ಬಾಲಿವುಡ್‌ನ ಜನಪ್ರಿಯ ನಾಯಕನಟಿ ಮೀನಾ ಕುಮಾರಿ ಮತ್ತು ಖ್ಯಾತ ಚಿತ್ರನಿರ್ದೇಶಕ ಕಮಲ್‌ ಅಮ್ರೋಹಿ ಪ್ರೇಮಕತೆ ವೆಬ್‌ ಸರಣಿ ರೂಪದಲ್ಲಿ ಮೂಡಿಬರಲಿದೆ. ಹಿಂದಿ ಸಿನಿಮಾರಂಗದ ಕ್ಲಾಸಿಕ್‌ ಸಿನಿಮಾಗಳಲ್ಲೊಂದಾದ ‘ಪಕೀಝಾ’ ಸಿನಿಮಾ ತಯಾರಿಕೆ ಹಿನ್ನೆಲೆಯಲ್ಲಿ ಈ ಕತೆ ಹೆಣೆಯಲಾಗುತ್ತಿದೆ.

ನಟಿ ಮೀನಾಕುಮಾರಿ ಮತ್ತು ಅವರ ಪತಿ, ಚಿತ್ರನಿರ್ದೇಶಕ ಕಮಲ್‌ ಅಮ್ರೋಹಿ ಕುರಿತ ವೆಬ್‌ ಸರಣಿಗೆ ರೂಪುರೇಷೆ ಸಿದ್ಧವಾಗುತ್ತಿದೆ. ಕಮಲ್‌ ಅಮ್ರೋಹಿ ಮೊಮ್ಮಗ ಬಿಲಾಲ್‌ ಅಮ್ರೋಹಿ ಅವರು Yoodlee Films ಸಹಯೋಗದಲ್ಲಿ ಸರಣಿ ನಿರ್ಮಿಸಲಿದ್ದಾರೆ. ಬಾಲಿವುಡ್‌ನ ಕ್ಲಾಸಿಕ್‌ ಚಿತ್ರಗಳಲ್ಲೊಂದಾದ ‘ಪಾಕಿಝಾ’ ಸಿನಿಮಾ ತಯಾರಾದ ಸಂದರ್ಭದ ಹಿನ್ನೆಲೆಯಲ್ಲಿ ಕತೆ ಹೆಣೆಯಲಾಗುತ್ತಿದೆ. ಕಮಲ್‌ ಅಮ್ರೋಹಿ ನಿರ್ದೇಶನದ ಈ ಸಿನಿಮಾದಲ್ಲಿ ಮೀನಾ ಕುಮಾರಿ ಅಭಿನಯಿಸಿದ್ದಾರೆ. ‘ಪಕಿಝಾ’ ಸಿನಿಮಾ ತಯಾರಿಕೆಗೆ ಸುಮಾರು ಹದಿನಾರು ವರ್ಷಗಳೇ ಹಿಡಿಯಿತು. ಸರಣಿಯಲ್ಲಿ ಮೀನಾಕುಮಾರಿ ಮತ್ತು ಕಮಲ್‌ ಅಮ್ರೋಹಿ ಅವರ ಬದುಕು, ಸಿನಿಮಾ, ಪ್ರೀತಿಯ ಘಟನಾವಳಿಗಳ ಸುತ್ತಲಿನ ಸಂದರ್ಭಗಳು ಕಾಣಿಸಲಿವೆ.

ಕಮಲ್‌ ಅಮ್ರೋಹಿ ಅವರ ಮೊಮ್ಮಗ ಬಿಲಾಲ್‌ ಅವರು ಈ ಸರಣಿ ಬಗ್ಗೆ ಆಶಾವಾದಿಯಾಗಿದ್ದಾರೆ. ಸರಣಿಯಲ್ಲಿ ಮುಖ್ಯಪಾತ್ರಗಳ ಕುರಿತಾಗಷ್ಟೇ ಮಾಹಿತಿ ಇರುವುದಿಲ್ಲ. ಬದಲಿಗೆ ‘ಪಕೀಝಾ’ ಸಿನಿಮಾ ಚಿತ್ರೀಕರಣ ಸಂದರ್ಭದ ಕಾಲಘಟ್ಟ, ವಿನ್ಯಾಸ, ಕಾಸ್ಟ್ಯೂಮ್‌ ಸೇರಿದಂತೆ ಸೂಕ್ಷ್ಮ ವಿವರಗಳನ್ನು ನೀಡಲಾಗುವುದು ಎಂದಿದ್ದಾರೆ. “ಆಗ ಸುಮಾರು ಒಂದೂವರೆ ಕೋಟಿ ಬಜೆಟ್‌ನಲ್ಲಿ ತಯಾರಾದ ಪಾಕೀಝಾಗಾಗಿ ನನ್ನ ತಾತ ಹದಿನಾರು ವರ್ಷಗಳನ್ನು ವ್ಯಯಿಸಿದ್ದರು. ಅವರ ಬದ್ಧತೆ, ವಿಷನ್‌ನಿಂದಾಗಿ ಈ ಸಿನಿಮಾ ಕ್ಲಾಸಿಕ್‌ ಎನಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಸರಣಿಗೆ ಸಾಕಷ್ಟು ಮಹತ್ವವಿದೆ” ಎನ್ನುತ್ತಾರೆ ಬಿಲಾಲ್‌. 2023ರಲ್ಲಿ ಸರಣಿ ಸೆಟ್ಟೇರಲಿದ್ದು, ಇತರೆ ವಿವರಗಳು ಮುಂದಿನ ದಿನಗಳಲ್ಲಿ ಸಿಗಲಿವೆ.

LEAVE A REPLY

Connect with

Please enter your comment!
Please enter your name here