ಆತೀಶ್‌ ಕಪಾಡಿಯಾ ನಿರ್ದೇಸನದ ‘ಖಿಚಡಿ 2’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಹಿಂದೆ ತೆರೆಕಂಡ ‘ಖಿಚಡಿ’ ಸಿನಿಮಾದ ಮುಂದುವರಿದ ಭಾಗವಿದು. ಹತ್ತಾರು ಹಾಸ್ಯ ನಟ, ನಟಿಯರು ಅಭಿನಯಿಸಿರುವ ಸಿನಿಮಾ ನವೆಂಬರ್‌ 17, 2023ರಂದು ತೆರೆಕಾಣಲಿದೆ.

ಪಾಠಕ್, ಜಮ್ನಾದಾಸ್ ಮಜೇಥಿಯಾ (ಜೆಡಿ), ರಾಜೀವ್ ಮೆಹ್ತಾ, ಅನಂಗ್ ದೇಸಾಯಿ ಮತ್ತು ವಂದನಾ ಪಾಠಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಖಿಚಡಿ 2’ ಹಿಂದಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಕೌಟುಂಬಿಕ ಹಾಸ್ಯ ಚಲನಚಿತ್ರವನ್ನು ಆತಿಶ್ ಕಪಾಡಿಯಾ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಟ್ರೇಲರ್‌ನಲ್ಲಿ ಪ್ರಫುಲ್ (ರಾಜೀವ್ ಮೆಹ್ತಾ) ಚಕ್ರವರ್ತಿಯಾಗಿ ಕಾಣಿಸಿಕೊಂಡಿದ್ದು, ಅವರ ಗಡ್ಡ, ಮೀಸೆ, ವೇಷಭೂಷಣ ಒಂದು ಆಕರ್ಷಣೆಯಾಗಿದೆ. ಜಗತ್ತನ್ನು ಉಳಿಸುವ ಕಾರ್ಯಾಚರಣೆಯೇ ಸಿನಿಮಾದ ಕಥಾಹಂದರ. ವಿಶ್ವವನ್ನು ಉಳಿಸುವ ಕಾರ್ಯಾಚರಣೆಯಲ್ಲಿ ನಗರ, ಕಡಲತೀರ, ಹಿಮಾವೃತ ಪರ್ವತ, ಮರುಭೂಮಿ, ಗುಹೆ ಮುಂತಾದವುಗಳ ನಡುವೆ ಕಥೆ ಸಾಗುತ್ತದೆ. ಸಿನಿಮಾದಲ್ಲಿ ಅನಂತ್ ವಿಧಾತ್, ಪ್ರತೀಕ್ ಗಾಂಧಿ, ಪರೇಶ್ ಗಣತ್ರಾ, ಕಿಕು ಶಾರದಾ, ಫ್ಲೋರಾ ಸೈನಿ ಮತ್ತು ರೆಯಾನ್ಶ್ ವೀರ್ ಚಡ್ಡಾ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ತೆರೆಕಂಡ ‘ಖಿಚಡಿ’ ಸಿನಿಮಾದ ಮುಂದುವರಿದ ಭಾಗವಿದು. ಈ ಚಿತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿರುವ ಕೀರ್ತಿ ಕುಲ್ಹಾರಿ, 2010ರಲ್ಲಿ ಬಿಡುಗಡೆಯಾದ ‘ಖಿಚಡಿ’ ಚಿತ್ರದಲ್ಲಿ ‘ಪರ್ಮಿಂದರ್’ ಪಾತ್ರ ನಿರ್ವಹಿಸಿದ್ದರು. ಅದೇ ಪಾತ್ರ ಈಗ ಪುನರಾವರ್ತನೆಯಾಗಿದೆ. ಚಲನಚಿತ್ರ ನಿರ್ಮಾಪಕಿ ಮತ್ತು ನೃತ್ಯ ಸಂಯೋಜಕಿ ಫರ್ಹಾ ಖಾನ್ ಚಿತ್ರದಲ್ಲಿ ಡಾನ್ ಆಗಿ ಕಾಣಿಸಿಕೊಂಡಿದ್ದಾರೆ! Hats Off Productions Ltd ಚಿತ್ರ ನಿರ್ಮಿಸಿದೆ. ‘ಖಿಚಡಿ 2’ ನವೆಂಬರ್‌ 17 ರಂದು ಚಿತ್ರಮಂದಿರಗಳಿಗೆ ಬರಲಿದೆ.

LEAVE A REPLY

Connect with

Please enter your comment!
Please enter your name here