ಚೇತನ್‌ ಕೇಶವ್‌ ನಿರ್ದೇಶನದಲ್ಲಿ ವಸಿಷ್ಠ ಸಿಂಹ ಮತ್ತು ಸ್ಟೆಫಿ ಪಟೇನ್‌ ನಟಿಸಿರುವ ‘Loveಲೀ’ ಸಿನಿಮಾದ ಮೊದಲ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ‘ರೌಡಿಯಿಸಂ, ಲವ್‌, ಡ್ರಾಮಾ ಜೊತೆ ಫ್ಯಾಮಿಲಿ ಸೆಂಟಿಮೆಂಟ್‌ ಇಲ್ಲಿದೆ’ ಎನ್ನುತ್ತಾರೆ ನಿರ್ದೇಶಕ ಚೇತನ್‌ ಕೇಶವ್‌.

‘ಪ್ರೀತಿಯಲ್ಲಿ ಏನೆಲ್ಲಾ ಇರುತ್ತೆ ಎನ್ನುವುದೇ ಈ ಸಿನಿಮಾ. ಮೊದಲ ಭಾಗದಲ್ಲಿ ರೋಮ್ಯಾಂಟಿಕ್ ಕತೆ ಇದ್ದರೆ, ದ್ವಿತಿಯಾರ್ಧದಲ್ಲಿ ಕಂಟೆಂಟ್ ಬಗ್ಗೆ ಹೇಳಲಾಗಿದೆ. ನಾನು 9 ವರ್ಷದಿಂದ ಚಿತ್ರರಂಗದಲ್ಲಿದ್ದೀನಿ. ಹೆಚ್ಚಾಗಿ ಆ್ಯಕ್ಷನ್ ಸಿನಿಮಾಗೆ ಕೆಲಸ ಮಾಡಿದ್ದೇನೆ. ಹಾಗಾಗಿ ಈ ಚಿತ್ರದಲ್ಲಿ ಮಾಸ್ – ಕ್ಲಾಸ್ ಎರಡನ್ನೂ ಬಳಸಿದ್ದೇನೆ’ ಎನ್ನುತ್ತಾರೆ ನಟ ವಸಿಷ್ಠ ಸಿಂಹ. ಅವರ ಬಹುನಿರೀಕ್ಷಿತ ‘Loveಲೀ’ ಸಿನಿಮಾದ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ರವಿಚಂದ್ರನ್‌, ಉಪೇಂದ್ರ, ಪ್ರೇಮ್‌, ಪ್ರಿಯಾಂಕಾ ಉಪೇಂದ್ರ ಅವರು ಅತಿಥಿಗಳಾಗಿ ಪಾಲ್ಗೊಂಡಿದ್ದ ಸಮಾರಂಭದಲ್ಲಿ ಸಾಂಗ್‌ ಬಿಡುಗಡೆಯಾಯ್ತು.

‘ರೌಡೀಯಿಂಸ, ಲವ್, ಡ್ರಾಮಾ ಹಾಗೂ ಫ್ಯಾಮಿಲಿ ಜಾನರ್‌ನಲ್ಲಿ ಸಿನಿಮಾ ಸಾಗುತ್ತದೆ. ಪ್ರೀತಿ, ನಂಬಿಕೆ ಮೇಲೆ ಸಂಬಂಧಗಳು ಮುಖ್ಯ. ಅವುಗಳನ್ನು ಹೇಗೆ ಉಳಿಸುಕೊಳ್ಳಬೇಕು? ಎಂಬುದು ಕಥೆಯಲ್ಲಿ ಇದೆ. ಸಿನಿಮಾ ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತೆ. ಒಂದೊಳ್ಳೆ ಸಂದೇಶವಿದೆ’ ಎನ್ನುವುದು ಚಿತ್ರದ ನಿರ್ದೇಶಕ ಚೇತನ್‌ ಕೇಶವ್‌ ಅವರ ಮಾತು. ಇದು ಅವರ ಚೊಚ್ಚಲ ನಿರ್ದೇಶನ. ಚಿತ್ರವನ್ನು ಮಂಗಳೂರು, ಬೆಂಗಳೂರು ಉಡುಪಿಯಲ್ಲಿ ಚಿತ್ರಿಸಲಾಗಿದೆ. ಬಾಕಿ ಇರುವ ಒಂದು ಹಾಡನ್ನು ಲಂಡನ್‌ನಲ್ಲಿ ಚಿತ್ರಿಸುವ ಯೋಜನೆಯೂ ಇದೆ. ನಾಯಕನಟಿ ಸ್ಟೇಫಿ ಪಟೇಲ್‌ ಅವರು ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದು, ‘Loveಲೀ’ ಕನ್ನಡದಲ್ಲಿ ಮೊದಲ ಸಿನಿಮಾ. ಚಿತ್ರದಲ್ಲಿ ಅವರ ಪಾತ್ರದ ಹೆಸರು ‘ಜನನಿ’. ಬೇಬಿ ವಂಶಿಕಾ ಚಿತ್ರದಲ್ಲಿ ನಟಿಸಿದ್ದಾಳೆ. ವೀಡಿಯೋ ಹಾಡಿನ ಬಿಡುಗಡೆಯೊಂದಿಗೆ ಚಿತ್ರದ ಪ್ರಚಾರ ಕಾರ್ಯ ಶುರುವಾಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಬಗೆಗಿನ ಮಾಹಿತಿಯನ್ನು ಒಂದೊಂದಾಗಿ ಹಂಚಿಕೊಳ್ಳುವುದಾಗಿ ನಿರ್ಮಾಪಕರು ಹೇಳುತ್ತಾರೆ.

Previous article‘ದಿ ಟ್ರಯಲ್‌’ ಟ್ರೈಲರ್‌ | ಕಾಜೋಲ್‌ ಅಭಿನಯದ ಕೋರ್ಟ್‌ರೂಂ ಡ್ರಾಮಾ
Next article‘ಬೇಕಿತ್ತಾ ಬೇಕಿತ್ತಾ, ಈ ಲವ್ವು ಬೇಕಿತ್ತಾ!’ | ಗುರುನಂದನ್‌ ಸಿನಿಮಾ ಲಿರಿಕಲ್‌ ಸಾಂಗ್‌

LEAVE A REPLY

Connect with

Please enter your comment!
Please enter your name here