ಪ್ರೇಕ್ಷಕರು ಹಾಗೂ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾದ ‘ದಿ ಗ್ರೇಟ್‌ ಇಂಡಿಯನ್‌ ಕಿಚನ್‌’ ಮಲಯಾಳಂ ಸಿನಿಮಾ ಹಿಂದಿಗೆ ರೀಮೇಕಾಗುತ್ತಿದೆ. ಹರ್ಮನ್‌ ಬವೇಜಾ ನಿರ್ಮಿಸುತ್ತಿರುವ ಚಿತ್ರವನ್ನು ಆರತಿ ಕಡವ್‌ ನಿರ್ದೇಶಿಸುತ್ತಿದ್ದಾರೆ.

ಜಿಯೊ ಬೇಬಿ ನಿರ್ದೇಶನದ ‘ದಿ ಗ್ರೇಟ್‌ ಇಂಡಿಯನ್‌ ಕಿಚನ್‌’ ಮಲಯಾಳಂ ಸಿನಿಮಾ ಕಳೆದ ವರ್ಷ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗಿತ್ತು. ದಕ್ಷಿಣ ಭಾರತ ಮಾತ್ರವಲ್ಲದೆ ಉತ್ತರ ಭಾರತದಲ್ಲೂ ಸಿನಿಮಾ ದೊಡ್ಡ ಸದ್ದು ಮಾಡಿತ್ತು. ಈ ಯಶಸ್ವೀ ಸಿನಿಮಾ ತಮಿಳಿನಲ್ಲಿ ರೀಮೇಕಾಗುತ್ತಿದೆ. ಐಶ್ವರ್ಯಾ ರಾಜೇಶ್‌ ಮತ್ತು ರಾಹುಲ್‌ ರವೀಂದ್ರನ್‌ ಅಲ್ಲಿ ದಂಪತಿಯಾಗಿ ಕಾಣಸಿಕೊಂಡಿದ್ದಾರೆ. ಇನ್ನು ಸಿನಿಮಾ ಹಿಂದಿಯಲ್ಲೂ ತಯಾರಾಗುವ ವಿಷಯ ಇಂದು ಘೋಷಣೆಯಾಗಿದೆ. ಹರ್ಮನ್‌ ಬವೇಜಾ ನಿರ್ಮಿಸುತ್ತಿರುವ ಚಿತ್ರವನ್ನು ಆರತಿ ಕಡವ್‌ ನಿರ್ದೇಶಿಸಲಿದ್ದಾರೆ. ಚಿತ್ರದ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟಿ ಸಾನ್ಯಾ ಮಲ್ಹೋತ್ರಾ ಇಂದು ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ, “So happy and excited to be a part of #TheGreatIndianKitchenHindiRemake can’t wait! (sic),” ಎಂದು ಬರೆದಿದ್ದಾರೆ.

ಹಿಂದಿ ಅವತರಣಿಕೆಯ ನಿರ್ಮಾಪಕ ಹರ್ಮನ್‌ ಬವೇಜಾ ಈ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾ, “ದಿ ಗ್ರೇಟ್‌ ಇಂಡಿಯನ್‌ ಕಿಚನ್‌ ಚಿತ್ರಕ್ಕೆ ವಿಶಿಷ್ಟ ಗುಣವಿದೆ. ಸಿನಿಮಾ ಮುಗಿದ ನಂತರವೂ ಸಿನಿಮಾ ನಿಮ್ಮ ನೆನಪಿನಲ್ಲುಳಿಯುತ್ತದೆ. ಈ ಚಿತ್ರವನ್ನು ಪ್ಯಾನ್‌ ಇಂಡಿಯಾ ಪ್ರೇಕ್ಷಕರಿಗೆ ತಲುಪಿಸಬೇಕೆನ್ನವುದು ನನ್ನ ಆಸೆಯಾಗಿತ್ತು. ಮನರಂಜನೆ ಮತ್ತು ಕಂಟೆಂಟ್‌ – ಡ್ರಿವನ್‌ ಡ್ರಾಮಾದೊಂದಿಗೆ ಈ ಚಿತ್ರವನ್ನು ಆಪ್ತವಾಗಿ ತೆರೆಗೆ ಅಳವಡಿಸಬಹುದು” ಎಂದಿದ್ದಾರೆ. ಪುರುಷ ಪ್ರಧಾನ ಜಗತ್ತಿನಲ್ಲಿ ಗೃಹಿಣಿಯೊಬ್ಬಳ ಸಮಸ್ಯೆ, ಸಂಕಟ, ಮಾನಸಿಕ ತುಮುಲಗಳು ‘ದಿ ಗ್ರೇಟ್‌ ಇಂಡಿಯನ್‌ ಕಿಚನ್‌’ ಚಿತ್ರದ ವಸ್ತು. ಆರ್‌.ಕಣ್ಣನ್‌ ನಿರ್ದೇಶನದಲ್ಲಿ ತಯಾರಾಗುತ್ತಿರುವ ತಮಿಳು ಅವತರಣಿಕೆಯಲ್ಲಿ ಐಶ್ವರ್ಯಾ ರಾಜೇಶ್‌ ಮತ್ತು ರಾಹುಲ್‌ ರವೀಂದ್ರನ್‌ ನಟಿಸುತ್ತಿದ್ದಾರೆ. ಇನ್ನು ಸಾನ್ಯಾ ಮಲ್ಹೋತ್ರಾ ನಟಿಸಿರುವ ‘ಲವ್‌ ಹಾಸ್ಟೆಲ್‌’ ತೆರೆಗೆ ಸಿದ್ಧವಾಗಿದೆ.

Previous articleಟೀಸರ್‌ | ಮೂಢನಂಬಿಕೆ, ಜ್ಯೋತಿಷ್ಯದ ಸುತ್ತ ನಾನಿ ‘ಅಂಟೆ ಸುಂದರಾನಿಕಿ’
Next articleಲವ್‌ – ಥ್ರಿಲ್ಲರ್‌ ಸಿನಿಮಾಗೆ ಸಂದೇಶವೇ ಭಾರ; ಇದು ‘ಪ್ರೇಮ್‌’ ಕಹಾನಿ

LEAVE A REPLY

Connect with

Please enter your comment!
Please enter your name here