ಕನ್ನಡದ ‘ಮುಗಿಲ್‌ ಪೇಟೆ’, ‘ತಲೆದಂಡ’ ಮತ್ತು ‘ಕಾಶ್ಮೀರ ಫೈಲ್ಸ್‌’ ಹಿಂದಿ ಸಿನಿಮಾ ನಾಳೆಯಿಂದ ZEE5 ಓಟಿಟಿಯಲ್ಲಿ ಸ್ಟ್ರೀಮ್‌ ಆಗಲಿವೆ.

ZEE5 ಓಟಿಟಿಯಲ್ಲಿ ಪ್ರತೀ ವಾರ ನೂತನ ಸಿನಿಮಾಗಳು ಸ್ಟ್ರೀಮ್‌ ಆಗುತ್ತಿವೆ. ಈ ವಾರಕ್ಕಾಗಿ ನಾಳೆ ಮೇ 13ರಿಂದ ಕನ್ನಡದ ‘ಮುಗಿಲ್‌ ಪೇಟೆ’, ‘ತಲೆದಂಡ’ ಮತ್ತು ‘ಕಾಶ್ಮೀರ ಫೈಲ್ಸ್‌’ ಹಿಂದಿ ಸಿನಿಮಾ ಸ್ಟ್ರೀಮ್‌ ಆಗಲಿವೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ಕಾಶ್ಮೀರ ಫೈಲ್ಸ್’ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ವಲಸೆ ಆಧರಿಸಿ ತಯಾರಾಗಿದ್ದ ಸಿನಿಮಾ. ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ, ಮಿಥುನ್ ಚಕ್ರವರ್ತಿ ಸೇರಿದಂತೆ ಅನುಭವಿ ತಾರಾಬಳಗ ಚಿತ್ರದಲ್ಲಿದೆ. ಹಿಂದಿಯಲ್ಲಿ ರಿಲೀಸ್ ಆಗಿದ್ದ ಸಿನಿಮಾ ಈಗ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಸ್ಟ್ರೀಮ್‌ ಆಗಲಿದೆ. ಅಂತೆಯೇ ಕನ್ನಡ, ತಮಿಳು,ತೆಲುಗು ಭಾಷೆಗಳಲ್ಲಿ ಓಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ನಟನೆಯ ಕೊನೆಯ ಸಿನಿಮಾಗಳಲ್ಲೊಂದಾದ ‘ತಲೆದಂಡ’ ಕೂಡ ZEE5ನಲ್ಲಿ ಬರುತ್ತಿದೆ. ಏಪ್ರಿಲ್ 1ರಂದು ರಿಲೀಸ್ ಆಗಿದ್ದ ಚಿತ್ರಕ್ಕೆ ವಿಮರ್ಶಕರ ಮೆಚ್ಚುಗೆ ಸಿಕ್ಕಿತ್ತು. ಮುಗ್ಧ ವ್ಯಕ್ತಿಯ ಪರಿಸರ ಪ್ರೇಮ , ಹೋರಾಟದ ಕತೆಯ ಕಂಟೆಂಟ್ ಬೇಸ್ಡ್‌ ಸಿನಿಮಾಗೆ ಪ್ರವೀಣ್ ಕೃಪಾಕರ್ ಆಕ್ಷನ್ ಕಟ್ ಹೇಳಿದ್ದು, ಹರಿಕಾವ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ನಟ ರವಿಚಂದ್ರನ್ ಪುತ್ರ ಮನೋರಂಜನ್ ನಾಯಕನಾಗಿ ನಟಿಸಿದ್ದ ಆ್ಯಕ್ಷನ್ ಮತ್ತು ಕೌಟುಂಬಿಕ ಕತೆಯ ರೊಮ್ಯಾಂಟಿಕ್ ಎಂಟರ್‌ಟೇನರ್‌ ‘ಮುಗಿಲ್ ಪೇಟೆ’ ನಾಳೆಯಿಂದ ಒಟಿಟಿಯಲ್ಲಿ ಸಿಗಲಿದೆ. ‘ಮುಗಿಲ್ ಪೇಟೆ’ ಚಿತ್ರದಲ್ಲಿ ಮನುಗೆ ಜೋಡಿಯಾಗಿ ಕಯಾದು ಲೋಹರ್ ನಾಯಕಿಯಾಗಿ ಅಭಿನಯಿಸಿದ್ದು, ಭರತ್ ಎಸ್.ನಾವುಂದ ನಿರ್ದೇಶಿಸಿದ್ದಾರೆ. ಸಂಗೀತ ಶ್ರೀಧರ್‌ ವಿ.ಸಂಭ್ರಮ್‌ ಅವರದು.

LEAVE A REPLY

Connect with

Please enter your comment!
Please enter your name here