ನಟ ನಾನಿ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜನ್ಮದಿನದ ಅಂಗವಾಗಿ ಮೈತ್ರಿ ಮೂವಿ ಮೇಕರ್ಸ್‌, ತನ್ನ ನಿರ್ಮಾಣದಲ್ಲಿ ನಾನಿ ನಟಿಸಿರುವ ‘ಅಂಟೆ ಸುಂದರಾನಿಕಿ’ ತೆಲುಗು ಸಿನಿಮಾದ ಟೀಸರ್‌ ಅನ್ನು ಬಿಡುಗಡೆ ಮಾಡಿದೆ.

ನಾನಿ ಅಭಿನಯದ ಹೊಸ ತೆಲುಗು ಸಿನಿಮಾ ‘ಅಂಟೆ ಸುಂದರಾನಿಕಿ’ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಸಿನಿಮಾ ನಿರ್ಮಿಸುತ್ತಿರುವ ಮೈತ್ರಿ ಮೂವೀ ಮೇಕರ್ಸ್‌ ನಟನ ಜನ್ಮದಿನಕ್ಕೆ ಟೀಸರ್‌ ಬಿಡುಗಡೆಗೊಳಿಸಿದೆ. ಚಿತ್ರದಲ್ಲಿ ನಾನಿ ಅವರು ‘ಸುಂದರ’ ಪಾತ್ರ ನಿರ್ವಹಿಸುತ್ತಿದ್ದಾರೆ. ತನ್ನ ಮನೆಯಲ್ಲಿನ ಅತಿಯಾದ ಸಂಪ್ರದಾಯ ಪಾಲಿಸುವ ಪೋಷಕರ ಬಗ್ಗೆ ಕಿಡಿಕಾರುವ ಯುವಕನಾಗಿ ನಾನಿ ಇಲ್ಲಿ ಕಾಣಿಸುತ್ತಾರೆ. “ಇನ್ನೊಂದೆರೆಡು ಹೋಮಗಳನ್ನು ಮಾಡಿದರೆ, ಜಗತ್ತಿನ ಎಲ್ಲಾ ರೀತಿಯ ಹೋಮಗಳನ್ನು ಮಾಡಿದ ವ್ಯಕ್ತಿ ಎಂದು ನನ್ನ ಹೆಸರು ಗಿನ್ನಿಸ್‌ ಬುಕ್‌ ರೆಕಾರ್ಡ್‌ನಲ್ಲಿ ದಾಖಲಾಗುತ್ತದೆ” ಎಂದು ‘ಸುಂದರ’ ಹೇಳುತ್ತಾನೆ. ಸುಂದರನ ಜ್ಯೋತಿಷ್ಯದಲ್ಲಿ ದೋಷವಿದೆ, ತೊಂದರೆಯಾಗದಿರಲಿ ಎಂದು ನಾನಾ ರೀತಿಯ ಹೋಮ – ಹವನ ನಡೆಸುತ್ತಿರುವುದಾಗಿ ತಾಯಿ ಹೇಳುತ್ತಾಳೆ. ಟೀಸರ್‌ ನೋಡಿದರೆ ಇದೊಂದು ಕಾಮಿಡಿ ಸಿನಿಮಾ ಎನ್ನುವ ಸೂಚನೆ ಸಿಗುತ್ತದೆ. ನಿರ್ಮಾಪಕರು, “love and laugh like never before.” ಎಂದು ತಮ್ಮ ಚಿತ್ರವನ್ನು ಬಣ್ಣಿಸುತ್ತಾರೆ. ಜೂನ್‌ 10ರಂದು ಸಿನಿಮಾ ತೆರೆಕಾಣಲಿದೆ.

Previous articleಟ್ರೈಲರ್‌ | ಅಮಿತಾಭ್‌ ಬಚ್ಚನ್‌ ‘ಝುಂಡ್‌’; ನಾಗರಾಜ್‌ ಮಂಜುಳೆ ಸಿನಿಮಾ ಮಾರ್ಚ್‌ 4ಕ್ಕೆ
Next articleಮಲಯಾಳಂ ಸಿನಿಮಾ ‘ದಿ ಗ್ರೇಟ್‌ ಇಂಡಿಯನ್‌ ಕಿಚನ್‌’ ಹಿಂದಿ ರೀಮೇಕ್‌ನಲ್ಲಿ ಸಾನ್ಯಾ ಮಲ್ಹೋತ್ರಾ

LEAVE A REPLY

Connect with

Please enter your comment!
Please enter your name here