ಭಾರತೀಯ ಸಿನಿಮಾದ ಖ್ಯಾತ ಚಿತ್ರನಿರ್ದೇಶಕ ಸತ್ಯಜಿತ್‌ ರೇ ಕೈಬರಹದ ‘ಘರೆ ಬೈರೆ’ ಬೆಂಗಾಲಿ ಸಿನಿಮಾ ಚಿತ್ರಕಥೆ ಪುಸ್ತಕ ರೂಪದಲ್ಲಿ ಬರುತ್ತಿದೆ. ಪಶ್ಚಿಮ ಬಂಗಾಳ ಸಿನಿಮಾ ಪತ್ರಕರ್ತರ ಸಂಘಟನೆಯ (WBFJA) ಯೋಜನೆಯಿದು.

ಆಸ್ಕರ್‌ ಪುರಸ್ಕೃತ ಭಾರತೀಯ ಚಿತ್ರನಿರ್ದೇಶಕ ಸತ್ಯಜಿತ್‌ ರೇ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಪಶ್ಚಿಮ ಬಂಗಾಳ ಸಿನಿಮಾ ಪತ್ರಕರ್ತರ ಸಂಘಟನೆ (WBFJA) ವಿಶೇಷ ಕೃತಿಯೊಂದನ್ನು ಹೊರತರುತ್ತಿದೆ. ‘ಘರೆ ಬೈರೆ’ ಸಿನಿಮಾಗೆ ಅವರು ರಚಿಸಿದ್ದ ಚಿತ್ರಕಥೆಯ ಮೂಲ ಪ್ರತಿ (ಕೈಬರಹದ ಪ್ರತಿ) ಪುಸ್ತಕ ರೂಪದಲ್ಲಿ ಪ್ರಕಟವಾಗಲಿದೆ. ಸತ್ಯಜಿತ್‌ ರೇ ಅವರ ಕುಟುಂಬದವರು ಕೈಬರಹದ ಪ್ರತಿಯನ್ನು ಒದಗಿಸಿದ್ಧಾರೆ. ಈ ಕೃತಿ ಜನವರಿ 16ರಂದು WBFJA ಪ್ರಶಸ್ತಿ ಸಮಾರಂಭದಲ್ಲಿ ಬಿಡುಗಡೆಯಾಗಬೇಕಿತ್ತು. ಕೋವಿಡ್‌ನಿಂದಾಗಿ ಈ ಸಮಾರಂಭ ರದ್ದಾಗಿದ್ದು ಕೃತಿ ಬಿಡುಗಡೆಗೆ ಬೇರೆ ದಿನಾಂಕ ನಿಗದಿ ಮಾಡಲಾಗುತ್ತಿದೆ. ‘ಘರೆ ಬೈರೆ’ ಸಿನಿಮಾ 1985ರಲ್ಲಿ ತೆರೆಕಂಡಿತ್ತು. ಭಾರತದ ಸ್ವಾತಂತ್ರ್ಯ ಹೋರಾಟ, ವಿದೇಶಿ ವಸ್ತುಗಳ ಬಹಿಷ್ಕಾರದ ಹಿನ್ನೆಲೆಯ ಕಥಾವಸ್ತು. ಸೌಮಿತ್ರ ಚಟರ್ಜಿ, ವಿಕ್ಟರ್‌ ಬ್ಯಾನರ್ಜಿ, ಸ್ವಾತಿಲೇಖ ಸೇನ್‌ಗುಪ್ತಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.

Previous articleರಾಟರ್‌ಡಾಮ್‌ ಫಿಲ್ಮ್‌ ಫೆಸ್ಟಿವಲ್‌ಗೆ ‘ಸೆಲ್ಯೂಟ್‌’; ದುಲ್ಕರ್‌ ಸಲ್ಮಾನ್‌ ಮಲಯಾಳಂ ಸಿನಿಮಾ
Next article‘ಊ ಅಂಟಾವಾ’ ಸಾಂಗ್‌; ಬಿಹೈಂಡ್‌ ದಿ ಸೀನ್ಸ್‌ ವೀಡಿಯೋ ಶೇರ್‌ ಮಾಡಿದ ನಟಿ ಸಮಂತಾ

LEAVE A REPLY

Connect with

Please enter your comment!
Please enter your name here