ಶಿವ ನಿರ್ವಾಣ ನಿರ್ದೇಶನದ ‘ಖುಷಿ’ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಕನ್ನಡ ಅವತರಣಿಕೆಯಲ್ಲೂ ಹಾಡು ರಿಲೀಸ್‌ ಆಗಿದೆ. ಈ ಹಾಡಿಗೆ ವಿ ನಾಗೇಂದ್ರ ಪ್ರಸಾದ್‌ ಸಾಹಿತ್ಯವಿದ್ದು, ವಿಜಯ್‌ ಪ್ರಕಾಶ್‌ ಹಾಡಿದ್ದಾರೆ. ಹೇಷಾಂ ಅಬ್ದುಲ್‌ ವಹಾಬ್‌ ಸಂಗೀತ ಸಂಯೋಜಿಸಿದ್ದಾರೆ.

ಸಮಂತಾ ಹಾಗೂ ವಿಜಯ್ ದೇವರಕೊಂಡ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ʼಖುಷಿʼ ಸಿನಿಮಾದ ಐದನೇ ಹಾಡು ಬಿಡುಗಡೆಯಾಗಿದೆ. ಸಮಂತಾಗೆ ‘ಹೇ ಹೆಂಡತಿ’ ಎನ್ನುತ್ತಾ ವಿಜಯ್ ಹೆಜ್ಜೆ ಹಾಕಿದ್ದಾರೆ. ಕನ್ನಡದಲ್ಲಿಯೂ ರಿಲೀಸ್ ಆಗಿರುವ ಈ ಹಾಡಿಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಮೆಲೋಡಿ ಹಾಡುಗಳಿಗೆ ಜನಪ್ರಿಯರಾಗಿರುವ ಹೇಷಾಂ ಅಬ್ದುಲ್ ವಹಾಬ್ ಈ ಸಿನಿಮಾದ ಹಾಡಿಗೂ ಟ್ಯೂನ್ ಹಾಕಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ‘ನನ್ನ ರೋಜಾ ನೀನೇ’, ‘ಆರಾಧ್ಯ’ ಗೀತೆಗಳು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿವೆ.

ಈ ಸಿನಿಮಾ ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. Mythri Movies ಬ್ಯಾನರ್ ಅಡಿಯಲ್ಲಿ ಸಿನಿಮಾ ಅದ್ಧೂರಿಯಾಗಿ ನಿರ್ಮಾಣವಾಗಿದ್ದು, ಸಮಂತಾ ಹಾಗೂ ನಾಗಚೈತನ್ಯ ನಟಿಸಿದ್ದ ‘ಮಜಿಲಿ’ ಸಿನಿಮಾದ ನಿರ್ದೇಶಕ ಶಿವ ನಿರ್ವಾಣ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವೆನ್ನೆಲಾ ಕಿಶೋರ್, ರೋಹಿಣಿ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜಿ ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ. ಈ ರೊಮ್ಯಾಂಟಿಕ್ ಲವ್ ಎಂಟರ್‌ಟೇನರ್‌ ಸಿನಿಮಾ ಸೆಪ್ಟೆಂಬರ್ 1ರಂದು ತೆರೆಕಾಣಲಿದೆ.

Previous article‘ಟ್ರೆಂಡಿಂಗಲ್‌ ಬರ್ಬೇಕಂದ್ರೆ’ | ಚಂದನ್‌ ಶೆಟ್ಟಿ ‘ಸೂತ್ರಧಾರಿ’ ಸಿನಿಮಾ ಸಾಂಗ್‌
Next articleಚಿನ್ನದ ಪದಕ ಗೆದ್ದು ಹೊಸ ದಾಖಲೆ ಸೃಷ್ಟಿಸಿದ ನೀರಜ್‌ ಚೋಪ್ರಾ | ತಾರೆಯರಿಂದ ಅಭಿನಂದನೆ

LEAVE A REPLY

Connect with

Please enter your comment!
Please enter your name here