ಕಾಜೋಲ್‌ ಅಭಿನಯದ ‘ದಿ ಟ್ರಯಲ್‌: ಪ್ಯಾರ್‌, ಕಾನೂನ್‌, ಧೋಖಾ’ ವೆಬ್‌ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ‘ದಿ ಗುಡ್‌ ವೈಫ್‌’ ಇಂಗ್ಲಿಷ್‌ ಸರಣಿಯ ಹಿಂದಿ ಅವತರಣಿಕೆ ಇದು. ಸದ್ಯದಲ್ಲೇ DisneyPlus Hotstarನಲ್ಲಿ ಈ ಕೋರ್ಟ್‌ ರೂಂ ಡ್ರಾಮಾ ಸರಣಿ ಸ್ಟ್ರೀಮ್‌ ಆಗಲಿದೆ.

Julianna Margulies ಅಭಿನಯದ ‘ದಿ ಗುಡ್‌ ವೈಫ್‌’ ಹಿಂದಿ ಅವತರಣಿಕೆ ‘ದಿ ಟ್ರಯಲ್‌: ಪ್ಯಾರ್‌, ಕಾನೂನ್‌, ಧೋಖಾ’. ಸುಪರ್ಣ ವರ್ಮಾ ನಿರ್ದೇಶನದ ಈ ವೆಬ್‌ ಸರಣಿಯೊಂದಿಗೆ ಬಾಲಿವುಡ್‌ ನಟಿ ಕಾಜಲ್‌ ಅವರ ಡಿಜಿಟಲ್‌ ಡೆಬ್ಯೂ ಆಗುತ್ತಿದೆ. ಇಂದು ಸರಣಿಯ ಟ್ರೈಲರ್‌ ಬಿಡುಗಡೆಯಾಗಿದ್ದು, ಇದೊಂದು ಇಂಟೆನ್ಸ್‌ ಥ್ರಿಲ್ಲರ್‌ ಮತ್ತು ಕೋರ್ಟ್‌ ರೂಂ ಡ್ರಾಮಾ ಎನ್ನುವ ಸೂಚನೆ ಸಿಗುತ್ತದೆ. ಲಂಚದ ರೂಪದಲ್ಲಿ ಸೆಕ್ಷ್ಯುಯಲ್‌ ಫೇವರ್ಸ್‌ ಪಡೆದ ಆರೋಪದಲ್ಲಿ ಅಡಿಷನಲ್‌ ಜಡ್ಜ್‌ ರಾಜೀವ್‌ ಸೇನ್‌ಗುಪ್ತಾ ಬಂಧಿತನಾಗುತ್ತಾನೆ. ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

ಇಬ್ಬರು ಮಕ್ಕಳೊಂದಿಗೆ ಆತನ ಪತ್ನಿ ನೊಯೊನಿಕಾ (ಕಾಜಲ್‌) ವಕೀಲಿಕೆಗೆ ಮರಳುತ್ತಾಳೆ. ಪತಿಯ ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ನೊಯೊನಿಕಾ ಕಾಲೇಜು ವಕೀಲ ಗೆಳೆಯ (ಅಲಿನ್‌ ಖಾನ್‌) ಆಕೆಯ ನೆರವಿಗೆ ಬರುತ್ತಾನೆ. ‘ಡಿಜಿಟಲ್‌ ಸರಣಿಗಳ ಅಭಿಮಾನಿ ನಾನು. ಓಟಿಟಿ ಜಗತ್ತು ಪ್ರವೇಶಿಸಲು DisneyPlus Hotstarನ ಈ ಸರಣಿ ಉತ್ತಮ ವೇದಿಕೆಯಾಯ್ತು’ ಎನ್ನುತ್ತಾರೆ ಕಾಜಲ್‌. ‘The Good Wife’ ಅಮೆರಿಕನ್‌ ಸರಣಿ 2009ರಲ್ಲಿ ಏಳು ಸಂಚಿಕೆಗಳಲ್ಲಿ ಮೂಡಿಬಂದಿತ್ತು. ಈ ಸರಣಿಯ ಹಿಂದಿ ಅವತರಣಿಕೆ – ‘The Trial – Pyaar, Kanoon, Dhoka’. ಜಿಷು ಸೇನ್‌ಗುಪ್ತಾ, ಶೀಬಾ ಛಡ್ಡಾ, ಕುಬ್ರಾ ಸೇಟ್‌, ಅಲಿನ್‌ ಖಾನ್‌ ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

Previous articleರಂಜನೆ ಜೊತೆ ಸಂದೇಶ ‘ರೇವ್‌ ಪಾರ್ಟಿ’ | ರಾಜು ಬೋನಗಾನಿ ನಿರ್ದೇಶನದ ಸಿನಿಮಾ
Next articleವಸಿಷ್ಠ ಸಿಂಹ ‘Loveಲೀ’ ಸಾಂಗ್‌ | ಮಾಸ್‌ – ಕ್ಲಾಸ್‌ ಜಾನರ್‌ ಸಿನಿಮಾ

LEAVE A REPLY

Connect with

Please enter your comment!
Please enter your name here