ಉಪೇಂದ್ರ ದ್ವಿಪಾತ್ರದಲ್ಲಿ ನಟಿಸಿರುವ ಸಿನಿಮಾ ಸೆಪ್ಟೆಂಬರ್‌ 15ರಂದು ತೆರೆಕಾಣಲಿದೆ. 2008ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ‘ಬುದ್ಧಿವಂತ’ ಚಿತ್ರದ ಮುಂದುವರೆದ ಅವತರಣಿಕೆಯಿದು ಎನ್ನುತ್ತಾರೆ ಚಿತ್ರದ ನಿರ್ದೇಶಕ ಜಯರಾಂ ಮಾಧವನ್‌. ಸೊನಾಲ್‌ ಮೊಂಟೆರೊ ಮತ್ತು ಮೇಘನಾ ರಾಜ್‌ ಚಿತ್ರದ ಇಬ್ಬರು ನಾಯಕಿಯರು.

ಉಪೇಂದ್ರ ದ್ವಿಪಾತ್ರದಲ್ಲಿ ನಟಿಸಿರುವ ‘ಬುದ್ಧಿವಂತ 2’ ಸಿನಿಮಾದ ಚಿತ್ರೀಕರಣ ಸ್ಥಗಿತಗೊಂಡಿದೆ ಎಂದೆಲ್ಲಾ ಸುದ್ದಿಯಾಗಿತ್ತು. ಸುದೀರ್ಘ ಅವಧಿಯವರೆಗೆ ಚಿತ್ರೀಕರಣಗೊಂಡ ಸಿನಿಮಾದ ಬಗ್ಗೆ ಮಾಹಿತಿಯೂ ಇರಲಿಲ್ಲ. ಹೀರೋ ಉಪೇಂದ್ರ ಅವರೂ ಚಿತ್ರದ ಬಗ್ಗೆ ಮಾತನಾಡುತ್ತಿರಲಿಲ್ಲ. ಆದರೆ ಮೊನ್ನೆ ವಿಶಿಷ್ಟ ಪೋಸ್ಟರ್‌ ಮೂಲಕ ಚಿತ್ರ ಮತ್ತೆ ಸುದ್ದಿಗೆ ಬಂದಿತು. ಇಂದು ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸೆಪ್ಟೆಂಬರ್‌ 18ರಂದು ಉಪೇಂದ್ರರ ಬರ್ತ್‌ಡೇ. ಅವರ ಹುಟ್ಟುಹಬ್ಬದ ಸಂದರ್ಭಕ್ಕೆ ಸರಿಯಾಗಿ ಸೆಪ್ಟೆಂಬರ್‌ 15ರಂದು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ನಿರ್ಮಾಪಕರು. ಜಯರಾಂ ಮಾಧವನ್‌ ನಿರ್ದೇಶನದ ಚಿತ್ರದಲ್ಲಿ ಸೊನಾಲ್‌ ಮೊಂಟೆರೊ ಮತ್ತು ಮೇಘನಾ ರಾಜ್‌ ನಾಯಕಿರಾಗಿ ನಟಿಸಿದ್ದಾರೆ.

2008ರಲ್ಲಿ ತೆರೆಕಂಡ ಉಪೇಂದ್ರರ ‘ಬುದ್ಧಿವಂತ’ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಇದು ‘ನಾನ್‌ ಅವನಿಲ್ಲೈ’ ತಮಿಳು ಚಿತ್ರದ ರೀಮೇಕ್‌. ‘ಬುದ್ಧಿವಂತ 2’ ಈ ಸಿನಿಮಾದ ಸೀಕ್ವೆಲ್‌ ಎನ್ನುತ್ತಾರೆ ಚಿತ್ರದ ನಿರ್ದೇಶಕ ಜಯರಾಂ. ‘ಬುದ್ಧಿವಂತ’ ಚಿತ್ರದಲ್ಲಿ ಐವರು ನಾಯಕಿಯರಿದ್ದರೆ ಸೀಕ್ವೆಲ್‌ನಲ್ಲಿ ಇಬ್ಬರು ನಾಯಕಿಯರಿದ್ದಾರೆ. ಸೀಕ್ವೆಲ್‌ಗೆ ‘The Showcase of mind game’ ಎನ್ನುವ ಟ್ಯಾಗ್‌ಲೈನ್‌ ಇದ್ದು, ಉಪೇಂದ್ರರ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ನಟ ಶ್ರೀನಗರ ಕಿಟ್ಟಿ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಯಶಸ್ವೀ ಚಿತ್ರಗಳನ್ನು ನಿರ್ಮಿಸಿರುವ ಡಾ ಟಿ ಆರ್‌ ಚಂದ್ರಶೇಖರ್‌ ಅವರು ತಮ್ಮ ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಡಿ ‘ಬುದ್ಧಿವಂತ 2’ ಚಿತ್ರ ನಿರ್ಮಿಸಿದ್ದಾರೆ. ಗುರುಕಿರಣ್ ಸಂಗೀತ, ಎಸ್ ನವೀನ್ ಕುಮಾರ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ರವಿವರ್ಮ, ವಿಕ್ರಮ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

Previous article‘ದಿ ಗುಡ್ ವೈಫ್’ ದೇಸೀ ಆವೃತ್ತಿ | ಕಾಜೋಲ್ ನಟನೆಯಿಂದಾಗಿ ಗುಡ್ ಎನಿಸಿದ ‘ದಿ ಟ್ರಯಲ್’
Next articleಸೆಟ್ಟೇರಿದ ‘ವೃಷಭ’ ಸಿನಿಮಾ | ಕನ್ನಡಿಗ ನಂದಕಿಶೋರ್‌ ನಿರ್ದೇಶನದಲ್ಲಿ ಮೋಹನ್‌ ಲಾಲ್‌

LEAVE A REPLY

Connect with

Please enter your comment!
Please enter your name here