ಸುಜಯ್‌ ಕೆ. ಹರಿ ನಿರ್ದೇಶನದಲ್ಲಿ ಉಪೇಂದ್ರ ಮತ್ತು ವೇದಿಕಾ ನಟಿಸಿರುವ ‘ಹೋಮ್‌ ಮಿನಿಸ್ಟರ್‌’ ಸಿನಿಮಾ ಏಪ್ರಿಲ್‌ 1ರಂದು ತೆರೆಕಾಣಲಿದೆ. ತೆಲುಗು ಮೂಲದ ಪೂರ್ಣಚಂದ್ರ ನಾಯ್ಡು ಮತ್ತು ಶ್ರೀಕಾಂತ್ ವೀರಮಾಚನೆನಿ ನಿರ್ಮಾಣದ ಚಿತ್ರಕ್ಕೆ ಜಿಬ್ರಾನ್‌ ಸಂಗೀತ ಸಂಯೋಜಿಸಿದ್ದಾರೆ.

ಕೋವಿಡ್‌ನಿಂದಾಗಿ ಬಿಡುಗಡೆ ವಿಳಂಬವಾಗಿದ್ದ ಚಿತ್ರಗಳ ಪಟ್ಟಿಯಲ್ಲಿ ‘ಹೋಮ್‌ ಮಿನಿಸ್ಟರ್‌’ ಕೂಡ ಇತ್ತು. ಇದೀಗ ಏಪ್ರಿಲ್‌ 1ರಂದು ಸಿನಿಮಾದ ಬಿಡುಗಡೆ ಫಿಕ್ಸ್‌ ಆಗಿದ್ದು, ರಾಜ್ಯದ 350ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಸಿನಿಮಾ ತೆರೆಕಾಣಲಿದೆ. ಬಿಡುಗಡೆ ದಿನಾಂಕ ಘೋಷಿಸಲು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನಟ ಉಪೇಂದ್ರ ಬಿಡುಗಡೆ ದಿನಾಂಕವುಳ್ಳ ಪೋಸ್ಟರನ್ನು ಅನಾವರಣಗೊಳಿಸಿದರು. “ಇದು ನಾನು ಈವರೆಗೂ ಮಾಡಿರದ ಪಾತ್ರ. ಇಲ್ಲಿನ ನಿರ್ಮಾಪಕರು ‌ಬೇರೆ ಕಡೆ ಹೋಗಿ ಚಿತ್ರ ನಿರ್ಮಾಣ ಮಾಡುತ್ತಾರೆ. ಆದರೆ ತೆಲುಗಿನ ನಿರ್ಮಾಪಕರು ಕನ್ನಡದ ಮೇಲಿನ ಅಭಿಮಾನದಿಂದ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.‌ ಇನ್ನೂ ನೂರು ಜನ ತೆಲುಗಿನ ನಿರ್ಮಾಪಕರು ಬಂದು ಕನ್ನಡ ಚಿತ್ರ ನಿರ್ಮಾಣ ಮಾಡಬೇಕು” ಎಂದು ನಟ ಉಪೇಂದ್ರ ಆಶಿಸಿದರು.

ಚಿತ್ರದ ನಾಯಕನಟಿ ವೇದಿಕಾ ಮಾತನಾಡಿ, “ನನಗೆ ಬಹಳ ದಿನಗಳ ನಂತರ ನಿಮ್ಮ ಮುಂದೆ ಮಾತನಾಡಲು ಖುಷಿಯಾಗುತ್ತಿದೆ. ಉಪೇಂದ್ರ ಅವರ ಜೊತೆ ನಟಿಸಿರುವುದು ಖುಷಿ ತಂದಿದೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ನಾನು ಜರ್ನಲಿಸ್ಟ್ ಪಾತ್ರ ನಿರ್ವಹಣೆ ಮಾಡಿದ್ದೇನೆ” ಎಂದರು. ನಿರ್ಮಾಪಕರಾದ ಪೂರ್ಣಚಂದ್ರ ನಾಯ್ಡು ಮತ್ತು ಶ್ರೀಕಾಂತ್ ವೀರಮಾಚನೆನಿ ಚಿತ್ರತಂಡಕ್ಕೆ ಧನ್ಯವಾದ ಶ್ರೇಯಾ ಚಿತ್ರ ಮೂಲಕ ಬೆಂಗಳೂರು ಕುಮಾರ್ ಫಿಲಂಸ್ ಸಂಸ್ಥೆ ‘ಹೋಮ್‌ ಮಿನಿಸ್ಟರ್‌’ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಜಯ್ ಕೆ ಶ್ರೀಹರಿ ನಿರ್ದೇಶನದ ಚಿತ್ರಕ್ಕೆ ಜಿಬ್ರಾನ್ ಸಂಗೀತ ನೀಡಿದ್ದಾರೆ. ಕುಂಟುನಿ ಎಸ್. ಕುಮಾರ್ ಛಾಯಾಗ್ರಹಣ, ಅಂಟೋನಿ ಸಂಕಲನ ಚಿತ್ರಕ್ಕಿದೆ. ಸುಮನ್ ರಂಗನಾಥ್, ತಾನ್ಯ ಹೋಪ್, ಸಾಧುಕೋಕಿಲ, ಅವಿನಾಶ್, ಮಾಳವಿಕ ಅವಿನಾಶ್, ಸುಧಾ ಬೆಳವಾಡಿ, ಶ್ರೀನಿವಾಸ ಮೂರ್ತಿ, ವಿಜಯ್ ಚಂಡೂರ್, ಬೇಬಿ ಆದ್ಯ ಇತರರು ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here