ಉತ್ತರ ಕರ್ನಾಟಕ ಭಾಗದಲ್ಲಿ ತೊಂಬತ್ತರ ದಶಕದ ಮಧ್ಯಭಾಗದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ ‘ಥಗ್ಸ್‌ ಆಫ್‌ ರಾಮಘಡ’. ಕಾರ್ತಿಕ್‌ ಮಾರಲಭಾವಿ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಶ್ವಿನ್‌ ಹಾಸನ ಮತ್ತು ಚಂದನ್‌ ರಾಜ್‌ ಅಭಿನಯಿಸಿದ್ದಾರೆ. ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದ್ದು, ಫಸ್ಟ್‌ಲುಕ್‌ ರಿವೀಲ್‌ ಆಗಿದೆ.

ಸತ್ಯ ಘಟನೆ ಆಧರಿಸಿದ ಸಿನಿಮಾಗಳ ಪಟ್ಟಿಗೆ ಹೊಸ ಸೇರ್ಪಡೆ ‘ಥಗ್ಸ್‌ ಆಫ್‌ ರಾಮಘಡ’. ನಿರ್ದೇಶಕ ಕಾರ್ತಿಕ್‌ ಮಾರಲಭಾವಿ ಅವರು ಉತ್ತರ ಕರ್ನಾಟಕ ಭಾಗದಲ್ಲಿ 1995ರ ಅವಧಿಯಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಈ ಸಿನಿಮಾ ಮಾಡಿದ್ದಾರೆ. ಇದೊಂದು ಕ್ರೈಂ ಕಲ್ಟ್‌ ಕಥಾಹಂದರದ ಚಿತ್ರ ಎನ್ನುತ್ತಾರವರು. ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಇಂಜಿನಿಯರ್‌ ಓದಿಕೊಂಡು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್‌ ಮಾರಲಭಾವಿ ‘ಥಗ್ಸ್‌ ಆಫ್‌ ರಾಮಘಡ’ದೊಂದಿಗೆ ಸಿನಿಮಾರಂಗ ಪ್ರವೇಶಿಸಿದ್ದಾರೆ.

ಸುರಪುರ, ವಿಜಯಪುರ, ಶಹಾಪುರ, ತಾಳಿಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಸದ್ಯ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, 2023ರ ಜನವರಿಯಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ. ಅಶ್ವಿನ್‌ ಹಾಸನ ಮತ್ತು ಚಂದನ್‌ ರಾಜ್‌ ಚಿತ್ರದ ಮುಖ್ಯಭೂಮಿಕೆ ಕಲಾವಿದರು. “ನಾಯಕನಟನಾಗಿ ವೃತ್ತಿಬದುಕಿನ ಮಹತ್ವದ ಚಿತ್ರವಿದು. ನಿರ್ದೇಶಕ ಕಾರ್ತಿಕ್‌ ತುಂಬಾ ಪ್ಯಾಷನೇಟ್‌ ಆಗಿ ಸಿನಿಮಾ ಕಟ್ಟಿದ್ದಾರೆ. ಉತ್ತರ ಕರ್ನಾಟಕ ನೆಲದ ಕತೆಯನ್ನು ಸೊಗಸಾಗಿ ಹೇಳುವ ಪ್ರಯತ್ನ ನಡೆದಿದೆ” ಎನ್ನುತ್ತಾರೆ ಚಿತ್ರದ ನಾಯಕನಟರಲ್ಲೊಬ್ಬರಾದ ಅಶ್ವಿನ್‌ ಹಾಸನ. ಮೂಲತಃ ರಂಗಭೂಮಿ ಕಲಾವಿದರಾದ ಅಶ್ವಿನ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇದೀಗ ಕನ್ನಡ ವೆಬ್‌ ಸರಣಿಯೊಂದರಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ.

ಮಹಾಲಕ್ಷ್ಮೀ ಚಿತ್ರದ ನಾಯಕನಟಿ. ಸೂರ್ಯ ಕಿರಣ್, ಪ್ರಭು ಹೊಸದುರ್ಗ, ವಿಶಾಲ್ ಪಾಟೀಲ್, ರವಿ ಸಾಲಿಯನ್, ರಾಘವೇಂದ್ರ, ಭೀಷ್ಮ, ಲೋಕೇಶ್ ಗೌಡ, ಟೈಗರ್ ಗಂಗ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಭಾರತ್ ಟಾಕೀಸ್‌ನಡಿ ಜೈಕುಮಾರ್, ಕೀರ್ತಿ ರಾಜ್ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿರುವ ನಾಲ್ಕು ಹಾಡುಗಳಿದ್ದು, ರಾಜೇಶ್ ಕೃಷ್ಣನ್, ಶಶಾಂಕ್ ಶೇಷಗಿರಿ, ಅನುರಾಧ ಭಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಮನು ದಾಸಪ್ಪ ಛಾಯಾಗ್ರಹಣ, ಶ್ರೀಧರ್.ವೈ.ಎಸ್. ಸಂಕಲನ, ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here