ಕನ್ನಡ ಚಿತ್ರನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಾಲ್ ಮಾಂತೆರೊ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಹಲವು ದಿನಗಳಿಂದ ಚಾಲ್ತಿಯಲ್ಲಿದ್ದ ಈ ವದಂತಿ ಇಂದು ಅಧಿಕೃತವಾಗಿದೆ. ಮುಂದಿನ ತಿಂಗಳು ಆಗಸ್ಟ್ 11ರಂದು ಇವರ ವಿವಾಹ ನೆರವೇರಲಿದೆ.
ಸ್ಯಾಂಡಲ್‌ವುಡ್ ಚಿತ್ರನಿರ್ದೇಶಕ ತರುಣ್ ಮತ್ತು ನಟಿ ಸೋನಾಲ್ ಮಾಂತೆರೊ ಮದುವೆ ಆಗ್ತಿದಾರೆ ಅನ್ನೋ ವದಂತಿ ಹಲವು ದಿನಗಳಿಂದ ಓಡಾಡುತ್ತಿತ್ತು. ಈ ಸುದ್ದಿಯನ್ನು ಇಬ್ಬರೂ ಇಂದು ಅಧಿಕೃತಗೊಳಿಸಿದ್ದಾರೆ. ಒಂದು ಸುಂದರ ವೀಡಿಯೋ ಮೂಲಕ ಮದುವೆ ಸುದ್ದಿ ಜೊತೆಗೆ ದಿನಾಂಕವನ್ನೂ ಹೇಳಿದ್ದಾರೆ ತರುಣ್ – ಸೋನಾಲ್. ಮುಂದಿನ ತಿಂಗಳು ಆಗಸ್ಟ್ 11ರಂದು ಇವರ ವಿವಾಹ ನೆರವೇರಲಿದೆ. ನಟ ಸುಧೀರ್ ಅವರ ಕಿರಿಯ ಪುತ್ರ ತರುಣ್ ಬೆಳ್ಳಿತೆರೆಗೆ ಪರಿಚಯವಾಗಿದ್ದು ನಟನಾಗಿ. ‘ಚೌಕ’ ಚಿತ್ರದೊಂದಿಗೆ ನಿರ್ದೇಶಕನಾದ ತರುಣ್ ‘ರಾಬರ್ಟ್’, ‘ಕಾಟೇರ’ ಚಿತ್ರಗಳ ದೊಡ್ಡ ಯಶಸ್ಸಿನ ನಂತರ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ. ತರುಣ್‌ರ ‘ರಾಬರ್ಟ್’ ಚಿತ್ರದಲ್ಲಿ ನಟಿಸಿದ್ದ ಸೋನಾಲ್ ಇದೀಗ ಅವರ ಬಾಳಸಂಗಾತಿ ಆಗ್ತಿದ್ದಾರೆ. ಸಿನಿಪ್ರಿಯರು ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ.
ಇಬ್ಬರೂ ಸಿನಿಮಾ ಕ್ಷೇತ್ರದವರೇ ಆದ್ದರಿಂದ, ಸಿನಿಮಾ ಶೈಲಿಯಲ್ಲಿಯೇ ಇವರ ಪ್ರೀ ವೆಡ್ಡಿಂಗ್ ಫೋಟೋಶೂಟ್ ನಡೆದಿದೆ. ಬೆಂಗಳೂರಿನ ನವರಂಗ್ ಥಿಯೇಟರ್‌ನಲ್ಲಿ ಈವರು ಪ್ರೀ ವೆಂಡ್ಡಿಂಗ್ ಶೂಟ್ ಮಾಡಿಸಿದ್ದಾರೆ. ಶೂಟ್‌ನಲ್ಲಿ ತರುಣ್ ಮತ್ತು ಸೋನಾಲ್ ಬ್ಲಾಕ್ ಅಂಡ್ ಬ್ಲಾಕ್ ಔಟ್ ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತರುಣ್ ಅವರಿಗೆ ಡಿಸೈನರ್ ಚೇತನ್ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದು, ಸೋನಾಲ್ ಅವರಿಗೆ ರಶ್ಮಿ ಡಿಸೈನ್ ಮಾಡಿದ್ದಾರೆ. ಸದ್ಯ ತರುಣ್ ಮತ್ತು ಸೋನಾಲ್ ಮದುವೆ ಸಂಭ್ರಮದಲ್ಲಿದ್ದಾರೆ. ಈವರೆಗೆ ಹೀರೋಯಿನ್ ಮತ್ತು ಡೈರೆಕ್ಟರ್ ಆಗಿದ್ದ ಸೋನಾಲ್ ಮತ್ತು ತರುಣ್ ಇನ್ನು ಕೆಲವೇ ದಿನಗಳಲ್ಲಿ ದಂಪತಿಯಾಗುತ್ತಿದ್ದಾರೆ.