ಅಹ್ಮದ್‌ ಖಾನ್‌ ನಿರ್ದೇಶನದಲ್ಲಿ ಟೈಗರ್‌ ಶ್ರಾಫ್‌ ನಟಿಸಿರುವ ‘ಹೀರೋಪಂಥಿ 2’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನವಾಜುದ್ದೀನ್‌ ಸಿದ್ದಿಕಿ ಖಳ ಪಾತ್ರದಲ್ಲಿರುವ ಸಿನಿಮಾ ಏಪ್ರಿಲ್‌ 29ರಂದು ತೆರೆಕಾಣಲಿದೆ.

ನಿರೀಕ್ಷೆಯಂತೆ ‘ಹೀರೋಪಂಥಿ 2’ ಹಿಂದಿ ಚಿತ್ರದ ಟ್ರೈಲರ್‌ನಲ್ಲಿ ಭರ್ಜರಿ ಆಕ್ಷನ್‌ ಸೀನ್‌ಗಳಿವೆ. ಹೀರೋ (ಬಬ್ಲೂ) ಟೈಗರ್‌ ಶ್ರಾಫ್‌ ಕಟ್ಟುಮಸ್ತಾದ ದೇಹ ಪ್ರದರ್ಶನ, ಸ್ಟಂಟ್‌ಗಳ ಜೊತೆ ವಿಲಕ್ಷಣದ ವ್ಯಕ್ತಿತ್ವದ ಖಳಪಾತ್ರದಲ್ಲಿ ನವಾಜುದ್ದೀನ್‌ ಸಿದ್ದಿಕಿ ಕಾಣಿಸಿಕೊಂಡಿದ್ದಾರೆ. ಜನರನ್ನು ಕೊಲ್ಲುವುದರಲ್ಲಿ ಖುಷಿ ಕಾಣುವ ‘ಮ್ಯಾಜಿಕಲ್‌ ಲೈಲಾ’ ಪಾತ್ರದಲ್ಲಿದ್ದಾರೆ ಸಿದ್ದಿಕಿ. ಹಿರೋಯಿನ್‌ ತಾರಾ ಸುತಾರಿಯಾ ಜೊತೆಗಿನ ಟೈಗರ್‌ ಶ್ರಾಫ್‌ ರೊಮ್ಯಾನ್ಸ್‌ಗೂ ಟ್ರೈಲರ್‌ನಲ್ಲಿ ಜಾಗ ಸಿಕ್ಕಿದೆ. ‘ಹೀರೋಪಂಥಿ’ (2014) ಚಿತ್ರದಂತೆ ಇಲ್ಲಿಯೂ ಭರಪೂರ ಆಕ್ಷನ್‌, ಥ್ರಿಲ್ಲಿಂಗ್‌ ಸನ್ನಿವೇಶಗಳು ಇರಲಿವೆ. ವಿದೇಶಗಳ ಸುಂದರ ಲೊಕೇಲ್‌ಗಳಲ್ಲಿ ಸಿನಿಮಾ ಚಿತ್ರಿಸಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೈಲರ್‌ ಶೇರ್‌ ಮಾಡಿರುವ ಹೀರೋ ಟೈಗರ್‌ ಶ್ರಾಫ್‌, “Babloo dhundne se nahi…Qismat se milta hain.. Double the action, double the drama, double the entertainment, double the Heropanti Aur aapki qismat hain achi kyuki aarha hoon mai milne aapse iss Eid.” ಎಂದು ಬರೆದಿದ್ದಾರೆ. ಏಪ್ರಿಲ್‌ 29ರಂದು ಸಿನಿಮಾ ತೆರೆಕಾಣಲಿದೆ. ಸಾಜಿದ್‌ ನಾಡಿಯಾವಾಲಾ ನಿರ್ಮಾಣದ ಚಿತ್ರಕ್ಕೆ ಎ.ಆರ್‌.ರೆಹಮಾನ್‌ ಸಂಗೀತ ಸಂಯೋಜನೆಯಿದೆ.

LEAVE A REPLY

Connect with

Please enter your comment!
Please enter your name here