ನಂದಕಿಶೋರ್‌ ನಿರ್ದೇಶನದಲ್ಲಿ ಮೋಹನ್‌ ಲಾಲ್‌ ನಟಿಸುತ್ತಿರುವ ‘ವೃಷಭ’ PAN ಇಂಡಿಯಾ ಸಿನಿಮಾಗೆ ಚಾಲನೆ ಸಿಕ್ಕಿದೆ. ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ, ರೋಷನ್‌ ಮೇಕಾ, ಶನಾಯ ಕಪೂರ್‌, ಶ್ರೀಕಾಂತ್‌ ಮೇಕಾ, ಝರಾ ಖಾನ್‌ ಚಿತ್ರ ಇತರೆ ಪ್ರಮುಖ ಕಲಾವಿದರು. ಮುಂದಿನ ವರ್ಷ ಮೂಲ ಮಲಯಾಳಂ ಸೇರಿದಂತೆ ಕನ್ನಡ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

ಮೋಹನ್‌ಲಾಲ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ವೃಷಭ’ ಸಿನಿಮಾ ಸೆಟ್ಟೇರಿದೆ. ವಿಕ್ಟರಿ, ಅಧ್ಯಕ್ಷ, ರನ್ನ.. ಯಶಸ್ವೀ ಕನ್ನಡ ಸಿನಿಮಾಗಳ ನಿರ್ದೇಶಕ ನಂದಕಿಶೋರ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಟ ಮೋಹನ್‌ಲಾಲ್‌ ಸಿನಿಮಾ ಮುಹೂರ್ತದ ಫೋಟೊಗಳನ್ನು ಹಂಚಿಕೊಂಡು, ‘ಚಿತ್ರೀಕರಣ ಪ್ರಾರಂಭವಾಗಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದದ ನಿರೀಕ್ಷೆಯಲ್ಲಿದ್ದೇವೆ’ ಎಂದು ಟ್ವೀಟ್‌ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ. ‘ಕಂದಹಾರ್‌’ ಮಲಯಾಳಂ ಚಿತ್ರದ ನಂತರ ಎರಡನೇ ಬಾರಿ ಮೋಹನ್‌ ಲಾಲ್‌ ಅವರೊಂದಿಗೆ ರಾಗಿಣಿ ಅಭಿನಯಿಸುತ್ತಿದ್ದಾರೆ.

ಬಜೆಟ್‌ ಮತ್ತು ತಾರಾಬಳಗದ ದೃಷ್ಟಿಯಿಂದ ‘ವೃಷಭ’ ದೊಡ್ಡ ಕ್ಯಾನ್ವಾಸ್‌ನ ಸಿನಿಮಾ ಆಗಲಿದೆ. ಇದು ತಂದೆ – ಮಗನ ಬಾಂಧವ್ಯದ ಕತೆ, ಆಕ್ಷನ್‌ – ಎಂಟರ್‌ಟೇನರ್‌ ಎನ್ನಲಾಗಿದ್ದು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ. ರೋಷನ್ ಮೇಕಾ, ಶನಾಯ ಕಪೂರ್, ಝಾರಾ ಖಾನ್, ಶ್ರೀಕಾಂತ್ ಮೇಕಾ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಬಾಲಾಜಿ ಟೆಲಿಫಿಲಂಸ್ ಮತ್ತು ಕನೆಕ್ಟ್ ಮೀಡಿಯಾ, ಎವಿಸ್ ಸ್ಟುಡಿಯೋದ ಸಹಯೋಗದೊಂದಿಗೆ ಏಕ್ತಾ ಕಪೂರ್, ಶೋಭಾ ಕಪೂರ್, ಅಭಿಷೇಕ್ ವ್ಯಾಸ್, ವಿಶಾಲ್ ಗುರ್ನಾನಿ, ಜೂಹಿ ಪಾರೇಖ್ ಮೆಹ್ತಾ, ಶ್ಯಾಮಸುಂದರ್, ವರುಣ್ ಮಾಥುರ್ ಮತ್ತು ಸೌರಭ್ ಮಿಶ್ರಾ ಜೊತೆಯಾಗಿ ಚಿತ್ರ ನಿರ್ಮಿಸುತ್ತಿದ್ದಾರೆ. ಮುಂದಿನ ವರ್ಷ ಮೂಲ ಮಲಯಾಳಂ ಸೇರಿದಂತೆ ಕನ್ನಡ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

Previous article‘ಬುದ್ಧಿವಂತ 2’ ಸೆಪ್ಟೆಂಬರ್‌ 15ಕ್ಕೆ ತೆರೆಗೆ | ಉಪೇಂದ್ರ ದ್ವಿಪಾತ್ರದಲ್ಲಿ ನಟಿಸಿರುವ ಸಿನಿಮಾ
Next article‘Bro’ ಟ್ರೈಲರ್‌ | ಪವನ್‌ ಕಲ್ಯಾಣ್‌ – ಸಾಯಿ ಧರಮ್‌ ತೆಲುಗು ಸಿನಿಮಾ 28ರಂದು ತೆರೆಗೆ

LEAVE A REPLY

Connect with

Please enter your comment!
Please enter your name here