2022ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘‌KGF2’ ಪ್ರಚಾರಕಾರ್ಯ ಶುರುವಾಗಿದೆ. ಇದೇ 21ರಂದು ಚಿತ್ರದ ‘ತೂಫಾನ್‌’ ಲಿರಿಕಲ್‌ ಸಾಂಗ್‌ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಪ್ರಶಾಂತ್‌ ನೀಲ್‌ ಟ್ವೀಟ್‌ ಮಾಡಿದ್ದಾರೆ.

ಯಶ್‌ ಅಭಿನಯದ ‘‌KGF2’ ಸಿನಿಮಾ ಸದ್ದು ಮಾಡುತ್ತಿದೆ. ಏಪ್ರಿಲ್‌ 14ರಂದು ಸಿನಿಮಾ ತರೆಕಾಣಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಪ್ರಚಾರ ಕಾರ್ಯ ಶುರುವಾಗಿದೆ. ಚಿತ್ರದ ಪ್ರೊಮೋಷನ್‌ ಅಂಗವಾಗಿ ‘ತೂಫಾನ್‌’ ಲಿರಿಕಲ್‌ ಸಾಂಗ್‌ ಇದೇ 21ರಂದು ಬಿಡುಗಡೆಯಾಗಲಿದೆ. ನಿರ್ದೇಶಕ ಪ್ರಶಾಂತ್‌ ನೀಲ್‌, “Get Ready! #Toofan is coming” ಎಂದು ಪೋಸ್ಟರ್‌ ಟ್ವೀಟ್‌ ಮಾಡಿದ್ದಾರೆ. ಕಳೆದ ವರ್ಷ ಯಶ್‌ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿದ್ದ ಚಿತ್ರದ ಟೀಸರ್‌ ಎಲ್ಲರನ್ನೂ ಆಕರ್ಷಿಸಿತ್ತು. ಅದಾದ ನಂತರ ಸಿನಿಮಾ ಸುದ್ದಿಯಾಗಿರಲಿಲ್ಲ. ಈಗ ಸಾಂಗ್‌ ಬಿಡುಗಡೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಚಾರ ಜೋರಾಗಲಿದೆ. ರವಿ ಬಸ್ರೂರು ಸಂಗೀತ ಸಂಯೋಜನೆಯ ಹಾಡು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬರಲಿದೆ. ಸಾಂಗ್‌ ನಂತರ ಮಾರ್ಚ್‌ 27ರಂದು ಚಿತ್ರದ ಟ್ರೈಲರ್‌ ಬಿಡುಗಡೆಯಾಗಲಿದೆ. ‘RRR’ ಸಿನಿಮಾದ ಭರಾಟೆ ಮುಗಿಯುತ್ತಿದ್ದಂತೆ ‘KGF 2’ ಸದ್ದು ಶುರುವಾಗಲಿದೆ.

Previous article‘ಹೀರೋಪಂಥಿ 2’ ಟ್ರೈಲರ್‌ | ಟೈಗರ್‌ ಶ್ರಾಫ್‌ – ನವಾಜುದ್ದೀನ್‌ ಸಿದ್ದಿಕಿ ಆಕ್ಷನ್‌ ಸಿನಿಮಾ
Next articleಗ್ರಾಮೀಣ ಬದುಕಿನ ವಸ್ತುಸ್ಥಿತಿ ‘ಕಡೈಸಿ ವಿವಸಾಯಿ’

LEAVE A REPLY

Connect withPlease enter your comment!
Please enter your name here