ಅಮೇಜಾನ್‌ ಪ್ರೈಮ್‌ನ ಹಿಟ್‌ ಶೋ ‘ದಿ ಮಾರ್ವೆಲಸ್‌ ಮಿಸೆಸ್‌ ಮೈಸೆಲ್‌’ ಸೀಸನ್‌ 4 ಟ್ರೈಲರ್‌ ಬಿಡುಗಡೆಯಾಗಿದೆ. ಈ ಬಾರಿ ಮಿಡ್ಗೆ ಮತ್ತಷ್ಟು ತಮಾಷೆ ಮತ್ತು ತಾಜಾ ಸ್ಕ್ರೀನ್‌ ಪ್ರಸೆನ್ಸ್‌ನೊಂದಿಗೆ ಕಂಗೊಳಿಸುತ್ತಿದ್ದು, ನೂತನ ಸೀಸನ್‌ನಲ್ಲಿ ವೀಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾಳೆ.

ಅಮೇಜಾನ್‌ ಪ್ರೈಮ್‌ ಇಂದು ‘ದಿ ಮಾರ್ವೆಲಸ್‌ ಮಿಸೆಸ್‌ ಮೈಸೆಲ್‌’ ಸರಣಿಯ ನಾಲ್ಕನೇ ಸೀಸನ್‌ ಟ್ರೈಲರ್‌ ಬಿಡುಗಡೆ ಮಾಡಿದೆ. ರಚೆಲ್‌ ಬ್ರಾಸ್ನಾನ್‌ ನಟನೆಯ ಈ ಸರಣಿಯ ಮೊದಲ ಸೀಸನ್‌ 2017ರ ಮಾರ್ಚ್‌ನಲ್ಲಿ ಸ್ಟ್ರೀಮ್‌ ಆಗಿತ್ತು. ಈ ಸರಣಿಯಲ್ಲಿನ ಉತ್ತಮ ನಟನೆ, ನಿರೂಪಣೆ ಮತ್ತು ನಿರ್ದೇಶನಕ್ಕೆ ವೀಕ್ಷಕರು ತಲೆದೂಗಿದ್ದರು. ಮಿಡ್ಗೆ ಪಾತ್ರದಲ್ಲಿ ನಟಿಸಿದ್ದ ನಟಿ ರಚೆಲ್‌ ಪ್ರೈಮ್‌ ಟೈಂ ಎಮ್ಮಿ ಅವಾರ್ಡ್‌ ಮತ್ತು ಎರಡು ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳನ್ನು ಗಳಿಸಿದ್ದರು. ಮುಂದೆ ಯಶಸ್ವೀ ಸೀಸನ್‌ಗಳು ಮೂಡಿಬಂದು ಇದೀಗ ನಾಲ್ಕನೇ ಸೀಸನ್‌ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ. ಐವತ್ತು, ಅರವತ್ತರ ದಶಕಗಳಲ್ಲಿ ಪುರುಷಪ್ರಧಾನ ಸಮಾಜದಲ್ಲಿ ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಆಗಿ ಯಶಸ್ಸು ಗಳಿಸುವ ಮಿಡ್ಗೆ ಪಾತ್ರ ಈ ಬಾರಿ ಹಿಂದಿನ ಸೀಸನ್‌ಗಳಿಗಿಂತ ಬೋಲ್ಡ್‌ ಆಗಿದೆ. ಈ ಬಾರಿ ಅತಿಥಿ ಕಲಾವಿದರಾಗಿ ಕೆಲ್ಲಿ ಬಿಷಪ್‌, ಮಿಲೊ ವೆಂಟಿಮಿಗ್ಲಿಯಾ, ಜಾನ್‌ ವಾಟರ್‌, ಜೇಸನ್‌ ಅಲೆಕ್ಸಾಂಡರ್‌ ಇರಲಿದ್ದಾರೆ. ಫೆಬ್ರವರಿ 18ರಿಂದ ಸರಣಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

Previous articleಆಸ್ಕರ್‌ ನಾಮಿನೇಷನ್ಸ್‌ 2022; ಬಾರತದ ‘ರೈಟಿಂಗ್‌ ವಿಥ್‌ ಫೈರ್‌’ ಡಾಕ್ಯುಮೆಂಟರಿ ಆಯ್ಕೆ
Next articleಸಸ್ಪೆನ್ಸ್ ಥ್ರಿಲ್ಲರ್ ‘ಚಾರ್ಜ್ ಶೀಟ್’ಗೆ ಚಾಲನೆ; ಲಾಕ್‌ಡೌನ್‌ನಲ್ಲಿ ಹುಟ್ಟಿದ ಕತೆ

LEAVE A REPLY

Connect withPlease enter your comment!
Please enter your name here