಡಿಜಿಟಲ್ ಮೀಡಿಯಾಗೆ ಪ್ರವೇಶ ಮಾಡಿದ್ದರು. ಇವರ ಸಹೋದರರಾದ ಸಂತಾನ ಭಾರತಿ, ನಿರ್ಮಾಪಕ G ಧನಂಜಯನ್‌, Sun Pictures ಸೇರಿದಂತೆ ಚಿತ್ರರಂಗದ ಇತರ ಹಲವು ಗಣ್ಯರು ನಟನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

Previous articleFTII ಅಧ್ಯಕ್ಷರಾಗಿ ನಟ ಮಾಧವನ್ | ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ರಿಂದ ಅಭಿನಂದನೆ
Next articleನಕ್ಕು ಹಗುರಾಗಬಲ್ಲ family – drama ‘ಸಾಮಜವರಗಮನ’

LEAVE A REPLY

Connect with

Please enter your comment!
Please enter your name here