ಜನಪ್ರಿಯ ಪಾಪ್ ಗಾಯಕಿ, ಸಿನಿಮಾ ಹಿನ್ನೆಲೆಗಾಯಕಿ ಉಷಾ ಉತ್ತುಪ್ ಇಂದು (ನವೆಂಬರ್ 08) 74ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಿಜಯ ಖಡ್ಗ, ಸ್ವಾಮಿ, ಜವ, ಅಂಬಿ, ಕ್ಷಣ ಕ್ಷಣ, ಪರಿ, ಕಿರಣ್ ಬೇಡಿ ಸೇರಿದಂತೆ ಹಲವು ಕನ್ನಡ ಸಿನಿಮಾಗಳಿಗೆ ಹಾಡಿದ್ದಾರೆ.
* ಚೆನ್ನೈ ಮೂಲದ ಉಷಾ ಹುಟ್ಟಿದ್ದು ಮುಂಬಯಿಯಲ್ಲಿ. ಪ್ರಸ್ತುತ ನೆಲೆಸಿರುವುದು ಕೊಲ್ಕೊತ್ತಾದಲ್ಲಿ.
* ಶಾಲೆಯಲ್ಲಿ ಓದುತ್ತಿದ್ದಾಗ ಧ್ವನಿ ಚೆನ್ನಾಗಿಲ್ಲ ಎಂದು ಉಷಾರನ್ನು ಮ್ಯೂಸಿಕ್ ತರಗತಿಯಿಂದ ಹೊರಗೆ ಕಳುಹಿಸಲಾಗಿತ್ತಂತೆ!
* ಮೊದಲ ಸ್ಟೇಜ್ ಪರ್ಫಾರ್ಮೆನ್ಸ್ ಕೊಟ್ಟಾಗ ಉಷಾಗೆ 9 ವರ್ಷ.
* ನೈಟ್ ಕ್ಲಬ್‌ಗಳಲ್ಲಿ ಹಾಡುವ ಮೂಲಕ ಅವರ ಗಾಯನ ವೃತ್ತಿ ಆರಂಭವಾಗಿದ್ದು.
* ‘ಬಾಂಬೆ ಟಾಕಿ’ (1970) ಇಂಗ್ಲಿಷ್ ಚಿತ್ರಕ್ಕೆ ಎರಡು ಹಾಡು ಹಾಡುವ ಮೂಲಕ ಅವರ ಸಿನಿಮಾ ಗಾಯನಕ್ಕೆ ಚಾಲನೆ ಸಿಕ್ಕಿತು. ಶಂಕರ್-ಜೈಕಿಶನ್ ಸಂಗೀತ ಸಂಯೋಜಕರು.
* ‘ಸಂಘರ್ಷ’ (1977) ಕನ್ನಡ ಚಿತ್ರಕ್ಕೆ ಎರಡು ಇಂಗ್ಲಿಷ್ ಹಾಡು ರಚಿಸಿ ಹಾಡಿದ್ದಾರೆ. ಸಂಗೀತ ಸಂಯೋಜನೆ ವಿಜಯ ಭಾಸ್ಕರ್.
* ವಿಜಯ ಖಡ್ಗ, ಸ್ವಾಮಿ, ಜವ, ಅಂಬಿ, ಕ್ಷಣ ಕ್ಷಣ, ಪರಿ, ಕಿರಣ್ ಬೇಡಿ ಸೇರಿದಂತೆ ಹಲವು ಕನ್ನಡ ಸಿನಿಮಾಗಳಿಗೆ ಹಾಡಿದ್ದಾರೆ.
* ಹದಿನಾರು ಭಾರತೀಯ ಭಾಷೆಗಳಲ್ಲದೆ ಸ್ಪಾನಿಷ್, ಫ್ರೆಂಚ್, ಝುಲು, ಜರ್ಮನಿ, ರಷ್ಯನ್, ಉಕ್ರೇನಿಯನ್ ಹಾಡುಗಳಿಗೂ ದನಿಯಾಗಿದ್ದಾರೆ.
* ಪೋತನ್ ವಾವ (ಮಲಯಾಳಂ), ಬಾಂಬೆ ಟು ಗೋವಾ, 7 ಖೂನ್ ಮಾಫ್ ಹಿಂದಿ ಸಿನಿಮಾಗಳಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ.