Time magazine ಸಿನಿಮಾ ವಿಶ್ಲೇಷಕಿ Stephanie Zacharek ಕಳೆದ ನೂರು ವರ್ಷಗಳಲ್ಲಿ ತೆರೆಕಂಡ ಜಗತ್ತಿನ 100 ಶ್ರೇಷ್ಠ ಸಿನಿಮಾಗಳನ್ನು ಪಟ್ಟಿ ಮಾಡಿದ್ದಾರೆ. ಸತ್ಯಜಿತ್‌ ರೇ ನಿರ್ದೇಶನ ‘ಪಥೇರ್‌ ಪಾಂಚಾಲಿ’ ಬೆಂಗಾಲಿ ಸಿನಿಮಾ ಈ ಪಟ್ಟಿಯಲ್ಲಿದೆ. ‘The Cabinet of Dr Caligari’ (1920) ಸಿನಿಮಾದಿಂದ ‘Once Upon a Time in Hollywood’ (2019) ಸಿನಿಮಾವರೆಗೆ ನೂರು ಸಿನಿಮಾಗಳ ಆಯ್ಕೆ ನಡೆದಿದೆ.

ಕಳೆದ ಹತ್ತು ದಶಕಗಳಲ್ಲಿ ತೆರೆಕಂಡ ಜಗತ್ತಿನ ಶ್ರೇಷ್ಠ 100 ಸಿನಿಮಾಗಳನ್ನು Time magazine ಪಟ್ಟಿ ಮಾಡಿದೆ. ಪತ್ರಿಕೆಯ ಸಿನಿಮಾ ವಿಶ್ಲೇಷಕಿ Stephanie Zacharek ದಶಕಗಳ ಅಧ್ಯಯನದಿಂದ ತಯಾರಾಗಿರುವ ಪಟ್ಟಿ ಇದು. ಸಿನಿಮಾ ಬೆಳೆದು ಬಂದ ಹಾದಿ ಹಿನ್ನೆಲೆಯ ಮಾನದಂಡದ ಆಧಾರದ ಮೇಲೆ Zacharek ಶ್ರೇಷ್ಠ ಸಿನಿಮಾಗಳನ್ನು ಆಯ್ಕೆ ಮಾಡಿದ್ದಾರೆ. ‘The Cabinet of Dr Caligari’ (1920) ಸಿನಿಮಾದಿಂದ ‘Once Upon a Time in Hollywood’ (2019) ಸಿನಿಮಾವರೆಗೆ ನೂರು ಸಿನಿಮಾಗಳ ಆಯ್ಕೆ ನಡೆದಿದೆ. ಸತ್ಯಜಿತ್‌ ರೇ ನಿರ್ದೇಶನದ ‘ಪಥೇರ್‌ ಪಾಂಚಾಲಿ’ (1955) ಬೆಂಗಾಲಿ ಸಿನಿಮಾ ಈ ಪಟ್ಟಿಯಲ್ಲಿನ ಏಕೈಕ ಭಾರತೀಯ ಸಿನಿಮಾ.

ಜಾಗತಿಕ ಸಿನಿಮಾ ವಲಯದಲ್ಲಿ ಗಮನ ಸೆಳೆದ ಮೊದಲ ಭಾರತೀಯ ಸಿನಿಮಾ ಎಂದು ‘ಪಥೇರ್‌ ಪಾಂಚಾಲಿ’ ಚಿತ್ರವನ್ನು ಪರಿಗಣಿಸಲಾಗುತ್ತದೆ. ಹೊಸ ಅಲೆಯ ಸಿನಿಮಾ ಮಾದರಿಗೆ ಭದ್ರ ಬುನಾದಿ ಹಾಕಿದ ಪ್ರಯೋಗವಿದು. ರಾಷ್ಟ್ರಪ್ರಶಸ್ತಿಗೆ ಭಾಜನವಾದ ಸಿನಿಮಾ Cannesನ Palme d’Or ಗೆ ಸ್ಪರ್ಧಿಸಿತ್ತು. 2005ರಲ್ಲಿ Times magazine ಪಟ್ಟಿ ಮಾಡಿದ ನೂರು ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳ ಪಟ್ಟಿಯಲ್ಲಿ ಚಿತ್ರ ಸೇರ್ಪಡೆಗೊಂಡತ್ತು. Sight & Sound magazine ಪಟ್ಟಿ ಮಾಡಿದ್ದ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳ ಪಟ್ಟಿಯಲ್ಲೂ ‘ಪಥೇರ್‌ ಪಾಂಚಾಲಿ’ ಸ್ಥಾನ ಪಡೆದಿತ್ತು. International Federation of Film Critiscs (FIPRESCI) ವತಿಯಿಂದ ಭಾರತದ ಶ್ರೇಷ್ಠ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಿನಿಮಾ ಇದೀಗ ನೂತನ ಪಟ್ಟಿಯಲ್ಲಿ ಮತ್ತೆ ತನ್ನ ಸ್ಥಾನ ಕಾಯ್ದುಕೊಂಡಿದೆ.

ಸಿನಿಮಾ ವಿಮರ್ಶಕಿ Zacharak ನೂರು ಶ್ರೇಷ್ಠ ಸಿನಿಮಾಗಳನ್ನು ಆಯ್ಕೆ ಮಾಡಲು ಅನುಸರಿಸಿದ ಮಾನದಂಡ ಯಾವುದು? ‘ಈ ಸಿನಿಮಾಗಳನ್ನು ಆಯ್ಕೆ ಮಾಡಲು ನಾನು ದಶಕಗಳ ಕಾಲ ಕೆಲಸ ಮಾಡಿದ್ದೇನೆ. ಕಲೆಗಾರಿಕೆ ಮತ್ತು ಜೀವನಪ್ರೀತಿಯನ್ನು ಬೆಸೆದಿರುವ ಸಿನಿಮಾಗಳಿವು. ಕಲಾವಿದರ ನಟನೆಯೂ ಅದ್ಭುತ. ಹೀಗೆ, ವಿವಿಧ ಕಾರಣಗಳಿಗಾಗಿ ಈ ಸಿನಿಮಾಗಳು ನನ್ನನ್ನು ಆಳವಾಗಿ ಪ್ರಭಾವಿಸಿವೆ’ ಎನ್ನುತ್ತಾರವರು. ಅವರು ಈ ಪಟ್ಟಿಯಲ್ಲಿ ಸಿನಿಮಾಗಳಿಗೆ ಶ್ರೇಯಾಂಕವನ್ನು ಕೊಟ್ಟಿಲ್ಲ, ಕಾಲಾನುಕ್ರಮದಲ್ಲಿ ದಾಖಲು ಮಾಡಿದ್ದಾರೆ. ಕ್ಲಾಸಿಕ್‌ ಸಿನಿಮಾಗಳೆಂದು ಕರೆಸಿಕೊಂಡ Thieves, Breathless, Gone with the Wind, Seven Samurai, Taxi Driver, The Godfather Part II ಈ ಪಟ್ಟಿಯಲ್ಲಿವೆ. ಬ್ಲಾಕ್‌ ಬಸ್ಟರ್‌ ಸಿನಿಮಾಗಳಾದ ET the Extra-Terrestrial ಮತ್ತು The Empire Strikes Back, Wong Kar-wai ನಿರ್ದೇಶನದ In the Mood for Love ಮತ್ತು Chungking Express ಸಿನಿಮಾಗಳು ಶ್ರೇಷ್ಠ ಸಿನಿಮಾಗಳ ಪಟ್ಟಿಯಲ್ಲಿವೆ. Once Upon a Time in Hollywood ಮತ್ತು Little Women ಪಟ್ಟಿಯಲ್ಲಿರುವ ಇತ್ತೀಚಿನ ಸಿನಿಮಾಗಳು.

LEAVE A REPLY

Connect with

Please enter your comment!
Please enter your name here