ಬಾಲಿವುಡ್ ತಾರಾಪತ್ನಿಯರು ನಟಿಸುತ್ತಿರುವ ‘ದಿ ಫ್ಯಾಬುಲಸ್‌ ಲೈವ್ಸ್‌ ಆಫ್‌ ಬಾಲಿವುಡ್‌ ವೈಫ್ಸ್‌’ 2ನೇ ಸೀಸನ್ ಶೂಟಿಂಗ್ ಶುರುವಾಗಿದೆ. ಸರಣಿಯಲ್ಲಿ ನಟಿಸುತ್ತಿರುವ ಮಹೀಪ್ ಕಪುರ್‌ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಟೀಸರ್ ಶೇರ್ ಮಾಡಿದ್ದಾರೆ.

ನೆಟ್‌ಫ್ಲಿಕ್ಸ್‌’ನ ಜನಪ್ರಿಯ ಸರಣಿ ‘ದಿ ಫ್ಯಾಬುಲಸ್‌ ಲೈವ್ಸ್‌ ಆಫ್‌ ಬಾಲಿವುಡ್‌ ವೈಫ್ಸ್‌’ ಎರಡನೇ ಸೀಸನ್‌ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಕಳೆದ ವರ್ಷ ಸ್ಟ್ರೀಮ್ ಆಗಿದ್ದ ಮೊದಲನೇ ಸೀಸನ್‌ಗೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವು ಮಿತಿಗಳ ಮಧ್ಯೆಯೂ ಇದೊಂದು ವಿಶೇಷ ಸರಣಿಯಾಗಿ ಗಮನ ಸೆಳೆದದ್ದು ಹೌದು. ಈ ಹಿನ್ನೆಲೆಯಲ್ಲಿ ಎರಡನೇ ಸೀಸನ್‌ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಬಾಲಿವುಡ್‌ ನಟರ ಪತ್ನಿಯರಾದ ಸೀಮಾ ಖಾನ್ (ಸೊಹೈಲ್ ಖಾನ್ ಪತ್ನಿ), ಮಹೀಪ್ ಕಪೂರ್‌ (ಸಂಜಯ್ ಕಪೂರ್ ಪತ್ನಿ), ಭಾವನಾ ಪಾಂಡೆ (ಚುಂಕಿ ಪಾಂಡೆ ಪತ್ನಿ) ಮತ್ತು ನೀಲಂ ಕೊಠಾರಿ (ಸಮೀರ್ ಸೋನಿ ಪತ್ನಿ) ಮೊದಲ ಸೀಸನ್‌ನಲ್ಲಿ ನಟಿಸಿದ್ದರು. ಈಗ ಎರಡನೇ ಸೀಸನ್‌ನಲ್ಲೂ ಅವರು ಮುಂದುವರೆದಿದ್ದಾರೆ. ಮಹೀಪ್ ಕಪೂರ್‌ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಟೀಸರ್ ಶೇರ್ ಮಾಡಿ, “ನಾವು ನಿಮ್ಮ ಸ್ಕ್ರೀನ್‌ ಮೇಲೆ ಮತ್ತೆ ಮರಳುತ್ತಿದ್ದೇವೆ” ಎಂದು ಬರೆದಿದ್ದಾರೆ. ಮೊದಲ ಸೀಸನ್‌ನಲ್ಲಿ ಶಾರುಖ್ ಖಾನ್‌, ಗೌರಿ ಖಾನ್‌, ಮಲೈಕಾ ಅರೋರಾ, ಅರ್ಜುನ್ ಕಪೂರ್‌, ಜಾಹ್ನವಿ ಕಪೂರ್, ಶಾನಯಾ ಕಪೂರ್, ಅನನ್ಯಾ ಪಾಂಡೆ, ಕರಣ್ ಜೋಹರ್‌ ಅತಿಥಿ ಕಲಾವಿದರಾಗಿ ಬಂದು ಹೋಗಿದ್ದರು.

Previous article‘ಮಿಲಿ’ ಚಿತ್ರೀಕರಣ ಪೂರ್ಣಗೊಳಿಸಿದ ಜಾಹ್ನವಿ ಕಪೂರ್; ತಂದೆ ಬೋನಿ ಕಪೂರ್‌ರಿಗೆ ನಟಿಯ ಭಾವುಕ ಪತ್ರ
Next articleನೈಜ ಚಿತ್ರಣದ ‘ಚುಂಬಕ್’; Sony LIVನಲ್ಲಿ ಸ್ಟ್ರೀಮ್ ಆಗುತ್ತಿದೆ ಮರಾಠಿ ಸಿನಿಮಾ

LEAVE A REPLY

Connect with

Please enter your comment!
Please enter your name here