ಅರುಣ್‌ ಮಾಥೇಶ್ವರನ್‌ ನಿರ್ದೇಶನದಲ್ಲಿ ತಯಾರಾಗಲಿರುವ ಸಂಗೀತ ಸಂಯೋಜಕ ಇಳಯರಾಜಾ ಅವರ ಬಯೋಪಿಕ್‌ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರಕ್ಕೆ ‘ಇಳಯರಾಜ’ ಎಂದೇ ಶೀರ್ಷಿಕೆ ಇಡಲಾಗಿದ್ದು, ಶೀರ್ಷಿಕೆ ಪಾತ್ರದಲ್ಲಿ ಧನುಷ್ ಕಾಣಿಸಿಕೊಳ್ಳಲಿದ್ದಾರೆ.

ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರ ಬಯೋಪಿಕ್‌ ತಯಾರಾಗುತ್ತಿದ್ದು, ಈ ತಮಿಳು ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ‘ಇಳಯರಾಜ’ ಎಂದೇ ಶೀರ್ಷಿಕೆ ಇಡಲಾಗಿದ್ದು, ಶೀರ್ಷಿಕೆ ಪಾತ್ರದಲ್ಲಿ ಧನುಷ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಸಹ ಬಿಡುಗಡೆಯಾಗಿದ್ದು, ಪೋಸ್ಟರ್‌ ಅನ್ನು ಧನುಷ್‌ ಅವರೇ ಅನಾವರಣಗೊಳಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿರುವ ಅವರು, ‘Honoured Ilayaraja Sir’ ಎಂದು ಕ್ಯಾಪ್ಶನ್‌ ನೀಡಿದ್ದಾರೆ. ಈ ಚಲನಚಿತ್ರವನ್ನು Connekkt Media, PK Prime Production ಮತ್ತು Mercuri Movies ಬ್ಯಾನರ್‌ ಗಳು ನಿರ್ಮಿಸಲಿವೆ.

ಇಳಯರಾಜ ಅವರು 1000ಕ್ಕೂ ಹೆಚ್ಚು ಚಲನಚಿತ್ರಗಳಿಗೆ 7000ಕ್ಕೂ ಹೆಚ್ಚು ಹಾಡುಗಳನ್ನು ಸಂಯೋಜಿಸಿದ್ದಾರೆ. ಪ್ರಪಂಚದಾದ್ಯಂತ ಸಾವಿರಾರು ಸಂಗೀತ ಕಚೇರಿಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಇಳಯರಾಜ ಅವರು 2010ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿಯನ್ನು ಮತ್ತು 2018ರಲ್ಲಿ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಚಲನಚಿತ್ರವು ಮೂಲ ತಮಿಳು ಸೇರಿದಂತೆ ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಶ್ರೀರಾಮ್ ಭಕ್ತಿಸರನ್, ಸಿ ಕೆ ಪದ್ಮಕುಮಾರ್, ವರುಣ್ ಮಾಥುರ್, ಇಳಂಪರಿತಿ ಗಜೇಂದ್ರನ್ ಮತ್ತು ಸೌರಭ್ ಮಿಶ್ರಾ ಸಿನಿಮಾ ನಿರ್ಮಿಸುತ್ತಿದ್ದು, ನೀರವ್ ಶಾ ಛಾಯಾಗ್ರಾಹಣ ನಿರ್ವಹಿಸಲಿದ್ದಾರೆ.

LEAVE A REPLY

Connect with

Please enter your comment!
Please enter your name here